ಶ್ರೀಲಂಕಾ ಇಂಧನ ಟ್ಯಾಂಕರ್ ನಲ್ಲಿ ಭೀಕರ ಅಗ್ನಿ ಅವಘಡ, 22 ಸಿಬ್ಬಂದಿಗಳ ರಕ್ಷಿಸಿದ ಭಾರತೀಯ ನೌಕಾಪಡೆಯ ಐಎನ್ಎಸ್ ಸಹ್ಯಾದ್ರಿ!

ಭಾರತದ ಪ್ರಮುಖ ಇಂಧನ ಸಂಸ್ಕರಣಾ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಷನ್'ಗೆ ಸೇರಿದ ಇಂಧನ ಟ್ಯಾಂಕರ್ ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಅಪಾಯಕ್ಕೆ ಸಿಲುಕಿದ್ದ 22 ಮಂದಿ ಸಿಬ್ಬಂದಿಗಳನ್ನು ಭಾರತೀಯ ನೌಕಾಪಡೆಯ ನೌಕೆ ಎನ್ಎಸ್ಎಸ್ ಸಹ್ಯಾದ್ರಿ ರಕ್ಷಣೆ ಮಾಡಿದೆ.
ಇಂಧನ ಟ್ಯಾಂಕರ್ ನಲ್ಲಿ ಸ್ಫೋಟ
ಇಂಧನ ಟ್ಯಾಂಕರ್ ನಲ್ಲಿ ಸ್ಫೋಟ

ಕೊಲಂಬೋ: ಭಾರತದ ಪ್ರಮುಖ ಇಂಧನ ಸಂಸ್ಕರಣಾ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಷನ್'ಗೆ ಸೇರಿದ ಇಂಧನ ಟ್ಯಾಂಕರ್ ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಅಪಾಯಕ್ಕೆ ಸಿಲುಕಿದ್ದ 22 ಮಂದಿ ಸಿಬ್ಬಂದಿಗಳನ್ನು ಭಾರತೀಯ ನೌಕಾಪಡೆಯ ನೌಕೆ ಎನ್ಎಸ್ಎಸ್ ಸಹ್ಯಾದ್ರಿ ರಕ್ಷಣೆ ಮಾಡಿದೆ.

ಶ್ರೀಲಂಕಾದ ಸಮುದ್ರದ ದಂಡೆಯಲ್ಲಿ ಇಂಧನ ಸಾಗಿಸುತ್ತಿದ್ದ ವೇಳೆ ಎಂಟಿ ನ್ಯೂ ಡೈಮಂಡ್ ಎಂಬ ಹಡಗಿನ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ಈ ದುರ್ಘಟನೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದರು. ಆದರೆ ಇತರೆ 22 ಮಂದಿ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದರು. ವಿಚಾರ ತಿಳಿದ  ಕೂಡಲೇ ನೆರವಿಗೆ ಧಾವಿಸಿದ ಭಾರತೀಯ ನೌಕಾಪಡೆ ಎನ್ಎನ್ಎಸ್ ಸಹ್ಯಾದ್ರಿ ಮೂಲಕ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ನೌಕೆಯಲ್ಲಿದ್ದ ಎಲ್ಲ ಸಿಬ್ಬಂದಿಗಳನ್ನು ರಕ್ಷಣಿ ಮಾಡಿದ ಭಾರತೀಯ ನೌಕಾಪಡೆ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ನೌಕಾಪಡೆಯ ವಕ್ತಾರರು ಪ್ರಸ್ತುತ ಇಂಧನ ಟ್ಯಾಂಕರ್ ನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ಪ್ರಸ್ತುತ ಸಂಪೂರ್ಣ ನಂದಿಸಲಾಗಿದೆ. ಆದರೆ ಹೊಗೆ ಬರುತ್ತಲೇ ಇದ್ದು, ಅದನ್ನೂ ನಂದಿಸುವ ಕಾರ್ಯಾಚರಣೆ ಸಾಗಿದೆ. ಪ್ರಸ್ತುತ ನೌಕೆಯಲ್ಲಿದ್ದ 22 ಮಂದಿ ಸಿಬ್ಬಂದಿಗಳನ್ನು ರಕ್ಷಣೆ  ಮಾಡಲಾಗಿದೆ. ಟೋಯಿಂಗ್ ನೌಕೆಯ ಮೂಲಕ ಇಂಧನ ಟ್ಯಾಂಕರ್ ಅನ್ನು ಸುರಕ್ಷಿತ ಪ್ರದೇಶಕ್ಕೆ ಎಳೆದು ತರಲಾಗಿದೆ. ಅಂತಾರಾಷ್ಟ್ರೀಯ ನೌಕಾಪಡೆಯಲ್ಲಿರುವ ಭಾರತೀಯ ನೌಕಾಪಡೆ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.  

20ಲಕ್ಷ ಬ್ಯಾರಲ್‌ ಆಯಿಲ್‌ ಹೊತ್ತು ತರುತ್ತಿದ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್'ಗೆ ಸೇರಿದ ನ್ಯೂ ಡೈಮಂಡ್‌ ಟ್ಯಾಂಕರ್'ನಲ್ಲಿ ಬೆಂಕಿ ಹೊತ್ತುಕೊಂಡಿತ್ತು. ಈ ಹಡಗಿನಲ್ಲಿ 18 ಫಿಲಿಪ್ಪೀನ್ಸ್‌ ಹಾಗೂ 5 ಗ್ರೀಕ್‌ ಮೂಲದ ಸಿಬ್ಬಂದಿಗಳಿದ್ದರು. ಇವರಲ್ಲಿ ಓರ್ವನನ್ನು ಏರ್‌ಲಿಫ್ಟ್ ಮಾಡಲಾಗಿತ್ತು. ಈ ಹಡಗು ಕುವೈತ್‌ನ  ಮಿನಾ ಅಲ್‌ ಅಹ್ಮದಿ ಬಂದರ್‌ನಿಂದ ಕಚ್ಚಾತೈಲ ಹೊತ್ತು ಭಾರತದ ಪರಾದೀಪ್‌ ಬಂದರಿನತ್ತ ಹೊರಟಿತ್ತು. ಇಲ್ಲಿ ಇಂಡಿಯನ್‌ ಆಯಿಲ್‌ಗೆ ಸೇರಿದ ತೈಲ ಸಂಸ್ಕರಣ ಘಟಕವಿದ್ದು, ಈ ಘಟಕಕ್ಕೆ ಇಂಧನ ಹೊತ್ತು ಸಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com