ಕೋವಿಡ್-19 ಲಸಿಕೆ ಪ್ರಯೋಗ ರದ್ದುಗೊಳಿಸದ ಸೆರಂ ಇನ್ಸ್ ಟಿಟ್ಯೂಟ್ ಗೆ ಶೋಕಾಸ್ ನೋಟಿಸ್

ಆಕ್ಸ್‌ಫರ್ಡ್‌ ಸಂಶೋಧಿಸಿರುವ 'ಕೋವಿಶೀಲ್ಡ್‌' ಲಸಿಕೆಯ ಎರಡನೇ ಹಂತದ ಪ್ರಯೋಗ ರದ್ದುಗೊಳಿಸಿದ ಫಾರ್ಮಾ ದೈತ್ಯ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ)ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಬುಧವಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಕೋವಿಡ್ ಶಿಲ್ಡ್ ಲಸಿಕೆ
ಕೋವಿಡ್ ಶಿಲ್ಡ್ ಲಸಿಕೆ

ನವದೆಹಲಿ: ಆಕ್ಸ್‌ಫರ್ಡ್‌ ಸಂಶೋಧಿಸಿರುವ 'ಕೋವಿಶೀಲ್ಡ್‌' ಲಸಿಕೆಯ ಎರಡನೇ ಹಂತದ ಪ್ರಯೋಗ ರದ್ದುಗೊಳಿಸಿದ ಫಾರ್ಮಾ ದೈತ್ಯ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ)ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಬುಧವಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

ಮಹಾಮಾರಿ ಕೊರೋನಾ ವೈರಸ್​ ಗೆ ಕಂಡು ಹಿಡಿಯಲಾಗಿದ್ದ ಲಸಿಕೆ ಪ್ರಯೋಗದ ವೇಳೆ ಸ್ವಯಂಸೇವಕರೊಬ್ಬರಲ್ಲಿ ವಿಚಿತ್ರ ಕಾಯಿಲೆ ಪತ್ತೆಯಾದ ಹಿನ್ನಲೆಯಲ್ಲಿ ಬ್ರಿಟನ್ ಮೂಲದ  ಔಷಧ ಕಂಪನಿ ಅಸ್ಟ್ರಾ ಝೆನೆಕಾ ಲಸಿಕಾ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಅಲ್ಲದೆ ಅಮೆರಿಕ, ಬ್ರಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲೂ ಈ ಲಸಿಕೆಯ ಪ್ರಯೋಗವನ್ನು ರದ್ದುಗೊಳಿಸಲಾಗಿದೆ. 

ಭಾರತದಲ್ಲೂ ಲಸಿಕೆಯ ಪ್ರಯೋಗ ರದ್ದುಗೊಳಿಸಿದ ಸೆರಂ ಇನ್‌ಸ್ಟಿಟ್ಯೂಟ್ ಗೆ ಡಿಸಿಜಿಐ ಶೋಕಾಸ್ ನೋಟಿಸ್ ನೀಡಿದ್ದು, ರೋಗಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವವರೆಗೆ ಲಸಿಕೆಯ ಪ್ರಯೋಗ ನಿಲ್ಲಿಸದಿರುವುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.

ಶೋಕಾಸ್ ನೋಟಿಸ್ ಗೆ ತಕ್ಷಣ ಉತ್ತರ ನೀಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಡಿಸಿಜಿಐ ಎಚ್ಚರಿಕೆ ನೀಡಿದೆ.

ಇಂಗ್ಲೆಂಡ್ ನಲ್ಲಿ ಲಸಿಕೆಯ ಪ್ರಯೋಗ ರದ್ದುಗೊಳಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ್ದ ಸೆರಂ ಇನ್‌ಸ್ಟಿಟ್ಯೂಟ್, ಅಲ್ಲಿ ನಡೆಸಿದ ಪ್ರಯೋಗಗಳ ಬಗ್ಗೆ ನಾವು ಪ್ರತಿಕ್ರಿಯೆ ನೀಡುವುದಕ್ಕೆ ಹೋಗುವುದಿಲ್ಲ. ಆದರೆ ನಾವು ನಮ್ಮ ಸಂಶೋಧನೆಯನ್ನು ಯಾವುದೇ ಕಾರಣಕ್ಕೂ ತಡೆ ಹಿಡಿಯುವುದಿಲ್ಲ. ಏಕೆಂದರೆ ನಮ್ಮ ಪ್ರಯೋಗಗಳಲ್ಲಿ ಯಾವುದೇ ದೋಷಗಳು ಕಂಡು ಬಂದಿಲ್ಲ. ಈ ಹಿನ್ನೆಲೆ ಮೊದಲಿನಂತೆ ಲಸಿಕೆ ಸಂಶೋಧನಾ ಪ್ರಯೋಗವು ನಡೆಯಲಿದೆ ಎಂದು ಹೇಳಿತ್ತು.

ಅಸ್ಟ್ರಾ ಝೆನೆಕಾ ಸಂಸ್ಥೆಯು ಬ್ರಿಟನ್ ನ ಪ್ರತಿಷ್ಠಿತ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಜತೆ ಸೇರಿ ಕೊರೊನಾಗೆ ಔಷಧವನ್ನು ಅಭಿವೃದ್ಧಿಪಡಿಸುತ್ತಿದೆ. ಕೊವಿಡ್ ಲಸಿಕೆ ಕಂಡುಹಿಡಿಯುವ ಪ್ರಕ್ರಿಯೆಯಲ್ಲಿ ಈ ಸಂಸ್ಥೆ ಕೂಡ ಮುಂಚೂಣಿಯಲ್ಲಿದ್ದು, ಈಗಾಗಲೇ ರ್ಯಾಂಡಮ್​ ಕ್ಲಿನಿಕಲ್​ ಟ್ರಯಲ್​ ಅನ್ನು ಕಂಪನಿ ನಡೆಸುತ್ತಿದೆ.  ಇದೇ ಪರೀಕ್ಷೆ​ ವೇಳೆ ಒರ್ವ ಸ್ವಯಂ ಸೇವಕನಿಗೆ ನೀಡಿದ ಔಷಧದಿಂದ ಆತನಲ್ಲಿ ವಿವರಿಸಲಾಗದ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದೆ. ಹೀಗಾಗಿ ಈ ಪರೀಕ್ಷೆಗೆ ಸಂಸ್ಥೆ ವಿರಾಮ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com