ಆಂಧ್ರ ಪ್ರದೇಶ: ಹೋಮ್ ಐಸೋಲೇಷನ್ ನಲ್ಲಿ ಕೋವಿಡ್-19 ನಿಂದ ಗುಣಮುಖರಾದ 102 ವರ್ಷದ  ವೃದ್ಧ ಮಹಿಳೆ

ಹೋಮ್ ಐಸೋಲೇಷನ್ ನಲ್ಲಿ ಕೋವಿಡ್-19 ನಿಂದ 102 ವರ್ಷದ ವೃದ್ಧ ಮಹಿಳೆಯೊಬ್ಬರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಗುಣಮುಖರಾಗುವ ಮೂಲಕ ಜನರಲ್ಲಿ ಆತ್ಮ ವಿಶ್ವಾಸ ತುಂಬಿಸಿದ್ದಾರೆ.
ಮುಮ್ಮನೇನಿ ಸುಬ್ಬಮ್ಮ
ಮುಮ್ಮನೇನಿ ಸುಬ್ಬಮ್ಮ

ಅನಂತಪುರ: ಹೋಮ್ ಐಸೋಲೇಷನ್ ನಲ್ಲಿ ಕೋವಿಡ್-19 ನಿಂದ 102 ವರ್ಷದ ವೃದ್ಧ ಮಹಿಳೆಯೊಬ್ಬರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಗುಣಮುಖರಾಗುವ ಮೂಲಕ ಜನರಲ್ಲಿ ಆತ್ಮ ವಿಶ್ವಾಸ ತುಂಬಿಸಿದ್ದಾರೆ.

ಪುಟ್ಟಪರ್ತಿ ಮಂಡಲದ ಪೆಡ್ಡಾ ಕಮ್ಮವರಿಪಲ್ಲಿ ಗ್ರಾಮದ ಮುಮ್ಮನೇನಿ ಸುಬ್ಬಮ್ಮ ಕೋವಿಡ್-19 ನಿಂದ ಗುಣಮುಖರಾದ ಮಹಿಳೆ.
ಆಗಸ್ಟ್ 21ರಂದು ಕೊರೋನಾ ಪಾಸಿಟಿವ್ ಬಂದಿದ್ದ ಈ ಮಹಿಳೆ ಇಂದು ಆರೋಗ್ಯವಾಗಿದ್ದಾರೆ.

ಐವರು ಮಕ್ಕಳು ಹಾಗೂ ಮೂವರು ಪುತ್ರಿಯರನ್ನು ಹೊಂದಿರುವ ಮುಮ್ಮನೇನಿ ಪುತ್ರನೊಬ್ಬನ ಜೊತೆಗೆ ವಾಸವಾಗಿದ್ದು, ಆಗಸ್ಟ್ ತಿಂಗಳಲ್ಲಿ ಇವರ ಮನೆಯ ಇತರ ನಾಲ್ವರಿಗೆ ಕೊರೋನಾ ಸೋಂಕು ತಗುಲಿತ್ತು. 

ಈ ಮಹಿಳೆಯ 62 ವರ್ಷದ ಮಗ ಮಧುಮೇಹದಿಂದ ಆಸ್ಪತ್ರೆಯಲ್ಲಿದ್ದರೆ ಆಕೆಯ ಸೊಸೆ, ಮೊಮ್ಮಗ ಮತ್ತು ಆತನ ಹೆಂಡತಿ ಹೋಮ್ ಐಸೋಲೇಷನ್ ನಲ್ಲಿ ಗುಣಮುಖರಾಗಿದ್ದಾರೆ. ಸಂಬಂಧಿಕರು ಹಾಗೂ ಸ್ನೇಹಿತರು ಸುಬ್ಬಮ್ಮ ಅವರ ಮನೆಗೆ ಧಾವಿಸಿ ಅಭಿನಂದಿಸುತ್ತಿದ್ದಾರೆ.

102 ವರ್ಷದ ಮಹಿಳೆ ಕೊರೋನಾ ದಿಂದ ಮುಕ್ತರಾಗಲು ಕಾರಣವೇನು ಗೊತ್ತಾ? ಸರಿಯಾದ ವೇಳೆಗೆ ಚಿಕಿತ್ಸೆ, ರಾಗಿ ಮುದ್ದೆ, ಸಿಹಿ ನಿಂಬೆ ರಸ, ಚಿಕ್ಕನ್ ಮತ್ತಿತರ ಮಾಂಸಾಹಾರಿ ಊಟ ಎಂಬುದು ವಿಶೇಷ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com