ಎಲ್‌ಎಸಿಯಲ್ಲಿ ಸಿಲುಕಿದ್ದ ಮೂವರು ಚೀನೀಯರನ್ನು ರಕ್ಷಿಸಿ, ಆಹಾರ, ವೈದ್ಯಕೀಯ ನೆರವು ನೀಡಿದ ಭಾರತೀಯ ಸೇನೆ

ಕಳೆದ ನಾಲ್ಕು ತಿಂಗಳುಗಳಿಂದ ಕೆಟ್ಟ ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಈಗ ಒಂದು ಉತ್ತಮ ಕಾರಣಕ್ಕಾಗಿ ಸುದ್ದಿಯಾಗಿದ್ದು, ಭಾರತೀಯ ಸೇನೆಯ ಯೋಧರು, ದಾರಿ ತಪ್ಪಿ ಸಿಕ್ಕಿಂನ ಎಲ್‌ಎಸಿ ಬಳಿ ಸಿಲುಕಿದ್ದ ಮೂವರು ಚೀನಿಯರನ್ನು ರಕ್ಷಿಸಿ, ಅವರು ಸುರಕ್ಷಿತವಾಗಿ ಮರಳಲು ಸಹಾಯ ಮಾಡಿದ್ದಾರೆ.
ಚೀನಿಯರಿಗೆ ಸಹಾಯ
ಚೀನಿಯರಿಗೆ ಸಹಾಯ

ನವದೆಹಲಿ: ಕಳೆದ ನಾಲ್ಕು ತಿಂಗಳುಗಳಿಂದ ಕೆಟ್ಟ ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಈಗ ಒಂದು ಉತ್ತಮ ಕಾರಣಕ್ಕಾಗಿ ಸುದ್ದಿಯಾಗಿದ್ದು, ಭಾರತೀಯ ಸೇನೆಯ ಯೋಧರು, ದಾರಿ ತಪ್ಪಿ ಸಿಕ್ಕಿಂನ ಎಲ್‌ಎಸಿ ಬಳಿ ಸಿಲುಕಿದ್ದ ಮೂವರು ಚೀನಿಯರನ್ನು ರಕ್ಷಿಸಿ, ಅವರು ಸುರಕ್ಷಿತವಾಗಿ ಮರಳಲು ಸಹಾಯ ಮಾಡಿದ್ದಾರೆ.

ಸೆಪ್ಟೆಂಬರ್ 3 ರಂದು ಉತ್ತರ ಸಿಕ್ಕಿಂನ ಪ್ರಸ್ಥಭೂಮಿ ಪ್ರದೇಶದಲ್ಲಿ ದಾರಿ ತಪ್ಪಿದ ಮೂವರು ಚೀನಾ ನಾಗರಿಕರಿಗೆ ಭಾರತೀಯ ಸೈನಿಕರು ಸಹಾಯ ಹಸ್ತ ಚಾಚಿದರು.

ವಿಪರೀತ ಎತ್ತರ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಿಂದ ಚೀನಿಯರನ್ನು ರಕ್ಷಿಸಿದ ಭಾರತೀಯ ಯೇಧರು, ಶೂನ್ಯ ತಾಪಮಾನದಲ್ಲಿ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆಯನ್ನು ಒಳಗೊಂಡ ಚೀನಾದ ನಾಗರಿಕರ ಜೀವಕ್ಕೆ ಅಪಾಯ ಇರುವುದನ್ನು ಅರಿತುಕೊಂಡ ತಕ್ಷಣವೇ ಆಮ್ಲಜನಕ, ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳು ಸೇರಿದಂತೆ ವೈದ್ಯಕೀಯ ನೆರವು ನೀಡಿದರು.

ಸಿಕ್ಕಿಂನ 220 ಕಿ.ಮೀ ಉದ್ದದ ಅಂತರರಾಷ್ಟ್ರೀಯ ಗಡಿಯ ಬಳಿ ಕೆಲವೇ ಜನರು ವಾಸಿಸುತ್ತಿದ್ದಾರೆ. ಆದ್ದರಿಂದ ಯಾರಾದರೂ ದಾರಿ ತಪ್ಪಿದರೆ ಅವರು ಇತರರ ಸಹಾಯ ಪಡೆಯುವುದು ಕಷ್ಟ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com