ಮಹಾರಾಷ್ಟ್ರ: ಕಂಗನಾ ರಣಾವತ್ ಪರ ರಾಜ್ಯಪಾಲರು ಬ್ಯಾಟಿಂಗ್!
ಬಾಲಿವುಡ್ ನಟಿ ಕಂಗನಾ ರಣಾವತ್ ಎಪಿಸೋಡ್ ನಿರ್ವಹಣೆ ಹಾಗೂ ಆಕೆಯ ಬಾಂದ್ರಾದಲ್ಲಿನ ನಿವಾಸದ ಕೆಲ ಭಾಗಗಳನ್ನು ಧ್ವಂಸಗೊಳಿಸಿರುವ ಬೃಹತ್ ಮುಂಬೈ ಪಾಲಿಕೆ ವಿರುದ್ಧ ಮಹಾರಾಷ್ಟ್ರ ರಾಜ್ಯಪಾಲ ಬಿಎಸ್ ಬಿ.ಎಸ್. ಕೊಶಿಯಾರಿ ತೀವ್ರ ಅಸಮಾಧಾನಗೊಂಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
Published: 10th September 2020 08:57 PM | Last Updated: 10th September 2020 09:02 PM | A+A A-

ಮಹಾರಾಷ್ಟ್ರ ರಾಜ್ಯಪಾಲ ಕೊಶಿಯಾರಿ, ಕಂಗನಾ
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಎಪಿಸೋಡ್ ನಿರ್ವಹಣೆ ಹಾಗೂ ಆಕೆಯ ಬಾಂದ್ರಾದಲ್ಲಿನ ನಿವಾಸದ ಕೆಲ ಭಾಗಗಳನ್ನು ಧ್ವಂಸಗೊಳಿಸಿರುವ ಬೃಹತ್ ಮುಂಬೈ ಪಾಲಿಕೆ ವಿರುದ್ಧ ಮಹಾರಾಷ್ಟ್ರ ರಾಜ್ಯಪಾಲ ಬಿಎಸ್ ಬಿ.ಎಸ್. ಕೊಶಿಯಾರಿ ತೀವ್ರ ಅಸಮಾಧಾನಗೊಂಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಧಾನ ಸಲಹೆಗಾರ ಅಜಯ್ ಮೆಹ್ತಾ ಅವರಿಗೆ ರಾಜ್ಯಪಾಲರು ನೋಟಿಸ್ ನೀಡಿದ್ದು, ಇಡೀ ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಮೂಲಗಳು ಹೇಳಿವೆ.
ಬೃಹನ್ ಮುಂಬೈ ಪಾಲಿಕೆ ಠಾಕ್ರೆ ನೇತೃತ್ವದ ಶಿವಸೇನಾ ನಿಯಂತ್ರಣದಲ್ಲಿದೆ. ಪಾಲಿಕೆಯ ಅನುಮತಿ ಪಡೆಯದೆ ಪಾಲಿಕೆ ತಂಡ
ಬುಲ್ಡೆಜರ್ ಮತ್ತು ಅಗೆಯುವ ಯಂತ್ರಗಳಿಂದ ರಣಾವತ್ ಬಂಗ್ಲೆಯ ಕೆಲ ಭಾಗಗಳನ್ನು ಧ್ವಂಸಗೊಳಿಸಿದ್ದಾರೆ ಎಂಬ ಆರೋಪವಿದೆ.
ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕಂಗನಾ ರಣಾವತ್ ಹೋಲಿಸಿದ ಬಳಿಕ ಶಿವಸೇನೆ ಹಾಗೂ ಆಕೆಯ ನಡುವೆ ವಾಕ್ ಸಮರ ನಡೆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸಿನಿಮಾ ಮಾಫಿಯಾಗಿಂತಲೂ ಮುಂಬೈ ಪೊಲೀಸರು ಕಂಡರೆ ಭಯವಾಗುವುದಾಗಿ ಕಂಗನಾ ಹೇಳಿಕೆ ನೀಡಿದ್ದರು.