ನಾಪತ್ತೆಯಾಗಿದ್ದ ಐವರು ಭಾರತೀಯ ಯುವಕರು ಚೀನಾ ಗಡಿಯೊಳಗೆ ಪತ್ತೆ: ರಿಜಿಜು

ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಐವರು ಯುವಕರು ಚೀನಾದ ಗಡಿಯೊಳಗೆ ಪತ್ತೆಯಾಗಿದ್ದಾರೆ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. 
ಕಿರಣ್ ರಿಜಿಜು
ಕಿರಣ್ ರಿಜಿಜು

ನವದೆಹಲಿ: ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಐವರು ಯುವಕರು ಚೀನಾದ ಗಡಿಯೊಳಗೆ ಪತ್ತೆಯಾಗಿದ್ದಾರೆ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. 

ಯುವಕರು ನಾಪತ್ತೆ ಕುರಿತಂತೆ ಭಾರತೀಯ ಸೇನೆಯು ಕಳುಹಿಸಿದ್ದ ಹಾಟ್ ಲೈನ್ ಸಂದೇಶಕ್ಕೆ ಚೀನಾದ ಪೀಪಲ್ ಲಿಬರೇಷನ್ ಆರ್ಮಿ(ಪಿಎಲ್ಎ) ಪ್ರತಿಕ್ರಿಯಿಸಿದ್ದು ಐವರು ಭಾರತೀಯರು ತಮ್ಮ ಭಾಗದ ಗಡಿಯೊಳಗೆ ಇದ್ದಾರೆ ಎಂದು ಒಪ್ಪಿಕೊಂಡಿದೆ. 

ಚೀನಾ ಗಡಿಯೊಳಗೆ ಪತ್ತೆಯಾಗಿರುವ ಭಾರತೀಯರನ್ನು ನಮ್ಮ ಅಧಿಕಾರಿಗಳಿಗೆ ಹಸ್ತಾಂತರ ಮಾಡುವ ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್ಸಿರಿ ಜಿಲ್ಲೆಯ ನಾಚೋ ಪ್ರದೇಶದ ಗ್ರಾಮದ ಈ ಐವರು ಭಾರತೀಯ ಸೇನೆಯ ಕೂಲಿಗಳು ಹಾಗೂ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದರು. 

ಏಳು ಜನರ ತಂಡ ಕಾಡಿನಲ್ಲಿ ಬೇಟೆಯಾಡಲು ತೆರಳಿದ್ದಾಗ ನಾಚೋದ ಉತ್ತರ ಭಾಗದ 12 ಕಿ.ಮೀ ದೂರದ ಸೇನಾ ಕಾವಲು ವಲಯ ಸೆರಾ 7 ರಿಂದ ಚೀನಾ ಪಡೆಗಳು ಐವರನ್ನು ಅಪಹರಣ ಮಾಡಿದೆ ಎಂದು ಮನೆಗೆ ಮರಳಿದ್ದ ಇಬ್ಬರು ಮಾಹಿತಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com