ಗಡಿ ಸಂಘರ್ಷ:ರಾಜನಾಥ್ ಸಿಂಗ್ ಜೊತೆ ಶಾಂಘೈ ಶೃಂಗಸಭೆ ಹೊರಗೆ ಮಾತುಕತೆ ನಡೆಸಲು ಚೀನಾ ರಕ್ಷಣಾ ಸಚಿವ ಒಲವು?

ರಷ್ಯಾದ ಮಾಸ್ಕೊದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘದ ಸಭೆಯ ಹೊರಗೆ ಚೀನಾದ ರಕ್ಷಣಾ ಸಚಿವ ವೈ ಫೆಂಗಿ, ಭಾರತ-ಚೀನಾ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಲು ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿದುಬಂದಿದೆ.

Published: 04th September 2020 09:15 AM  |   Last Updated: 04th September 2020 09:15 AM   |  A+A-


Rajanath Singh

ರಾಜನಾಥ್ ಸಿಂಗ್

Posted By : Sumana Upadhyaya
Source : PTI

ನವದೆಹಲಿ: ರಷ್ಯಾದ ಮಾಸ್ಕೊದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘದ ಸಭೆಯ ಹೊರಗೆ ಚೀನಾದ ರಕ್ಷಣಾ ಸಚಿವ ವೈ ಫೆಂಗಿ, ಭಾರತ-ಚೀನಾ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಲು ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಬಲ್ಲ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಭಾರತದ ರಕ್ಷಣಾ ಸಚಿವರೊಂದಿಗೆ ಚರ್ಚೆ ನಡೆಸಲು ಚೀನಾದ ರಕ್ಷಣಾ ಸಚಿವರು ಉತ್ಸುಕರಾಗಿದ್ದಾರೆ, ಈ ಬಗ್ಗೆ ಭಾರತದ ರಾಯಭಾರಿಗೆ ಹೇಳಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. 4 ದಿನಗಳ ಹಿಂದೆ ಮತ್ತೆ ಲಡಾಕ್ ನ ಪಾಂಗೊಂಗ್ ಸರೋವರದ ದಕ್ಷಿಣ ತೀರ ಪ್ರಾಂತ್ಯವನ್ನು ಆಕ್ರಮಿಸಿಕೊಳ್ಳಲು ಚೀನಾ ಸೇನೆ ಮುನ್ನುಗ್ಗಿದ ಬಳಿಕ ಗಡಿಯಲ್ಲಿ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 4 ತಿಂಗಳಿನಿಂದ ಭಾರತ ಮತ್ತು ಚೀನಾ ದೇಶಗಳು ಗಡಿಯ ವಿವಾದ ವಿಚಾರವಾಗಿ ಹಲವು ಸುತ್ತಿನ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆಯಲ್ಲಿ ತೊಡಗಿವೆ ಹೊರತು ಇದುವರೆಗೆ ಪರಿಹಾರಕ್ಕೆ ಬಂದಿಲ್ಲ.

ಭಾರತ ಪಾಂಗೊಂಗ್ ಲೇಕ್, ಫಿಂಗರ್ 2 ಮತ್ತು ಫಿಂಗರ್ 3 ಪ್ರದೇಶಗಳಲ್ಲಿ ತನ್ನ ಸೇನಾಪಡೆ ನಿಯೋಜನೆಯನ್ನು ಹೆಚ್ಚಿಸಿದೆ. ಭಾರತದ ಈ ನಡೆಗೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Stay up to date on all the latest ರಾಷ್ಟ್ರೀಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp