ಕೋವಿಡ್ 19: ದೇಶದ ಮರಣ ಪ್ರಮಾಣ ಶೇ. 1.76ಕ್ಕೆ ಇಳಿಕೆ, ಜಾಗತಿಕ ಕನಿಷ್ಠ

ಕೋವಿಡ್-19 ಸೋಂಕು ಪ್ರಕರಣ ಹೆಚ್ಚುತ್ತಿರುವ ಹೊರತಾಗಿಯೂ, ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್-19 ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೋವಿಡ್-19 ಸೋಂಕು ಪ್ರಕರಣ ಹೆಚ್ಚುತ್ತಿರುವ ಹೊರತಾಗಿಯೂ, ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್-19 ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ನ ಜಾಗತಿಕ ಮರಣ ಪ್ರಮಾಣ ದರ (ಸಿಎಫ್ಆರ್)ಶೇ.3.3ರಷ್ಟಿದ್ದರೆ, ಭಾರತದಲ್ಲಿ ಇದು ಕೇವಲ ಶೇ.1.76 ರಷ್ಟಿದೆ. ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಯ ಸಾವುಗಳು ವಿಶ್ವದ ಅತ್ಯಂತ ಕಡಿಮೆ ಪ್ರಮಾಣಗಳಲ್ಲಿ  ಒಂದಾಗಿದೆ. ಜಾಗತಿಕವಾಗಿ ಸರಾಸರಿ ಮಿಲಿಯನ್ ಜನಸಂಖ್ಯೆಗೆ 110 ಸಾವುಗಳಿದ್ದರೆ, ಭಾರತದಲ್ಲಿ ಮಿಲಿಯನ್ ಜನಸಂಖ್ಯೆಗೆ 48 ಸಾವುಗಳು ಮಾತ್ರ ವರದಿಯಾಗುತ್ತಿದೆ. 

ಬ್ರೆಜಿಲ್ ಮತ್ತು ಇಂಗ್ಲೆಂಡ್ ಗೆ ಭಾರತವನ್ನು ಹೋಲಿಕೆ ಮಾಡಿದರೆ ಆದೇಶಗಳಲ್ಲಿ 12 ರಿಂದ 13 ಪಟ್ಟು ಸಾವಿನ ಪ್ರಮಾಣ ಹೆಚ್ಚಾಗಿದೆ. ಕೋವಿಡ್ ನಿರ್ವಹಣೆ ಮತ್ತು ಪ್ರತಿಕ್ರಿಯೆ ನೀತಿಯ ಭಾಗವಾಗಿ, ಕೋವಿಡ್ ಸಂಬಂಧಿತ ಸಾವು-ನೋವುಗಳನ್ನು ಒಳಗೊಂಡಿರುವುದರ ಬಗ್ಗೆ ಮಾತ್ರವಲ್ಲ, ಸಾವುಗಳನ್ನು ಕಡಿಮೆ ಮಾಡಲು  ಮತ್ತು ಸೋಂಕಿತರಿಗೆ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ನೀಡುವ ಮೂಲಕ ಜೀವಗಳನ್ನು ಉಳಿಸಲು ಕೇಂದ್ರ ಸರ್ಕಾರ ತೀಕ್ಷ್ಣ ಗಮನ ಹರಿಸಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳ ಸಹಯೋಗದ ಪ್ರಯತ್ನಗಳು ದೇಶಾದ್ಯಂತ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸಲು ಕಾರಣವಾಗಿದ್ದು, 1,578 ಕೋವಿಡ್ ಆಸ್ಪತ್ರೆಗಳು ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿವೆ. ಮರಣ ಪ್ರಮಾಣ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಿರ್ಣಾಯಕ ರೋಗಿಗಳ  ಕ್ಲಿನಿಕಲ್ ನಿರ್ವಹಣೆಯಲ್ಲಿ ಐಸಿಯು ವೈದ್ಯರ ಸಾಮರ್ಥ್ಯವನ್ನು ಹೆಚ್ಚಿಸುವ ವಿಶಿಷ್ಟ ಉಪಕ್ರಮ, ವಾರದಲ್ಲಿ ಎರಡು ಬಾರಿ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಇ-ಐಸಿಯು ಅನ್ನು ದೆಹಲಿಯ ಏಮ್ಸ್ 2020 ಜುಲೈ 8 ರಿಂದ ಪ್ರಾರಂಭಿಸಿದೆ. ರಾಜ್ಯ ಆಸ್ಪತ್ರೆಗಳಲ್ಲಿ ಐಸಿಯುಗಳನ್ನು ನಿರ್ವಹಿಸುವ ವೈದ್ಯರಿಗೆ ಜ್ಞಾನ  ಮತ್ತು ಡೊಮೇನ್ ತಜ್ಞರು ಟೆಲಿ / ವಿಡಿಯೋ-ಸಮಾಲೋಚನಾ ಅವಧಿಗಳನ್ನು ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com