ರಷ್ಯಾದ ಕೋವಿಡ್ -19 ಲಸಿಕೆಯ 3ನೇ ಹಂತದ ಪ್ರಯೋಗ ಭಾರತದಲ್ಲಿ ನಡೆಸಲು ಕೇಂದ್ರ ಚಿಂತನೆ: ನೀತಿ ಆಯೋಗದ ಸದಸ್ಯ

ರಷ್ಯಾ ಕಂಡುಹಿಡಿದಿರುವ ಕೋವಿಡ್ -19 ಲಸಿಕೆ 'ಸ್ಪುಟ್ನಿಕ್ ವಿ' ಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಅನ್ನು ಭಾರತದಲ್ಲಿ ನಡೆಸಲು ಅವಕಾಶ ನೀಡಬೇಕು ಎಂಬ ರಷ್ಯಾ ಸರ್ಕಾರದ ಮನವಿಯನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ ಎಂದು ನೀತಿ ಆಯೋಗದ ಸದಸ್ಯರೊಬ್ಬರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಷ್ಯಾದ ಕೋವಿಡ್-19 ಲಸಿಕೆ
ರಷ್ಯಾದ ಕೋವಿಡ್-19 ಲಸಿಕೆ

ನವದೆಹಲಿ: ರಷ್ಯಾ ಕಂಡುಹಿಡಿದಿರುವ ಕೋವಿಡ್ -19 ಲಸಿಕೆ 'ಸ್ಪುಟ್ನಿಕ್ ವಿ' ಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಅನ್ನು ಭಾರತದಲ್ಲಿ ನಡೆಸಲು ಅವಕಾಶ ನೀಡಬೇಕು ಎಂಬ ರಷ್ಯಾ ಸರ್ಕಾರದ ಮನವಿಯನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ ಎಂದು ನೀತಿ ಆಯೋಗದ ಸದಸ್ಯರೊಬ್ಬರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

"ವಿಶೇಷ ಸ್ನೇಹಿತ ರಷ್ಯಾ ಪಾಲುದಾರಿಕೆಯ ಪ್ರಸ್ತಾಪಕ್ಕೆ ಭಾರತ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಮತ್ತು ಈ ಎರಡೂ ದೇಶಗಳ ಹಾದಿಯಲ್ಲಿ ಗಮನಾರ್ಹವಾದ ಬೆಳವಣಿಗೆ ಕಂಡುಬಂದಿದೆ" ಎಂದು ನೀತಿ ಆಯೋಗದ ಸದಸ್ಯ ಹಾಗೂ ಕೋವಿಡ್-19 ಲಸಿಕೆಯ ರಾಷ್ಟ್ರೀಯ ತಜ್ಞರ ತಂಡ ಮುಖ್ಯಸ್ಥ ಡಾ. ವಿಕೆ ಪಾಲ್ ಹೇಳಿದ್ದಾರೆ.

‘ಮಾಸ್ಕೊದ ಗಮೆಲಿಯಾ ಇನ್‌ಸ್ಟಿಟ್ಯೂಟ್‌ ಮತ್ತು ರಷ್ಯಾ ರಕ್ಷಣಾ ಸಚಿವಾಲಯದ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್‌–ವಿ ಲಸಿಕೆಯ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗಿದೆ. ಮೊದಲ ಹಂತದ ಲಸಿಕೆಗಳನ್ನು ನಾಗರಿಕರಿಗಾಗಿ ಬಿಡುಗಡೆ ಮಾಡಲಾಗಿದೆ’.

ಕಳೆದ ವಾರ ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ 1ನೇ ಹಂತದ ಹಾಗೂ 2ನೇ ಹಂತ ಕ್ಲಿನಿಕಲ್ ಟ್ರಯಲ್ ಫಲಿತಾಂಶ ಉತ್ತಮವಾಗಿದ್ದು, ಲಸಿಕೆ ಪಡೆದ ಎಲ್ಲಾ ಸ್ವಯಂಸೇವಕರು ಚೆನ್ನಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com