ಆರ್ಥಿಕತೆ ಶೇ. 9ಕ್ಕೆ ಕುಸಿತ: ಸರ್ಕಾರ ಸಾಕಷ್ಟು ನೇರ ಹಣಕಾಸಿನ ಬೆಂಬಲ ನೀಡುತ್ತಿಲ್ಲ-ಕ್ರಿಸಿಲ್

ಕೊರೋನಾವೈರಸ್  ಸೋಂಕು ಇನ್ನೂ ಉತ್ತುಂಗಕ್ಕೇರಿರುವುದರಿಂದ ಮತ್ತು ಸರ್ಕಾರವು ಸಾಕಷ್ಟು ನೇರ ಹಣಕಾಸಿನ ನೆರವು ನೀಡದ ಕಾರಣ 2020-21ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 9 ರಷ್ಟು ಕುಗ್ಗಲಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ಗುರುವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಕೊರೋನಾವೈರಸ್  ಸೋಂಕು ಇನ್ನೂ ಉತ್ತುಂಗಕ್ಕೇರಿರುವುದರಿಂದ ಮತ್ತು ಸರ್ಕಾರವು ಸಾಕಷ್ಟು ನೇರ ಹಣಕಾಸಿನ ನೆರವು ನೀಡದ ಕಾರಣ 2020-21ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 9 ರಷ್ಟು ಕುಗ್ಗಲಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ಗುರುವಾರ ಹೇಳಿದೆ.

ಮೇ ತಿಂಗಳಲ್ಲಿ, ಆರ್ಥಿಕತೆಯು ಶೇ. 5 ರಷ್ಟು ಕುಗ್ಗಲಿದೆ ಎಂದು ಕ್ರಿಸಿಲ್  ಅಂದಾಜಿಸಿತ್ತು. ಜೂನ್ ತ್ರೈಮಾಸಿಕದಲ್ಲಿ ಶೇ. 23.9 ರಷ್ಟು ಆರ್ಥಿಕತೆ ಕುಸಿತದ ಅಧಿಕೃತ ಮಾಹಿತಿ ಹೊರಬಂದ ಬೆನ್ನಲ್ಲೇ, ಈ ಹೊಸ ಅಂದಾಜನ್ನು ಮಾಡಲಾಗಿದೆ. 

ಆರ್ಥಿಕತೆ ಶೇ. 9 ರಷ್ಟು ಕುಸಿತ 1950 ನಂತರ ಅತ್ಯಂತ ಹೆಚ್ಚಾಗಲಿದೆ ಎಂದು ಹೇಳಿರುವ ಕ್ರಿಸಿಲ್, ಸರ್ಕಾರ 20 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಆದರೆ, ವಾಸ್ತವಿಕ ಹೊಸ ವೆಚ್ಚ ಶೇ. 2 ಜಿಡಿಪಿಗಿಂತಲೂ ಕಡಿಮೆಯಿದೆ ಎಂದಿದೆ.

ಸಾಂಕ್ರಾಮಿಕ ರೋಗವು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಜೊತೆಗೆ ಸರ್ಕಾರ ಸೂಕ್ತ ನೇರ ಆರ್ಥಿಕ ನೆರವನ್ನು ನೀಡದೆ ಇರುವುದರಿಂದ ಹಿಂದೆ ಅಂದಾಜಿಸಿದಂತೆ ಮುಂದೆ ತೊಂದರೆಯ ಮುನ್ಸೂಚನೆ ಸಿಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಹಣಕಾಸಿನ ಪರಿಸ್ಥಿತಿಯು ಆರ್ಥಿಕ ನೆರವಿನ ಮೇಲೆ ಹೆಚ್ಚು ಹಣ ವೆಚ್ಚ ಮಾಡದಂತೆ ತಡೆಯುತ್ತಿದೆ. ಈವರೆಗೂ ನೀತಿಗಳ ಮೂಲಕ ಅಭಿವೃದ್ಧಿಯನ್ನು ಕಡಿಮೆಗೊಳಿಸಲಾಗಿದೆ. ಮೇ ತಿಂಗಳಲ್ಲಿ ಜಿಡಿಪಿಯ ಶೇ. 1ರಷ್ಟು  ಹೆಚ್ಚುವರಿ ನೇರ ಆರ್ಥಿಕ ನೆರವನ್ನು ಊಹಿಸಲಾಗಿತ್ತು. ಆದರೆ, ಊಹಿಸಿದಂತೆ ಆಗಿಲ್ಲ ಎಂದು ಏಜೆನ್ಸಿ ಹೇಳಿದೆ.

ಸೆಪ್ಟೆಂಬರ್- ಅಕ್ಟೋಬರ್ ವೇಳೆಯಲ್ಲಿ ಸಾಂಕ್ರಾಮಿಕ ರೋಗ ಮತ್ತಷ್ಟು ಹೆಚ್ಚಾದರೆ ಈ ವರ್ಷಾಂತ್ಯದ ವೇಳೆಗೆ ಜಿಡಿಪಿ ಬೆಳವಣಿಗೆ ದರ ಕಡಿಮೆಯತ್ತ ಸಾಗಲಿದೆ.ಮಧ್ಯಂತರ ಅವಧಿಯಲ್ಲಿ ಶೇ. 13 ರಷ್ಟು ವಾಸ್ತವ ಜಿಡಿಪಿ ಶಾಶ್ವತವಾಗಿ ನಾಶವಾಗುವುದಾಗಿ ನಿರೀಕ್ಷಿಸಿರುವುದಾಗಿ ತಿಳಿಸಿದೆ.

2021-22ರಲ್ಲಿ ಜಿಡಿಪಿ ಬೆಳವಣಿಗೆಯು ಶೇ. 10 ಕ್ಕೆ ಇಳಿಯಲಿದೆ, ಆದರೆ ಮಧ್ಯಮ ಅವಧಿಯ ಭವಿಷ್ಯವು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕ್ರಿಸಿಲ್ ಸಂಸ್ಥೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com