ಸೆ. 21 ರಿಂದ ತಾಜ್‍ಮಹಲ್‍, ಆಗ್ರಾ ಕೋಟೆ ಪ್ರವಾಸಿಗರ ವೀಕ್ಷಣೆಗೆ ಮುಕ್ತ

ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ವಿಶ್ವಪ್ರಸಿದ್ಧ ತಾಜ್‍ಮಹಲ್‍ ಮತ್ತು ಆಗ್ರಾ ಕೋಟೆ ಸೆಪ್ಟೆಂಬರ್ 21 ರಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿವೆ.
ತಾಜ್ ಮಹಲ್
ತಾಜ್ ಮಹಲ್

ಆಗ್ರಾ: ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ವಿಶ್ವಪ್ರಸಿದ್ಧ ತಾಜ್‍ಮಹಲ್‍ ಮತ್ತು ಆಗ್ರಾ ಕೋಟೆ ಸೆಪ್ಟೆಂಬರ್ 21 ರಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿವೆ.


ಸೆ. 21 ರಿಂದ ವಿಶ್ವಪ್ರಸಿದ್ಧ ತಾಜ್ ಮಹಲ್ ಮತ್ತು ಐತಿಹಾಸಿಕ ಕೆಂಪು ಕೋಟೆಯನ್ನು ಪ್ರವಾಸಿಗರಿಗಾಗಿ ತೆರೆಯಲಾಗುವುದು. ಆದರೆ ಪ್ರವಾಸಿಗರು ಕಟ್ಟುನಿಟ್ಟಾಗಿ ಕೊವಿಡ್‍-19 ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ ಎಂದು ಆಗ್ರಾ ಜಿಲ್ಲಾಧಿಕಾರಿ ಪ್ರಭು ನಾರಾಯಣ್ ಸಿಂಗ್ ಸೋಮವಾರ ಹೇಳಿದ್ದಾರೆ.

ಆಗ್ರಾದಲ್ಲಿನ ಇತರ ಎಲ್ಲಾ ಸ್ಮಾರಕಗಳನ್ನು ಸೆಪ್ಟೆಬರ್ 1 ರಿಂದಲೇ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. 

ಸೋಮವಾರ ಪರಿಶೀಲನೆಯ ನಂತರ ತಾಜ್‍ಮಹಲ್‍ ಮತ್ತು ಆಗ್ರಾ ಕೋಟೆಯನ್ನು ಸಹ ಸೆಪ್ಟೆಂಬರ್ 21ರಿಂದ ತೆರೆಯುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com