ನಟಿ ಕಂಗನಾ ಹೇಳಿಕೆ ಸಾಮಾನ್ಯ ಜನರಿಗೆ ಅಪ್ರಸ್ತುತ: ಶರದ್ ಪವಾರ್
ಬಾಲಿವುಡ್ ನಟಿ ಕಂಗನಾ ರನೌತ್ ಅವರ ಇತ್ತೀಚಿನ ಟೀಕೆಗಳ ತೀವ್ರತೆಯನ್ನು ಕಡಿಮೆ ಮಾಡಲು ಯತ್ನಿಸಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ಇಂತಹ ಹೇಳಿಕೆಗಳು ಸಾಮಾನ್ಯ ಜನರಿಗೆ ಅಪ್ರಸ್ತುತವಾಗುತ್ತವೆ ಎಂದು ಬುಧವಾರ ಹೇಳಿದ್ದಾರೆ.
Published: 10th September 2020 12:39 AM | Last Updated: 10th September 2020 12:39 AM | A+A A-

ಶರದ್ ಪವಾರ್
ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಅವರ ಇತ್ತೀಚಿನ ಟೀಕೆಗಳ ತೀವ್ರತೆಯನ್ನು ಕಡಿಮೆ ಮಾಡಲು ಯತ್ನಿಸಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ಇಂತಹ ಹೇಳಿಕೆಗಳು ಸಾಮಾನ್ಯ ಜನರಿಗೆ ಅಪ್ರಸ್ತುತವಾಗುತ್ತವೆ ಎಂದು ಬುಧವಾರ ಹೇಳಿದ್ದಾರೆ.
ನಟಿ ಕಂಗನಾ ರನೌತ್ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್ ಅವರು, ಅಂತಹ ಹೇಳಿಕೆಗಳಿಗೆ ಮಹತ್ವ ನೀಡುವ ಅಗತ್ಯ ಇಲ್ಲ ಎಂದಿದ್ದಾರೆ.
ಅಂತಹ ಹೇಳಿಕೆಗಳು ಸಾಮಾನ್ಯ ಸಾರ್ವಜನಿಕರಿಗೆ ಅಪ್ರಸ್ತುತವಾಗುತ್ತವೆ. ಜನರು ಇಂತಹ ವಿಷಯಗಳತ್ತ ಗಮನ ಹರಿಸುವುದಿಲ್ಲ. ಅವುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಬದಲಿಗೆ ಮಾಧ್ಯಮಗಳು ಇಂತಹ ಸುದ್ದಿಗಳಿಗೆ ಹೆಚ್ಚಿನ ಗಮನ ನೀಡುತ್ತಿವೆ ಎಂದು ಪವಾರ್ ಹೇಳಿದ್ದಾರೆ.
ಇಂದು ಬೆಳಗ್ಗೆ ಬಿಎಂಸಿ ನಟಿ ಕಂಗನಾ ಅವರ ಕಚೇರಿ ತೆರವುಗೊಳಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಅವರ ಕಚೇರಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ ಅದು ಅನಧಿಕೃತ ನಿರ್ಮಾಣ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಮುಂಬೈನಲ್ಲಿ ಅಕ್ರಮ ನಿರ್ಮಾಣ ಹೊಸತಲ್ಲ. ಬಿಎಂಸಿ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದರೆ ಅದು ಸರಿ ಎಂದರು.
ನಟಿ ಕಂಗನಾ ಅವರು ವಾಣಿಜ್ಯ ನಗರಿ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಆಡಳಿತಾರೂಢ ಶಿವಸೇನೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.