ಕಂಗನಾ ರಾನಾವತ್ ಬಗ್ಗೆ ವಿವಾದಿತ ಹೇಳಿಕೆ:ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಗೆ ಬೆದರಿಕೆ ಕರೆ

ಬಾಲಿವುಡ್ ನಟಿ ಕಂಗನಾ ರಾನಾವತ್ ಅವರ ಬಗ್ಗೆ ನೀಡಿರುವ ಹೇಳಿಕೆ ಮತ್ತು ಹೊಂದಿರುವ ನಿಲುವಿಗೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರಿಗೆ ಬೆದರಿಕೆ ಕರೆ ಬಂದಿದೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್

ಮುಂಬೈ:ಬಾಲಿವುಡ್ ನಟಿ ಕಂಗನಾ ರಾನಾವತ್ ಅವರ ಬಗ್ಗೆ ನೀಡಿರುವ ಹೇಳಿಕೆ ಮತ್ತು ಹೊಂದಿರುವ ನಿಲುವಿಗೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರಿಗೆ ಮತ್ತೆ ಬೆದರಿಕೆ ಕರೆಗಳು ಬಂದಿದೆ ಎಂದು ತಿಳಿದುಬಂದಿದೆ.

ಹಿಮಾಚಲ ಪ್ರದೇಶ ಮತ್ತು ಬೇರೆ ಕಡೆಗಳಿಂದ ಅನಾಮಧೇಯ ಸಂಖ್ಯೆಗಳಿಂದ ಅನಿಲ್ ದೇಶ್ ಮುಖ್ ಅವರಿಗೆ ನಿನ್ನೆ ರಾತ್ರಿ ಮತ್ತು ಇಂದು ಮುಂಜಾನೆ 6 ಗಂಟೆ ಹೊತ್ತಿಗೆ ಬೆದರಿಕೆ ಕರೆಗಳು ಬಂದಿದ್ದು, ನಟಿಯ ವಿವಾದಕ್ಕೆ ಸಂಬಂಧಿಸಿದ ವಿಷಯದಲ್ಲಿ ನೀವು ಮೂಗು ತೂರಿಸಬೇಡಿ ಎಂದು ಕರೆ ಮಾಡಿರುವ ವ್ಯಕ್ತಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಗೃಹ ಸಚಿವರಿಗೆ ನಿನ್ನೆ ಮತ್ತು ಇನ್ನು ಆರೇಳು ಬೆದರಿಕೆ ಕರೆಗಳು ಬಂದಿವೆ. ಅದರಲ್ಲಿ ಒಂದು ಬಾರಿ ಕರೆ ಮಾಡಿದವರು ತನ್ನನ್ನು ಮೃತ್ಯುಂಜಯ್ ಗಾರ್ಗ್ ಎಂದು ಗುರುತಿಸಿಕೊಂಡಿದ್ದಾರೆ ಎಂದು ಗೃಹ ಸಚಿವರ ಆಪ್ತರು ತಿಳಿಸಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐ ನಡೆಸುತ್ತಿರುವುದರ ಮಧ್ಯೆ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಕಂಗನಾ ರಾನಾವತ್ ತೀವ್ರ ಟೀಕೆ ಎದುರಿಸುತ್ತಿದ್ದಾರೆ.

ಈ ಮಧ್ಯೆ ಇಂದು ನಟಿ ಕಂಗನಾ ರಾನಾವತ್ ಮುಂಬೈಗೆ ಆಗಮಿಸುತ್ತಿದ್ದು, ಇಂದು ಬೆಳಗ್ಗೆ ಹಿಮಾಚಲ ಪ್ರದೇಶದ ಪಮಿರ್ಪುರ್ ಜಿಲ್ಲೆಯಲ್ಲಿ ಕೊಥಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಚಂಡೀಗಢ ಮೂಲಕವಾಗಿ ಮುಂಬೈಗೆ ತೆರಳಿದ್ದಾರೆ.

ತಮಗೆ ಮುಂಬೈ ಪೊಲೀಸರ ಮೇಲೆ ಚಲನಚಿತ್ರ ಮಾಫಿಯಾಕ್ಕಿಂತಲೂ ಹೆಚ್ಚು ಭಯವಿದ್ದು ತಮಗೆ ಹಿಮಾಚಲ ಪ್ರದೇಶ ಸರ್ಕಾರ ಅಥವಾ ಕೇಂದ್ರ ಸರ್ಕಾರ ಭದ್ರತೆ ಒದಗಿಸಬೇಕೆಂದು ಕಂಗನಾ ರಾನಾವತ್ ಕೇಳಿಕೊಂಡಿದ್ದರು. ಅದರ ಪ್ರಕಾರ ಹಿಮಾಚಲ ಪ್ರದೇಶ ಸರ್ಕಾರ ರಕ್ಷಣೆ ನೀಡಿದೆ. ಇತ್ತ ಕೇಂದ್ರ ಸರ್ಕಾರ ಕೂಡ ವೈ ಸಾಲಿನ ಭದ್ರತೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com