ಖಾಸಗೀಕರಣ ನಿಲ್ಲಿಸಿ, ಸರ್ಕಾರಿ ಉದ್ಯೋಗ ರಕ್ಷಿಸಿ: ಕೇಂದ್ರಕ್ಕೆ ರಾಹುಲ್ ಗಾಂಧಿ

ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಘಟಕಗಳನ್ನು(ಪಿಎಸ್‌ಯು) ಖಾಸಗೀಕರಣಗೊಳಿಸುತ್ತಿದೆ ಮತ್ತು ಸರ್ಕಾರಿ ಉದ್ಯೋಗಗಳನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಘಟಕಗಳನ್ನು(ಪಿಎಸ್‌ಯು) ಖಾಸಗೀಕರಣಗೊಳಿಸುತ್ತಿದೆ ಮತ್ತು ಸರ್ಕಾರಿ ಉದ್ಯೋಗಗಳನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ಭಾರತದ ಎರಡನೇ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರ ಮತ್ತು ಮೂರನೇ ಅತಿದೊಡ್ಡ ತೈಲ ಸಂಸ್ಕರಣಾ ಬಿಪಿಸಿಎಲ್ ನ ಶೇ, 52.98 ರಷ್ಟು ಪಾಲನ್ನು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಆರೋಪ ಮಾಡಿದ್ದಾರೆ.

"ಇಂದು ದೇಶವು ಮೋದಿ ಸರ್ಕಾರ ಸೃಷ್ಟಿಸಿದ ಅನೇಕ ಅನಾಹುತಗಳನ್ನು ಎದುರಿಸುತ್ತಿದೆ, ಅವುಗಳಲ್ಲಿ ಅನಗತ್ಯ ಖಾಸಗೀಕರಣವೂ ಒಂದು. ಯುವಕರಿಗೆ ಉದ್ಯೋಗಗಳು ಬೇಕಾಗುತ್ತವೆ ಆದರೆ ಮೋದಿ ಸರ್ಕಾರ ಪಿಎಸ್ ಯುಗಳನ್ನು ಖಾಸಗೀಕರಣಗೊಳಿಸುವ ಮೂಲಕ ಉದ್ಯೋಗ ಮತ್ತು ಬಂಡವಾಳವನ್ನು ನಾಶಪಡಿಸುತ್ತಿದೆ" ಎಂದು ಅವರು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದರಿಂದ "ಯಾರಿಗೆ ಲಾಭವಾಗುತ್ತಿದೆ? ಇದು ಮೋದಿಗೆ ಹತ್ತಿರವಿರುವ ಕೆಲವು" ಸ್ನೇಹಿತರ "ಅಭಿವೃದ್ಧಿಯನ್ನು ಮಾತ್ರ ಮಾಡುತ್ತಿದೆ. ಖಾಸಗೀಕರಣವನ್ನು ನಿಲ್ಲಿಸಿ ಸರ್ಕಾರಿ ಉದ್ಯೋಗಗಳನ್ನು ರಕ್ಷಿಸಿ" ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com