ಬಿಜೆಡಿ ಸಂಸದ ಅನುಭವ್ ಮೊಹಂತಿ ಕೌಟುಂಬಿಕ ದೌರ್ಜನ್ಯ ಆರೋಪ, ಕೋರ್ಟ್ ಮೆಟ್ಟಿಲೇರಿದ ಪತ್ನಿ

ಒಡಿಶಾ ಆಡಳಿತಾರೂಢ ಬಿಜೆಡಿ ತೀವ್ರ ಮುಜುಗರಕ್ಕೀಡಾಗಿದ್ದು, ಪಕ್ಷದ ಸಂಸದ ಅನುಭವ್ ಮೊಹಂತಿ ಅವರು ಕೌಟುಂಬಿಕ ದೌರ್ಜನ್ಯ ಎಸಗಿದ್ದು, ತಮ್ಮ ಪತ್ನಿ ಒಡಿಯಾ ಚಲನಚಿತ್ರ ನಟಿ ವರ್ಷಾ ಪ್ರಿಯದರ್ಶಿನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅನುಭವ್ ಮೊಹಂತಿ
ಅನುಭವ್ ಮೊಹಂತಿ

ಕಟಕ್: ಒಡಿಶಾ ಆಡಳಿತಾರೂಢ ಬಿಜೆಡಿ ತೀವ್ರ ಮುಜುಗರಕ್ಕೀಡಾಗಿದ್ದು, ಪಕ್ಷದ ಸಂಸದ ಅನುಭವ್ ಮೊಹಂತಿ ಅವರು ಕೌಟುಂಬಿಕ ದೌರ್ಜನ್ಯ ಎಸಗಿದ್ದು, ತಮ್ಮ ಪತ್ನಿ ಒಡಿಯಾ ಚಲನಚಿತ್ರ ನಟಿ ವರ್ಷಾ ಪ್ರಿಯದರ್ಶಿನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಪತ್ನಿ ವರ್ಷಾ ಅವರು ಪತಿ ವಿರುದ್ಧ ಪೊಲೀಸರಿಗೆ ದೂರು ನೀಡುವ ಬದಲು ನೇರವಾಗಿ ಸಬ್ ಡಿವಿಶನಲ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್(ಎಸ್‌ಡಿಜೆಎಂ) ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಮೊಹಂತಿ ವಿರುದ್ಧ ಕೌಟುಂಬಿಕ ಹಿಂಸಾಚಾರ ಆರೋಪದ ಮೇಲೆ ಮಹಿಳೆಯರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 12 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ನಟಿ ವರ್ಷಾ ಅವರು ಸಲ್ಲಿಸಲಾದ ಮೊಕದ್ದಮೆಯನ್ನು ಕೋರ್ಟ್ ಸೋಮವಾರ ಪ್ರಾಥಮಿಕ ವಿಚಾರಣೆಗೆ ನಿಗದಿಪಡಿಸಿದೆ ಎಂದು ಅವರ ವಕೀಲ ಆರ್ ಕೆ ರಾಥ್ ಹೇಳಿದ್ದಾರೆ.

ನಟ ಹಾಗೂ ರಾಜಕಾರಣಿ ಅನುಭವ್ ಮೊಹಂತಿ ಅವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಪ್ತರಾಗಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ಜನರು ಮನೆಯೊಳಗಿರುವಾಗ ರಾಜ್ಯದ ಯಾವುದೇ ಮಹಿಳೆ ಮೇಲೆ ಕೌಟುಂಬಿಕ ನಡೆಯದಂತೆ ನೋಡಿಕೊಳ್ಳಿ ಎಂದು ಸಿಎಂ ಪಟ್ರಾಯಕ್ ಅವರು ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಸೂಚಿಸಿದ ಕೆಲವೇ ತಿಂಗಳಲ್ಲಿ ಈ ಪ್ರಕರಣ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com