ಲಡಾಖ್ ಪರಿಸ್ಥಿತಿಯ ಬಗ್ಗೆ ಸತ್ಯ ಬಹಿರಂಗಪಡಿಸಿ: ಕೇಂದ್ರಕ್ಕೆ ಕಾಂಗ್ರೆಸ್ ಆಗ್ರಹ

ಲಡಾಖ್‌ನ ಗಡಿಯ ವಿಚಾರದಲ್ಲಿ ಚೀನಾದೊಂದಿಗೆ ಮಾತುಕತೆ ನಡೆಸುವ ಬಗ್ಗೆ ರಾಷ್ಟ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಕಾಂಗ್ರೆಸ್  ಶನಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಒತ್ತಾಯಿಸಿದೆ, ಚೀನಾದ ಕಡೆಯೊಂದಿಗೆ ಪದೇ ಪದೇ ನಡೆಯುತ್ತಿರುವ ಮಾತುಕತೆಯ ಫಲಿತಾಂಶವನ್ನು ಜನತೆ ತಿಳಿಯಬೇಕು ಎಂದು ಕಾಂಗ್ರೆಸ್ ಹೇಳಿದೆ. 
ಲಡಾಖ್ ಪರಿಸ್ಥಿತಿಯ ಬಗ್ಗೆ ಸತ್ಯ ಬಹಿರಂಗಪಡಿಸಿ: ಕೇಂದ್ರಕ್ಕೆ ಕಾಂಗ್ರೆಸ್ ಆಗ್ರಹ

ನವದೆಹಲಿ: ಲಡಾಖ್‌ನ ಗಡಿಯ ವಿಚಾರದಲ್ಲಿ ಚೀನಾದೊಂದಿಗೆ ಮಾತುಕತೆ ನಡೆಸುವ ಬಗ್ಗೆ ರಾಷ್ಟ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಕಾಂಗ್ರೆಸ್  ಶನಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಒತ್ತಾಯಿಸಿದೆ, ಚೀನಾದ ಕಡೆಯೊಂದಿಗೆ ಪದೇ ಪದೇ ನಡೆಯುತ್ತಿರುವ ಮಾತುಕತೆಯ ಫಲಿತಾಂಶವನ್ನು ಜನತೆ ತಿಳಿಯಬೇಕು ಎಂದು ಕಾಂಗ್ರೆಸ್ ಹೇಳಿದೆ.

ಪೂರ್ವ ಲಡಾಕ್‌ನಲ್ಲಿ ಉಲ್ಬಣಗೊಳ್ಳುತ್ತಿರುವ ಗಡಿ ಉದ್ವಿಗ್ನತೆಯನ್ನು ಸರಾಗಗೊಳಿಸುವತ್ತ ಗಮನಹರಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅವರ ಚೀನಾದ ರಕ್ಷಣಾ ಸಚಿವರು  ಮಾಸ್ಕೋದಲ್ಲಿ ಎರಡು ಗಂಟೆಗಳ ಕಾಲ ಸಭೆ ನಡೆಸಿದ ಒಂದು ದಿನದ ನಂತರ ವಿರೋಧ ಪಕ್ಷದ ಹೇಳಿಕೆ ಹೊರಬಿದ್ದಿದೆ.

ಪ್ರಮುಖ ವಿಷಯದ ಬಗ್ಗೆ ರಾಷ್ಟ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಪ್ರಧಾನಿ ಮತ್ತು ರಕ್ಷಣಾ ಸಚಿವರ "ರಾಜಧರ್ಮ" ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.

ವಿದೇಶಾಂಗ ಮಂತ್ರಿ,  ಕಾರ್ಪ್ಸ್ ಕಮಾಂಡರ್‌ಗಳ ಹಂತದ  ರಕ್ಷಣಾ ಮಂತ್ರಿಗಳ ಚರ್ಚೆಯವರೆಗೆ ಚೀನೀಯರೊಂದಿಗೆ ನಡೆಸಿದ ವಿವಿಧ ಹಂತದ ಮಾತುಕತೆಗಳನ್ನು ಪಟ್ಟಿ ಮಾಡಿದ ಸುರ್ಜೆವಾಲಾ, ಈ ಮಾತುಕತೆಯ ಫಲಿತಾಂಶ ಏನು ಎಂದು ಪ್ರಶ್ನಿಸಿದ್ದಾರೆ."ಏನು ಮಾತುಕತೆ ನಡೆದಿದೆ? ಈ ಬಗ್ಗೆ . ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆಯೆ?" 

"ಭಾರತ-ಚೀನಾ ಗಡಿಯಲ್ಲಿ ಇದು "ವಿಶೇಷ ಪರಿಸ್ಥಿತಿಯಾಗಿದೆ."  "1962 ರಿಂದ ಈ ರೀತಿಯ ಪರಿಸ್ಥಿತಿಯನ್ನು ನಾವು ಎಂದಿಗೂ ಹೊಂದಿರಲಿಲ್ಲ"ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರೀಂಗ್ಲಾ ಅವರ ಹೇಳಿಕೆಯನ್ನು ಸುರ್ಜೆವಾಲಾ ಉಲ್ಲೇಖಿಸಿದ್ದಾರೆ. "ನಮ್ಮ ಸರ್ಕಾರವು ಚೀನಾದ ಸಹವರ್ತಿಗಳೊಂದಿಗೆ ಪದೇ ಪದೇ ನಡೆಸಿದ ಸಂಭಾಷಣೆಯ ಫಲಿತಾಂಶವೇನು ಎಂಬುದು ಮುಖ್ಯವಾಗಿದೆ. ಚೀನಾದ ಗಡಿ ಉಲ್ಲಂಘನೆಗಳನ್ನು ಹಿಮ್ಮೆಟ್ಟಿಸಲಾಗಿದೆ ಎಂದು ನಾವು ಹೇಗೆ ಖಚಿತಪಡಿಸಿಕೊಳ್ಳಬಹುದು?" ಎಂದು ಸುರ್ಜೆವಾಲಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಪ್ರಶ್ನಿಸಿದ್ದಾರೆ.

"ನಮ್ಮ ತಾಯಿನಾಡನ್ನು ಪುನಃ ಪಡೆದುಕೊಳ್ಳಲು" ಚೀನಿಯರನ್ನು ಹೇಗೆ ಹಿಮ್ಮೆಟ್ಟಿಸಲಾಗುತ್ತದೆ ಎಂಬ ಪ್ರಶ್ನೆಗಳಿಗೆ ಜನರು ಉತ್ತರಗಳನ್ನು ಬಯಸುತ್ತಿದ್ದಾರೆ ಎಂದು ಅವರು ಹೇಳಿದರು.

"ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವರು ಮುಂದೆ ಬಂದು ರಾಷ್ಟ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ. ಅದು ನಿಜವಾದ ರಾಜಧರ್ಮ. ನಾವು ಉತ್ತರಕ್ಕಾಗಿ ಕಾಯುತ್ತೇವೆ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com