ಹಿ.ಪ್ರ: 22,222 ಅಡಿ ಎತ್ತರದ ಲಿಯೊ ಪಾರ್ಗಿಲ್ ಶಿಖರ ಏರಿ ಭಾರತದ ಕೀರ್ತಿ ಪತಾಕೆ ಮೆರೆದ ಐಟಿಬಿಪಿ ಪರ್ವತಾರೋಹಿಗಳು!

ಅಂತಾರಾಷ್ಟ್ರೀಯ ಗಡಿಯಲ್ಲಿರುವ ಸಮುದ್ರ ಮಟ್ಟದಿಂದ 22,222 ಅಡಿ ಎತ್ತರದಲ್ಲಿರುವ ಲಿಯೊ ಪಾರ್ಗಿಲ್ ಪರ್ವತವನ್ನು ಐಟಿಬಿಪಿ ಪರ್ವತಾರೋಹಿಗಳು ಏರಿ ಭಾರತದ ಬಾವುಟ ಹಾರಿಸಿ ದೇಶದ ಕೀರ್ತಿ ಪತಾಕೆ ಮೆರೆದಿದ್ದಾರೆ.
ಪರ್ವತಾರೋಹಿಗಳು
ಪರ್ವತಾರೋಹಿಗಳು

ಶಿಮ್ಲಾ: ಅಂತಾರಾಷ್ಟ್ರೀಯ ಗಡಿಯಲ್ಲಿರುವ ಸಮುದ್ರ ಮಟ್ಟದಿಂದ 22,222 ಅಡಿ ಎತ್ತರದಲ್ಲಿರುವ ಲಿಯೊ ಪಾರ್ಗಿಲ್ ಪರ್ವತವನ್ನು ಐಟಿಬಿಪಿ ಪರ್ವತಾರೋಹಿಗಳು ಏರಿ ಭಾರತದ ಬಾವುಟ ಹಾರಿಸಿ ದೇಶದ ಕೀರ್ತಿ ಪತಾಕೆ ಮೆರೆದಿದ್ದಾರೆ.

16 ಮಂದಿ ಪರ್ವತಾರೋಹಿಗಳ ತಂಡದಲ್ಲಿ 12 ಮಂದಿ ಪರ್ವತವನ್ನು ಏರಿದ್ದಾರೆ. ತಂಡದ ನಾಯಕತ್ವವನ್ನು ಉಪ ಕಮಾಂಡರ್ ಕುಲ್ದೀಪ್ ಸಿಂಗ್ ಮತ್ತು ಡೆಪ್ಯುಟಿ ಕಮಾಂಡೆಂಟ್ ಧರ್ಮೇಂದ್ರ ವಹಿಸಿದ್ದರು.ಇವರ ಜೊತೆ ಹೆಡ್ ಕಾನ್ಸ್ಟೇಬಲ್ ಪ್ರದೀಪ್ ನೆಗಿ ಎರಡನೇ ಬಾರಿ ಶಿಖರ ಏರಿದ್ದು ಇವರು ಈ ಹಿಂದೆ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ನ್ನು ಎರಡು ಬಾರಿ ಏರಿದ್ದರು.

ಈ ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ ಕೂಡ ತಂಡ ಎಲ್ಲಾ ಮುನ್ನೆಚ್ಚರಿಕೆ, ಸಿದ್ದತೆಗಳನ್ನು ಮಾಡಿಕೊಂಡು ಪರ್ವತ ಏರಿ ಸಾಧನೆ ಮೆರೆದಿದೆ.

ಲಿಯೊ ಪಾರ್ಗಿಲ್ ಶಿಖರ ಭಾರತದಲ್ಲಿ ಪರ್ವತಾರೋಹಿಗಳಿಗೆ ಹತ್ತಲು ಅತ್ಯಂತ ಕ್ಲಿಷ್ಟಕರವಾದ ಶಿಖರ ಎಂದು ಪರಿಗಣಿಸಲಾಗಿದೆ. ಹಿಮಾಚಲ ಪ್ರದೇಶದ ಲಹೌಲ್ ಸ್ಪಿಟಿ ಜಿಲ್ಲೆಯ ದೂರದ ಪ್ರದೇಶದಲ್ಲಿ ಹಿಮಾವೃತವಾಗಿರುವ ಶಿಖರದಲ್ಲಿ ಅತಿ ಕಡಿಮೆ ಆಮ್ಲಜನಕ, ಅತಿ ಶೀತ ಮತ್ತು ಅತಿ ಎತ್ತರವಾಗಿದೆ.

ಇಂಡೊ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ವಿಶ್ವದಲ್ಲಿಯೇ ಅತಿ ಕಷ್ಟಕರವಾದ ಸೇನೆಯ ಪಡೆಯಲಾಗಿದ್ದು ಇಲ್ಲಿನ ಯೋಧರು ಹಿಮಾಲಯದ ಅತಿ ಸಾಂದ್ರತೆ ಮತ್ತು ಅತಿ ಶೀತ ಪ್ರದೇಶದಲ್ಲಿ ಕೆಲಸ ಮಾಡಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com