ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ (ಪಿಎಂಎಂಎಸ್.ವೈ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಿದ್ದಾರೆ. 

ನವದೆಹಲಿ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ (ಪಿಎಂಎಂಎಸ್.ವೈ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಿದ್ದಾರೆ. 

ಡಿಜಿಟಲ್ ವೇದಿಕೆ ಮೂಲಕ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಮೋದಿಯವರು ಚಾಲನೆ ನೀಡಿದ್ದು, ಇದೇ ವೇಳೆ ರೈತರ ನೇರ ಬಳಕೆಗಾಗಿ ಸಮಗ್ರ ತಳಿ ಸುಧಾರಣಾ ಮಾರುಕಟ್ಟೆ ಮತ್ತು ಮಾಹಿತಿ ಪೋರ್ಟಲ್ ಇ-ಗೋಪಾಲ ಆ್ಯಪ್ ಅನ್ನೂ ಉದ್ಘಾಟಿಸಿದ್ದಾರೆ.

ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಪ್ರಧಾನಿ ಮೋದಿಯವರು, ಇಂದು, ದೇಶದ 21 ರಾಜ್ಯಗಳಲ್ಲಿ ಪ್ರಧಾನಿ ಮತ್ಸ್ಯ ಸಂಪದ ಯೋಜನೆಯನ್ನು ಆರಂಭಿಸಲಾಗಿದೆ. ಮುಂದಿನ 4-5 ವರ್ಷಗಳಲ್ಲಿ ಈ ಯೋಜನೆಗೆ 20 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು. ಈ ಪೈಕಿ ಇಂದು ರೂ.1700 ಕೋಟಿಗಳ ಕಾಮಗಾರಿ ಪ್ರಾರಂಭವಾಗುತ್ತಿದೆ ಎಂದು ಹೇಳಿದ್ದಾರೆ. 

ನಮ್ಮ ಗ್ರಾಮಗಳು 21 ನೇ ಶತಮಾನದ ಭಾರತದ ಶಕ್ತಿಯಾಗಬೇಕು, ಸ್ವಾವಲಂಬಿಯಾಗಬೇಕು, ಹಳ್ಳಿಗಳು ದೇಶದ ಶಕ್ತಿಯಾಗಬೇಕೆಂಬುದು ಈ ಎಲ್ಲಾ ಯೋಜನೆಗಳ ಹಿಂದಿನ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com