ತೆಲಂಗಾಣ: ಮುಂಗಾರು ಅಧಿವೇಶನಕ್ಕೆ ಹಾಜರಾಗುವ ಎಲ್ಲಾ ಶಾಸಕ, ಪತ್ರಕರ್ತರಿಗೆ ಕೊರೋನಾ ಪರೀಕ್ಷೆ ಕಡ್ಡಾಯ

ಮುಂಗಾರು ಅಧಿವೇಶನಕ್ಕೆ ಹಾಜರಾಗುವ ಮೊದಲು ಎಲ್ಲಾ ಸಚಿವರು, ಶಾಸಕರು, ತೆಲಂಗಾಣ ಶಾಸಕಾಂಗ ಸಿಬ್ಬಂದಿ ಮತ್ತು ಪತ್ರಕರ್ತರು ಕಡ್ಡಾಯವಾಗಿ ಕೊವಿಡ್-19 ಪರೀಕ್ಷೆಗೆ ಒಳಗಾಗಬೇಕಾಗುತ್ತದೆ...
ತೆಲಂಗಾಣ ವಿಧಾನಸಭೆ
ತೆಲಂಗಾಣ ವಿಧಾನಸಭೆ

ಹೈದರಾಬಾದ್: ಮುಂಗಾರು ಅಧಿವೇಶನಕ್ಕೆ ಹಾಜರಾಗುವ ಮೊದಲು ಎಲ್ಲಾ ಸಚಿವರು, ಶಾಸಕರು, ತೆಲಂಗಾಣ ಶಾಸಕಾಂಗ ಸಿಬ್ಬಂದಿ ಮತ್ತು ಪತ್ರಕರ್ತರು ಕಡ್ಡಾಯವಾಗಿ ಕೊವಿಡ್-19 ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ತೆಲಂಗಾಣ ವಿಧಾನ ಪರಿಷತ್ ಅಧ್ಯಕ್ಷೆ ಗುಥಾ ಸುಖೇಂದರ್ ರೆಡ್ಡಿ ಮತ್ತು ವಿಧಾನಸಭಾ ಸ್ಪೀಕರ್ ಪೋಚರಾಮ್ ಶ್ರೀನಿವಾಸ್ ರೆಡ್ಡಿ ಅವರು ಶುಕ್ರವಾರ ತಿಳಿಸಿದ್ದಾರೆ.

ಸೆಪ್ಟೆಂಬರ್ 7 ರಿಂದ ಮುಂಗಾರು ಅಧಿವೇಶನ ಆರಂಭವಾಗಲಿದೆ. ಅಧಿವೇಶನಕ್ಕೆ ಹಾಜರಾಗುವವರಿಗೆ ಶುಕ್ರವಾರದಿಂದ ವಿಧಾನಸಭೆ ಆವರಣದಲ್ಲಿ ಕೊರೋನಾ ಪರೀಕ್ಷೆ ನಡೆಸಲಾಗುವುದ ಎಂದು ಅವರು ತಿಳಿಸಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವೇಮುಲಾ ಪ್ರಸಾಂತ್ ರೆಡ್ಡಿ ಅವರು, ವಿಧಾನಸಭೆ ಅಧಿವೇಶನ ನಡೆಸುವ ಸಂಬಂಧ ಸಂಸತ್ತು ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ ಎಂದಿದ್ದಾರೆ.
   
ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡರಲ್ಲೂ ಆರು ಅಡಿ ಅಂತರವನ್ನು ಕಾಯ್ದುಕೊಳ್ಳಲಾಗುವುದು. ಉಭಯ ಸದನಗಳಲ್ಲಿ ದೈಹಿಕ ಅಂತರವನ್ನು ಕಾಯ್ದುಕೊಳ್ಳಲು ವಿಧಾನಸಭೆಯಲ್ಲಿ 40 ಹೆಚ್ಚುವರಿ ಸ್ಥಾನಗಳು ಮತ್ತು ಪರಿಷತ್ತಿನಲ್ಲಿ ಎಂಟು ಹೆಚ್ಚುವರಿ ಸ್ಥಾನಗಳನ್ನು ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com