ಕಾಶಿ ಮಥುರಾಗಳ ವಿಮೋಚನೆಗಾಗಿ ಅಖಾಡಾ ಪರಿಷತ್ ಪ್ರತಿಜ್ಞೆ

ಸಂತರ ಸರ್ವೋಚ್ಛ ಸಂಸ್ಥೆಯಾಗಿರುವ ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ) ಕಾಶಿ ವಿಶ್ವನಾಥ ಮಂದಿರ ಹಾಗೂ ಮಥುರಾ ಕೃಷ್ಣ ಜನ್ಮಭೂಮಿಯ ವಿಮೋಚನೆಗೆ ಅಭಿಯಾನ ಪ್ರಾರಂಭಿಸಲು ನಿರ್ಧರಿಸಿದೆ. 
ಕಾಶಿ ಮಥುರಾಗಳ ವಿಮೋಚನೆಗಾಗಿ ಅಖಾಡಾ ಪರಿಷತ್ ಪ್ರತಿಜ್ಞೆ
ಕಾಶಿ ಮಥುರಾಗಳ ವಿಮೋಚನೆಗಾಗಿ ಅಖಾಡಾ ಪರಿಷತ್ ಪ್ರತಿಜ್ಞೆ

ಪ್ರಯಾಗ: ಸಂತರ ಸರ್ವೋಚ್ಛ ಸಂಸ್ಥೆಯಾಗಿರುವ ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ) ಕಾಶಿ ವಿಶ್ವನಾಥ ಮಂದಿರ ಹಾಗೂ ಮಥುರಾ ಕೃಷ್ಣ ಜನ್ಮಭೂಮಿಯ ವಿಮೋಚನೆಗೆ ಅಭಿಯಾನ ಪ್ರಾರಂಭಿಸಲು ನಿರ್ಧರಿಸಿದೆ. 

ಪ್ರಯಾಗ್ ರಾಜ್ ನಲ್ಲಿ ಸೆ.08 ರಂದು ನಡೆದ ಸಭೆಯಲ್ಲಿ ಈ ಬಗ್ಗೆ ಅಧಿಕೃತ ನಿರ್ಣಯ ಕೈಗೊಳ್ಳಲಾಗಿದೆ.

ಮೊದಲ ಹಂತದಲ್ಲಿ ಮಾತುಕತೆ ಮೂಲಕ ವಿಮೋಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಯತ್ನಿಸಬೇಕು, ಒಂದು ವೇಳೆ ಅದು ವಿಫಲಗೊಂಡಲ್ಲಿ ಕಾನೂನಿನ ಮೊರೆ ಹೋಗಬೇಕೆಂದು ಸಂತರು ನಿರ್ಧರಿಸಿದ್ದಾರೆ. ಎರಡೂ ಮಂದಿರಗಳ ಪಕ್ಕದಲ್ಲಿರುವ ಮಸೀದಿಯನ್ನು ಬಿಟ್ಟುಕೊಡುವಂತೆ ಸಂಬಂಧಪಟ್ಟವರಿಗೆ ಸಂತರ ಪರಿಷತ್ ಕರೆ ನೀಡಿದೆ. 

ಈ ಉದ್ದೇಶ ಈಡೇರಿಸಲು ವಿಶ್ವಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಕಾರವನ್ನೂ ಎಬಿಎಪಿ ಕೋರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com