ಸ್ವದೇಶಿ ನಿರ್ಮಿತ ಎಚ್ ಎಸ್ ಟಿಡಿವಿ ಹಾರಾಟ ಪರೀಕ್ಷೆ ಯಶಸ್ವಿ-ಡಿಆರ್ ಡಿಒ

ದೇಶೀಯ ರಕ್ಷಣಾ ತಂತ್ರಜ್ಞಾನಗಳಲ್ಲಿ ದೈತ್ಯ ಎಂದು ಕರೆಯಬಹುದಾದ ಮತ್ತು ಆತ್ಮನಿರ್ಭರ ಭಾರತದತ್ತ ಮಹತ್ವದ ಮೈಲಿಗಲ್ಲು ಎಂದು ಗುರುತಿಸಬಹುದಾದ ಹೈಪರ್ಸಾನಿಕ್ ಟೆಕ್ನಾಲಜಿ ಡೆಮನ್‌ಸ್ಟ್ರೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ)  ಹಾರಾಟ ಪರೀಕ್ಷೆ ಯಶಸ್ವಿಯಾಗಿದೆ. 
ಎಚ್ ಎಸ್ ಟಿಡಿವಿ ಹಾರಾಟ ಪರೀಕ್ಷೆ
ಎಚ್ ಎಸ್ ಟಿಡಿವಿ ಹಾರಾಟ ಪರೀಕ್ಷೆ

ನವದೆಹಲಿ: ದೇಶೀಯ ರಕ್ಷಣಾ ತಂತ್ರಜ್ಞಾನಗಳಲ್ಲಿ ದೈತ್ಯ ಎಂದು ಕರೆಯಬಹುದಾದ ಮತ್ತು ಆತ್ಮನಿರ್ಭರ ಭಾರತದತ್ತ ಮಹತ್ವದ ಮೈಲಿಗಲ್ಲು ಎಂದು ಗುರುತಿಸಬಹುದಾದ ಹೈಪರ್ಸಾನಿಕ್ ಟೆಕ್ನಾಲಜಿ ಡೆಮನ್‌ಸ್ಟ್ರೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ)ಹಾರಾಟ ಪರೀಕ್ಷೆ ಯಶಸ್ವಿಯಾಗಿದೆ. 

ಒಡಿಶಾದ ಕರಾವಳಿ ತೀರ ಪ್ರದೇಶದಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ಕ್ಷಿಪಣಿ ಉಡಾವಣಾ ಕೇಂದ್ರದಿಂದ ಇಂದು ಬೆಳಗ್ಗೆ 11ಗಂಟೆ ಸುಮಾರಿನಲ್ಲಿ ಎಚ್ ಎಸ್ ಟಿಡಿವಿ ಯಶಸ್ವಿಯಾಗಿ ಹಾರಾಟ ನಡೆಸಿದೆ. ಈ ವಾಹಕ 6 ಮಾಕ್ ವೇಗದಲ್ಲಿ ಕೇವಲ 20 ಸೆಕೆಂಡ್ ಗಳಲ್ಲಿ 32.5 ಎತ್ತರಕ್ಕೆ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ.

ದೇಶೀಯವಾಗಿ ಅಭಿವೃದ್ಧಿ ಹೊಂದಿದ ಹೈಪರ್ಸಾನಿಕ್ ಟೆಕ್ನಾಲಜಿ ಡೆಮೋನ್‌ಸ್ಟ್ರೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ) ಯನ್ನು  ಯಶಸ್ವಿಯಾಗಿ ಹಾರಾಟ ಪರೀಕ್ಷಿಸಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ
ಸಂಸ್ಥೆ (ಡಿಆರ್‌ಡಿಒ) ಯನ್ನು ಅಭಿನಂದಿಸಿದ್ದಾರೆ.

ಈ ತಂತ್ರಜ್ಞಾನವು ಸ್ವಾವಲಂಬಿ ಭಾರತದ ಕುರಿತು ಪ್ರಧಾನ ಮಂತ್ರಿಯ ದೃಷ್ಟಿಯನ್ನು ಸಾಕಾರಗೊಳಿಸುವ ಹೆಗ್ಗುರುತಿನ  ಸಾಧನೆಯಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com