ಲಡಾಖ್ ಸಂಘರ್ಷ: ಭಾರತ, ಚೀನಾ ನಡುವೆ ಮತ್ತೊಂದು ಸುತ್ತಿನ ಬ್ರಿಗೇಡ್ ಕಮಾಂಡರ್ ಮಟ್ಟದ ಮಾತುಕತೆ

ಪೂರ್ವ ಲಡಾಖ್‌ನ ಪಾಂಗೊಂಗ್ ಸರೋವರ ಪ್ರದೇಶದಲ್ಲಿ ಚೀನಾದ "ಪ್ರಚೋದನಕಾರಿ ಕ್ರಮಗಳ" ನಂತರ ಆ ಪ್ರದೇಶದ ಪರಿಸ್ಥಿತಿ ಬುಧವಾರ ಮತ್ತಷ್ಟು ಸೂಕ್ಷ್ಮವಾಗಿದ್ದು, ಉದ್ವಿಗ್ನತೆಯನ್ನು ನಿವಾರಿಸಲು ಎರಡೂ ಕಡೆಯ ಸೇನಾ ಕಮಾಂಡರ್‌ಗಳು ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಗಡಿಯಲ್ಲಿ ಸೈನಿಕರು ಕಾವಲು ಕಾಯುತ್ತಿರುವುದು
ಗಡಿಯಲ್ಲಿ ಸೈನಿಕರು ಕಾವಲು ಕಾಯುತ್ತಿರುವುದು

ನವದೆಹಲಿ: ಪೂರ್ವ ಲಡಾಖ್‌ನ ಪಾಂಗೊಂಗ್ ಸರೋವರ ಪ್ರದೇಶದಲ್ಲಿ ಚೀನಾದ "ಪ್ರಚೋದನಕಾರಿ ಕ್ರಮಗಳ" ನಂತರ ಆ ಪ್ರದೇಶದ ಪರಿಸ್ಥಿತಿ ಬುಧವಾರ ಮತ್ತಷ್ಟು ಸೂಕ್ಷ್ಮವಾಗಿದ್ದು, ಉದ್ವಿಗ್ನತೆಯನ್ನು ನಿವಾರಿಸಲು ಎರಡೂ ಕಡೆಯ ಸೇನಾ ಕಮಾಂಡರ್‌ಗಳು ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪಾಂಗೊಂಗ್ ಸರೋವರ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ತಗ್ಗಿಸುವ ಉದ್ದೇಶದಿಂದ ಉಭಯ ದೇಶಗಳ ಸೇನೆ ಚುಶುಲ್‌ನಲ್ಲಿ ಬ್ರಿಗೇಡ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಿದವು ಎಂದು ಅವರು ಹೇಳಿದ್ದಾರೆ.

ಸೋಮವಾರ ಮತ್ತು ಮಂಗಳವಾರ ಸಹ ಇದೇ ರೀತಿಯ ಮಾತುಕತೆ ನಡೆದಿದ್ದು, ಇಂದು ಆರು ಗಂಟೆಗಳ ಕಾಲ ಮಾತುಕತೆ ನಡೆದಿದೆ. ಆದರೆ ಮಾತುಕತೆ ಫಲಪ್ರದವಾಗಿಲ್ಲ.

ಮೂಲಗಳ ಪ್ರಕಾರ, ಭಾರತ ಕೆಲವು ದಿನಗಳಿಂದ ಪೂರ್ವ ಲಡಾಕ್‌ನ ಪ್ರಮುಖ ಬೆಟ್ಟದ ತುದಿಗಳು ಮತ್ತು ಸ್ಥಳಗಳನ್ನು ಆಕ್ರಮಿಸಿಕೊಳ್ಳುವ ಮೂಲಕ ತಾಂತ್ರಿಕೆ ಗೆಲುವು ಸಾಧಿಸಿದೆ.

ಆ.29-30 ರ ರಾತ್ರಿ ಭಾರತೀಯ ಸೇನೆ ಚೀನಾ ಸಿಬ್ಬಂದಿಗಳ ಚಲನವಲನಗಳನ್ನು ಗುರುತಿಸಿದ್ದು, ಲಡಾಕ್ ನ ಪ್ಯಾಂಗಾಂಗ್ ತ್ಸೋ ಲೇಕ್ ನ ಪೂರ್ವದಲ್ಲಿರುವ ಚುಶುಲ್ ನಲ್ಲಿ ಅತಿಕ್ರಮಣ ಮಾಡುವ ಚೀನಾ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com