ಮೊಬೈಲ್ ಆ್ಯಪ್ ಗಳ ಮೇಲಿನ ಭಾರತದ ನಿಷೇಧ ಚೀನಾ ಹೂಡಿಕೆದಾರರ ಕಾನೂನು ಹಿತಾಸಕ್ತಿ ಉಲ್ಲಂಘಿಸುತ್ತದೆ: ಚೀನಾ

118 ಮೊಬೈಲ್ ಆ್ಯಪ್ ಗಳನ್ನು ನಿಷೇಧಿಸಿರುವ ಭಾರತದ ಕ್ರಮ ಚೀನಾದ ಹೂಡಿಕೆದಾರರು ಮತ್ತು ಸೇವಾ ಪೂರೈಕೆದಾರರ ಕಾನೂನು ಹಿತಾಸಕ್ತಿಗಳನ್ನು ಉಲ್ಲಂಘಿಸುತ್ತದೆ ಎಂದು ಚೀನಾ ಗುರುವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 118 ಮೊಬೈಲ್ ಆ್ಯಪ್ ಗಳನ್ನು ನಿಷೇಧಿಸಿರುವ ಭಾರತದ ಕ್ರಮ ಚೀನಾದ ಹೂಡಿಕೆದಾರರು ಮತ್ತು ಸೇವಾ ಪೂರೈಕೆದಾರರ ಕಾನೂನು ಹಿತಾಸಕ್ತಿಗಳನ್ನು ಉಲ್ಲಂಘಿಸುತ್ತದೆ ಎಂದು ಚೀನಾ ಗುರುವಾರ ಹೇಳಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಾಣಿಜ್ಯ ಸಚಿವಾಲಯದ ವಕ್ತಾರ ಗಾವೊ ಫೆಂಗ್ ಅವರು, ಆ್ಯಪ್ ನಿಷೇಧಕ್ಕೆ ಬೀಜಿಂಗ್ ತೀವ್ರ ಕಳವಳ ವ್ಯಕ್ತಪಡಿಸುತ್ತಿದೆ ಮತ್ತು ಚೀನಾದ ಮೊಬೈಲ್ ಅಪ್ಲಿಕೇಶನ್‌ಗಳ ನಿಷೇಧವನ್ನು ಬಲವಾಗಿ ವಿರೋಧಿಸುತ್ತದೆ ಎಂದಿದ್ದಾರೆ.

ಡೇಟಾ ಗೌಪ್ಯತೆ ಕಾಳಜಿ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ ಎಂದು ಉಲ್ಲೇಖಿಸಿ ಭಾರತ ನಿನ್ನೆ ಜನಪ್ರಿಯ ಗೇಮಿಂಗ್ ಆ್ಯಪ್ ಪಬ್ ಜಿ ಸೇರಿದಂತೆ ಚೀನಾ ನಂಟಿರುವ 118 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿದೆ.

ಲಡಾಖ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲೇ ಭಾರತ, ಚೀನಾ ನಂಟಿರುವ ಮತ್ತೆ 118 ಆ್ಯಪ್ ಗಳನ್ನು ನಿಷೇಧಿಸಿದೆ. ಇದರೊಂದಿಗೆ ಚೀನಾದ ನಿಷೇಧಿತ ಆ್ಯಪ್ ಗಳ ಸಂಖ್ಯೆ 224ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com