ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು 2023ಕ್ಕೆ ಮೊದಲು ಜಾರಿಗೆ ತರಲು ಸಾಧ್ಯವಿಲ್ಲ:ಎನ್ ಸಿಇಆರ್ ಟಿ ನಿರ್ದೇಶಕ

ಹೊಸ ಶಿಕ್ಷಣ ನೀತಿ 2020 ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೊಸ ಪಠ್ಯನೀತಿ 2023-24ಕ್ಕೆ ಜಾರಿಗೆ ಬರಲು ಸಾಧ್ಯವಷ್ಟೆ ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್ ಸಿಇಆರ್ ಟಿ) ನಿರ್ದೇಶಕ ಹೃಷಿಕೇಶ ಸೇನಾಪತಿ ಹೇಳುತ್ತಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೊಸ ಶಿಕ್ಷಣ ನೀತಿ 2020 ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೊಸ ಪಠ್ಯನೀತಿ 2023-24ಕ್ಕೆ ಜಾರಿಗೆ ಬರಲು ಸಾಧ್ಯವಷ್ಟೆ ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್ ಸಿಇಆರ್ ಟಿ) ನಿರ್ದೇಶಕ ಹೃಷಿಕೇಶ ಸೇನಾಪತಿ ಹೇಳುತ್ತಾರೆ.

ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು(ಎನ್ ಸಿಎಫ್) ನ್ನು ಅಭಿವೃದ್ಧಿಪಡಿಸಲು ಒಂದು ವರ್ಷ ಬೇಕಾಗುತ್ತದೆ, ಮತ್ತೆರಡು ವರ್ಷ ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸಲು ಬೇಕು ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಮತ್ತು ಹಿರಿಯ ಪತ್ರಕರ್ತೆ ಕಾವೇರಿ ಬಮ್ಜೈ ಲೈವ್ ವೆಬ್ ಕಾಸ್ಟ್ ಮಾತುಕತೆಯಲ್ಲಿ ಹೇಳಿದ್ದಾರೆ.

ಹೊಸ ಪಠ್ಯಕ್ರಮವನ್ನು ಜಾರಿಗೆ ತರಲು ಸಾಮೂಹಿಕ ಪ್ರಯತ್ನ ಬೇಕಾಗುತ್ತದೆ. ನಾವು ಪಠ್ಯಪುಸ್ತಕವನ್ನು ಹಂತ ಹಂತವಾಗಿ ತಯಾರಿಸಿ ನಂತರ ಮೂರು ವರ್ಷಗಳಲ್ಲಿ ಜಾರಿಗೆ ತರಲಾಗುವುದು ಎಂದರು.

ನಮ್ಮ ಪಠ್ಯಕ್ರಮವನ್ನು ಸಿಬಿಎಸ್‌ಇ ಅಂಗಸಂಸ್ಥೆ ಶಾಲೆಗಳಲ್ಲಿ ಜಾರಿಗೆ ತರುವುದಿದ್ದರೂ, ಎನ್‌ಇಪಿಯನ್ನು ಎಲ್ಲಾ ರಾಜ್ಯಗಳು ಅಳವಡಿಸಿಕೊಳ್ಳುತ್ತವೆ, ಸ್ವಲ್ಪ ಮಾರ್ಪಾಡುಗಳೊಂದಿಗೆ ಎಲ್ಲಾ ರಾಜ್ಯಗಳ ಎಲ್ಲಾ ಶಿಕ್ಷಣ ಮಂತ್ರಿಗಳನ್ನು ಹೊಂದಿರುವ ಕೇಂದ್ರ ಸಲಹಾ ಮಂಡಳಿ (ಸಿಎಬಿಇ) ಪಠ್ಯಕ್ರಮವನ್ನು ಅನುಮೋದಿಸುತ್ತದೆ, ನಂತರ ಅದನ್ನು ರಾಜ್ಯಗಳು ಸ್ವೀಕರಿಸುತ್ತವೆ. ಹೊಸ ಶಿಕ್ಷಣ ನೀತಿಯಲ್ಲಿ ಆರಂಭದ ಬಾಲ್ಯಜೀವನ, ಶಾಲಾ ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ವಯಸ್ಕ ಶಿಕ್ಷಣ ಪಠ್ಯಕ್ರಮವನ್ನು ಹೊಂದಿರುತ್ತದೆ ಎಂದರು.

ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಅತ್ಯುತ್ತಮ ತರಬೇತಿ ಹೊಂದಿದ ಶಿಕ್ಷಕರು ಬೇಕಾಗುತ್ತದೆ. ಹಾಗಾದರೆ ಈ ಶಿಕ್ಷಕರಿಗೆ ತರಬೇತಿ ಕೊಡುವವರು ಯಾರು? ಕಳೆದ ಆಗಸ್ಟ್ 19 ರಿಂದ 42 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬೃಹತ್ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ ಮತ್ತು ಇಲ್ಲಿಯವರೆಗೆ 17.5 ಲಕ್ಷ ಶಿಕ್ಷಕರಿಗೆ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ತರಬೇತಿ ನೀಡಿದ್ದೇವೆ. ಹೆಚ್ಚಾಗಿ, ವಿದ್ಯಾರ್ಥಿಗಳಿಗೆ ಅನುಭವಿ ಶಿಕ್ಷಣವನ್ನು ನೀಡಲು ನಮ್ಮ ಶಿಕ್ಷಕರ ಅಗತ್ಯವಿದೆ. ಆನ್‌ಲೈನ್ ನಲ್ಲಿ ಈ ತರಬೇತಿ ನೀಡಲಾಗುತ್ತಿದೆ ಎಂದು ಹೃಷಿಕೇಶ ಸೇನಾಪತಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com