ಉತ್ತರ್ ಖಂಡ್: ಪರ್ವತ ಪ್ರದೇಶಗಳ ಕಿರುದಾರಿಯಲ್ಲಿ ಮೃತದೇಹ ಹೊತ್ತು 25 ಕಿ.ಮೀ. ನಡೆದ ಐಟಿಬಿಪಿ ಯೋಧರು!

ಇಂಡೊ- ಟಿಬಿಟನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಸ್ಥಳೀಯ ವ್ಯಕ್ತಿಯೊಬ್ಬರ ಮೃತದೇಹವನ್ನು ಹೊತ್ತುಕೊಂಡು  ಪರ್ವತ ಪ್ರದೇಶದಲ್ಲಿ ಸುಮಾರು 8 ಗಂಟೆಗಳ ಕಾಲ ಕಾಲ್ನಡಿಗೆ ಮೂಲಕ 25. ಕಿ ಮಿ. ದೂರ ಸಾಗಿ ಆತನ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.
ಶವವನ್ನು ಹೊತ್ತಿರುವ ಐಟಿಬಿಪಿ ಸಿಬ್ಬಂದಿ
ಶವವನ್ನು ಹೊತ್ತಿರುವ ಐಟಿಬಿಪಿ ಸಿಬ್ಬಂದಿ

ಉತ್ತರ ಖಂಡ್: ಇಂಡೊ- ಟಿಬಿಟನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಸ್ಥಳೀಯ ವ್ಯಕ್ತಿಯೊಬ್ಬರ ಮೃತದೇಹವನ್ನು ಹೊತ್ತುಕೊಂಡು  
ಪಿತೊರಾಘರ್ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ಸುಮಾರು 8 ಗಂಟೆಗಳ ಕಾಲ ಕಾಲ್ನಡಿಗೆ ಮೂಲಕ 25. ಕಿ ಮಿ. ದೂರ ಸಾಗಿ ಆತನ
ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

ಆಗಸ್ಟ್ 30 ರಂದು 30 ವರ್ಷದ  ಪೋನಿ ಆಪರೇಟರ್ ಒಬ್ಬರು ಮೃತಪಟ್ಟಿರುವ ಸುದ್ದಿ ತಿಳಿದ ಐಟಿಬಿಪಿಯ 14ನೇ ಬೆಟಾಲಿಯನ್ ಸಿಬ್ಬಂದಿ, ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ರಕ್ಷಿಸಿದ್ದಾರೆ.

ಐಟಿಬಿಪಿ ಸಿಬ್ಬಂದಿ ಸ್ಟ್ರೇಚರ್ ನಲ್ಲಿ  ಶವವನ್ನು ಹೊತ್ತುಕೊಂಡು ಬೆಳಗ್ಗೆ 11-30ಕ್ಕೆ ಕಾಲ್ನಡಿಗೆ ಆರಂಭಿಸಿ ಸಂಜೆ 7-30ರ ಸುಮಾರಿಗೆ ಮುನ್ಸ್ಯಾರಿ ಗ್ರಾಮವನ್ನು ತಲುಪಿದ್ದಾರೆ ಎಂದು ಐಟಿಬಿಪಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಎಂಟು ಮಂದಿ ಐಟಿಬಿಪಿ ಯೋಧರು  ಪರ್ವತ ಪ್ರದೇಶಗಳ  ಕಿರುದಾರಿಯಲ್ಲಿ ಮೃತದೇಹವನ್ನು ಹೊತ್ತು ಮಳೆ, ಭೂ ಕುಸಿತದ ನಡುವೆಯೂ 25 ಕಿ.ಮೀ ದೂರವನ್ನು  ಕಾಲ್ನಡಿಗೆಯಲ್ಲಿ 8 ಗಂಟೆಯಲ್ಲಿ  ಕ್ರಮಿಸಿದ್ದಾರೆ.ನಂತರ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದು, ಹುಟ್ಟೂರಾದ ಬಾಂಗಪಾಣಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com