ಬೆಂಗಳೂರಿನಲ್ಲಿ ವಾಯುಪಡೆ ನೇಮಕಾತಿ ರ‍್ಯಾಲಿ: ಇಂದಿನಿಂದ ಹೆಸರು ನೋಂದಣಿ ಆರಂಭ

ಭಾರತೀಯ ವಾಯುಪಡೆ (ಐಎಎಫ್ ) ಗ್ರೂಪ್ ಎಕ್ಸ್ ( ಟೆಕ್ನಿಕಲ್ ಟ್ರೇಡ್ ಅಡಿಯಲ್ಲಿ ಏರ್ ಮನ್ ಹುದ್ದೆಗೆ ನೇಮಕಾತಿ ರ‍್ಯಾಲಿಯನ್ನು  ಮಾಣಿಕ್ ಷಾ ಪರೇಡ್ ಮೈದಾನದಲ್ಲಿ  ನಡೆಸುತ್ತಿದೆ. ಆನ್ ಲೈನ್ www.airmenselection.cdac.in.ನಲ್ಲಿ ಇಂದಿನಿಂದ ಸೆಪ್ಟೆಂಬರ್ 11ರವರೆಗೆ ಹೆಸರು ನೋಂದಾಯಿಸಬಹುದಾಗಿದೆ.
ಭಾರತೀಯ ವಾಯುಪಡೆ
ಭಾರತೀಯ ವಾಯುಪಡೆ

ಬೆಂಗಳೂರು:  ಭಾರತೀಯ ವಾಯುಪಡೆ (ಐಎಎಫ್ ) ಗ್ರೂಪ್ ಎಕ್ಸ್ ( ಟೆಕ್ನಿಕಲ್ ಟ್ರೇಡ್ ಅಡಿಯಲ್ಲಿ ಏರ್ ಮನ್ ಹುದ್ದೆಗೆ ನೇಮಕಾತಿ ರ‍್ಯಾಲಿಯನ್ನು  ಮಾಣಿಕ್ ಷಾ ಪರೇಡ್ ಮೈದಾನದಲ್ಲಿ  ನಡೆಸುತ್ತಿದೆ. ಆನ್ ಲೈನ್ www.airmenselection.cdac.in.ನಲ್ಲಿ ಇಂದಿನಿಂದ ಸೆಪ್ಟೆಂಬರ್ 11ರವರೆಗೆ ಹೆಸರು ನೋಂದಾಯಿಸಬಹುದಾಗಿದೆ.

ಕರ್ನಾಟಕ ಅಭ್ಯರ್ಥಿಗಳಿಗಾಗಿ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 4ರವರೆಗೂ ನೇಮಕಾತಿ ರ‍್ಯಾಲಿ  ನಡೆಯಲಿದ್ದು, ಜನವರಿ 17, 2000 ಮತ್ತು ಡಿಸೆಂಬರ್ 31, 2003ರೊಳಗೆ ಜನಿಸಿದ ಅವಿವಾಹಿತರು ಹೆಸರು ನೋಂದಾಯಿಸಿಕೊಳ್ಳಲು ಅರ್ಹರಾಗಿರುತ್ತಾರೆ.

ಇಂಟರ್ ಮೀಡಿಯೆಟ್ ಅಥವಾ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲೀಷ್ ವಿಷಯದಲ್ಲಿ ಕಡ್ಡಾಯವಾಗಿ ವ್ಯಾಸಂಗ  ಮಾಡಿದ್ದವರಾಗಿದ್ದು, ಗರಿಷ್ಠ 50 ಅಂಕಗಳನ್ನು ಪಡೆದಿರಬೇಕಾಗುತ್ತದೆ.

ಸಿಬಿಎಸ್ ಇಯಿಂದ ಮಾನ್ಯತೆಗೊಂಡ ಶಿಕ್ಷಣ ಮಂಡಳಿಯಿಂದ ಇಂಗ್ಲೀಷ್ ನಲ್ಲಿ ಶೇ.50 ರಷ್ಟು ಅಂಕಗಳನ್ನು ಪಡೆದಿರಬೇಕಾದ ಅಗತ್ಯವಿರಬೇಕು. ಅಥವಾ ಸರ್ಕಾರಿ ಮಾನ್ಯತಾ ಪಾಲಿಟೆಕ್ನಿಕ್ ಸಂಸ್ಥೆಗಳಿಂದ ಮೆಕಾನಿಕಲ್ ಇಂಜಿನಿಯರಿಂಗ್, ಮತ್ತಿತರ
ವಿಷಯಗಳಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಮಾಡಿರಬೇಕಾಗುತ್ತದೆ.

ಅಭ್ಯರ್ಥಿಗಳು ನೇಮಕಾತಿ ಸ್ಥಳದಲ್ಲಿ ಪ್ರವೇಶ ಪತ್ರ, ಮೂಲ ಅಂಕಪಟ್ಟಿ , ಪಾಸ್ ಪೋರ್ಟ್, ಸ್ವಯಂ ಅಧಿಕೃತಗೊಳಿಸಲಾದ ನಾಲ್ಕು ಜೊತೆ ಎಲ್ಲಾ ಪ್ರಮಾಣ ಪತ್ರಗಳು ಮತ್ತು ಪಾರ್ಸ್ ಪೋರ್ಟಿನ ಸೈಜಿನ 30 ಪೋಟೋಗಳನ್ನು ನೀಡಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com