ಇಂದು ಬೆಳಗ್ಗೆ 10 ಗಂಟೆಗೆ ಅಂಬಾಲಾದಲ್ಲಿ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಗೆ ಅಧಿಕೃತ ಸೇರ್ಪಡೆ

ಫ್ರಾನ್ಸ್ ನಲ್ಲಿ ತಯಾರಾದ ರಫೇಲ್ ಯುದ್ಧ ವಿಮಾನ ಗುರುವಾರ ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ. ಹರ್ಯಾಣ ಬಳಿಯ ಅಂಬಾಲಾ ವಾಯುನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಯುದ್ಧ ವಿಮಾನವನ್ನು ಅಧಿಕೃತವಾಗಿ ಸೇರ್ಪಡೆಗೊಳಿಸುವ ಕಾರ್ಯಕ್ರಮ ನಡೆಯಲಿದೆ. ವಾಯುಪಡೆಯ 17 ಸ್ಕ್ವಾಡ್ರನ್ ಗೋಲ್ಡನ್ ಆರ್ರೋಸ್ ನ ಭಾಗವಾಗಲಿದೆ ಈ ಯುದ್ಧ ವಿಮಾನ.
ರಫೇಲ್ ಯುದ್ಧ ವಿಮಾನ
ರಫೇಲ್ ಯುದ್ಧ ವಿಮಾನ

ನವದೆಹಲಿ: ಫ್ರಾನ್ಸ್ ನಲ್ಲಿ ತಯಾರಾದ ರಫೇಲ್ ಯುದ್ಧ ವಿಮಾನ ಗುರುವಾರ ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ. ಹರ್ಯಾಣ ಬಳಿಯ ಅಂಬಾಲಾ ವಾಯುನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಯುದ್ಧ ವಿಮಾನವನ್ನು ಅಧಿಕೃತವಾಗಿ ಸೇರ್ಪಡೆಗೊಳಿಸುವ ಕಾರ್ಯಕ್ರಮ ನಡೆಯಲಿದೆ. ವಾಯುಪಡೆಯ 17 ಸ್ಕ್ವಾಡ್ರನ್ ಗೋಲ್ಡನ್ ಆರ್ರೋಸ್ ನ ಭಾಗವಾಗಲಿದೆ ಈ ಯುದ್ಧ ವಿಮಾನ.

ಕಳೆದ ಜುಲೈ 27ರಂದು ಫ್ರಾನ್ಸ್ ನಿಂದ 5 ರಫೇಲ್ ಯುದ್ಧ ವಿಮಾನ ಹರ್ಯಾಣದ ಅಂಬಾಲಾದಲ್ಲಿರುವ ವಾಯುನೆಲೆಗೆ ಬಂದಿಳಿದಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ನ ಸೇನಾಪಡೆ ಸಚಿವ ಫ್ಲೋರೆನ್ಸ್ ಪರ್ಲಿ ಇಂದಿನ ಸಮಾರಂಭದ ಮುಖ್ಯ ಅತಿಥಿಗಳಾಗಿರುತ್ತಾರೆ.

ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಇಂದು ಮಹತ್ವದ ದಿನವಾಗಿದ್ದು, ಈ ಕಾರ್ಯಕ್ರಮಕ್ಕೆ ರಕ್ಷಣಾ ವಲಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯು ಸಿಬ್ಬಂದಿ ಮುಖ್ಯಸ್ಥ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ, ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್, ರಕ್ಷಣಾ ಇಲಾಖೆ ಆರ್ & ಡಿ ಕಾರ್ಯದರ್ಶಿ ಡಾ.ಜಿ.ಸತೀಶ್ ರೆಡ್ಡಿ ಮತ್ತು ಅಧ್ಯಕ್ಷ ಡಿ.ಆರ್.ಡಿ.ಒ ಜೊತೆಗೆ ರಕ್ಷಣಾ ಮತ್ತು ಸಶಸ್ತ್ರ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸಾಕ್ಷಿಯಾಗಲಿದ್ದಾರೆ.

ಫ್ರೆಂಚ್ ನಿಯೋಗವನ್ನು ಭಾರತದ ಫ್ರಾನ್ಸ್‌ನ ರಾಯಭಾರಿ ಎಮ್ಯಾನುಯೆಲ್ ಲೆನೈನ್, ಏರ್ ಜನರಲ್ ಎರಿಕ್ ಆಟೆಲೆಟ್, ಫ್ರೆಂಚ್ ವಾಯುಪಡೆಯ ವಾಯು ಸಿಬ್ಬಂದಿ ಉಪಾಧ್ಯಕ್ಷರು ಮತ್ತು ಇತರ ಹಿರಿಯ ಅಧಿಕಾರಿಗಳು ಪ್ರತಿನಿಧಿಸಲಿದ್ದಾರೆ.

ಅಂಬಾಲಾದಲ್ಲಿ ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ, ರಫೇಲ್ ವಿಮಾನದ ವಿದ್ಯುಕ್ತ ಅನಾವರಣ, ಸಾಂಪ್ರದಾಯಿಕ 'ಸರ್ವ ಧರ್ಮ ಪೂಜೆ', ರಫೇಲ್ ಮತ್ತು ತೇಜಸ್ ವಿಮಾನಗಳ ವಾಯು ಪ್ರದರ್ಶನ ಮತ್ತು 'ಸಾರಂಗ್ ಏರೋಬ್ಯಾಟಿಕ್ ತಂಡವನ್ನು ಒಳಗೊಂಡಿರುತ್ತದೆ. ನಂತರ, ರಫೇಲ್ ವಿಮಾನಕ್ಕೆ ಸಾಂಪ್ರದಾಯಿಕ ನೀರಿನ ಫಿರಂಗಿ ಮೂಲಕ ವಂದನೆ ನೀಡಲಾಗುವುದು. ರಫೇಲ್ ವಿಮಾನವನ್ನು 17 ಸ್ಕ್ವಾಡ್ರನ್‌ಗೆ ವಿದ್ಯುಕ್ತವಾಗಿ ಸೇರ್ಪಡೆಗೊಳಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com