ಉತ್ತರ ಸಿಕ್ಕೀಂ ನಲ್ಲಿ ಚೀನಾ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ಸೇನೆ, ಆಹಾರ, ಆಕ್ಸಿಜನ್ ಪೂರೈಕೆ 

ಗಡಿಯಲ್ಲಿ ಚೀನಾ ಕ್ಯಾತೆ ತೆಗೆದು ಭಾರತೀಯ ಸೈನಿಕರನ್ನು ಹತ್ಯೆ ಮಾಡುತ್ತಿರುವುದರ ನಡುವೆಯೂ ಚೀನಾ ಪ್ರಜೆಗಳೆಡೆಗೆ ಭಾರತೀಯ ಸೇನೆ ಮಾನವಿಯತೆ ತೊರಿದೆ. 
ಉತ್ತರ ಸಿಕ್ಕೀಂ ನಲ್ಲಿ ಚೀನಾ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ಸೇನೆ, ಆಹಾರ, ಆಕ್ಸಿಜನ್ ಪೂರೈಕೆ
ಉತ್ತರ ಸಿಕ್ಕೀಂ ನಲ್ಲಿ ಚೀನಾ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ಸೇನೆ, ಆಹಾರ, ಆಕ್ಸಿಜನ್ ಪೂರೈಕೆ

ಸಿಕ್ಕಿಂ: ಗಡಿಯಲ್ಲಿ ಚೀನಾ ಕ್ಯಾತೆ ತೆಗೆದು ಭಾರತೀಯ ಸೈನಿಕರನ್ನು ಹತ್ಯೆ ಮಾಡುತ್ತಿರುವುದರ ನಡುವೆಯೂ ಚೀನಾ ಪ್ರಜೆಗಳೆಡೆಗೆ ಭಾರತೀಯ ಸೇನೆ ಮಾನವಿಯತೆ ತೊರಿದೆ. 

ಉತ್ತರ ಸಿಕ್ಕೀಂನ 17,500 ಅಡಿ ಎತ್ತರದ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಚೀನಾ ಪ್ರಜೆಗಳನ್ನು ಭಾರತೀಯ ಸೈನಿಕರು ರಕ್ಷಿಸಿದ್ದು, ತಕ್ಷಣವೇ ವೈದ್ಯಕೀಯ ನೆರವು ನೀಡಿ ಸಹಾಯ ಹಸ್ತ ಚಾಚಿದ್ದಾರೆ. ಸೆ.03 ರಂದು ಈ ಘಟನೆ ನಡೆದಿದೆ.

ಚೀನಾದ ಸಿಬ್ಬಂದಿಗಳಿಗೆ ಆಕ್ಸಿಜನ್, ಆಹಾರ, ಬೆಚ್ಚಗಿನ ಬಟ್ಟೆ ನೀಡಿ, ಸೂಕ್ತ ಮಾರ್ಗದರ್ಶನದ ನಂತರ ಚೀನಾದ ಪ್ರಜೆಗಳು ಮರಳಿ ತಮ್ಮ ಸ್ಥಾನಕ್ಕೆ ತೆರಳಿದ್ದಾರೆ. 

ಈ ಬಗ್ಗೆ ಭಾರತೀಯ ಸೇನೆ ಅಧಿಕೃತ ಟ್ವೀಟ್ ಮಾಡಿದ್ದು, ಮಾನವೀಯತೆ ಎಲ್ಲಕ್ಕಿಂತಲೂ ಮಿಗಿಲಾದದ್ದು ಎಂದು ಬರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com