ಕಳೆದ ಮೇ ತಿಂಗಳಲ್ಲೇ ಭಾರತದಲ್ಲಿ 64 ಲಕ್ಷ ಕೊರೋನಾ ಸೋಂಕಿತರಿದ್ದರು: ಆಘಾತಕಾರಿ ವರದಿ ನೀಡಿದ ಐಸಿಎಂಆರ್ ಸೆರೋ ಸಮೀಕ್ಷೆ

ದೇಶದಲ್ಲಿ ದಿನಕಳೆದಂತೆ ವ್ಯಾಪಕವಾಗುತ್ತಿರುವ ಕೊರೋನಾ ವೈರಸ್ ಗೆ ಕಳೆದ ಮೇ ತಿಂಗಳಲ್ಲೇ 64 ಲಕ್ಷ ಕೊರೋನಾ ಸೋಂಕಿತರಿದ್ದರು ಎಂದು ಐಸಿಎಂಆರ್ ನ ಸೆರೋ ಸಮೀಕ್ಷೆ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ದಿನಕಳೆದಂತೆ ವ್ಯಾಪಕವಾಗುತ್ತಿರುವ ಕೊರೋನಾ ವೈರಸ್ ಗೆ ಕಳೆದ ಮೇ ತಿಂಗಳಲ್ಲೇ 64 ಲಕ್ಷ ಕೊರೋನಾ ಸೋಂಕಿತರಿದ್ದರು ಎಂದು ಐಸಿಎಂಆರ್ ನ ಸೆರೋ ಸಮೀಕ್ಷೆ ಹೇಳಿದೆ.

ಹೌದು... ಪ್ರಸ್ತುತ ಭಾರತದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 40 ಲಕ್ಷ ದಾಟಿದೆ. ಆದರೆ ಕಳೆದ ಮೇ ತಿಂಗಳಲ್ಲಿಯೇ ಅಂದರೆ ನಾಲ್ಕು ತಿಂಗಳ ಹಿಂದೆಯೇ ಭಾರತದಲ್ಲಿ 64 ಲಕ್ಷ ಮಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಐಸಿಎಂಆರ್ ನ ಸೆರೋ ಸಮೀಕ್ಷೆ ಹೇಳಿದೆ. ಮೇ 11ರಿಂದ ಜೂನ್ 4ರವರೆಗೆ  ನಡೆಸಿದ ಸೆರೋ ಸಮೀಕ್ಷೆಯಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಈ ಕುರಿತಂತೆ ಐಸಿಎಂಆರ್ ನ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ವರದಿ ಮಾಡಲಾಗಿದ್ದು, ಭಾರತದಲ್ಲಿ ಹಾಲಿ ದಾಖಲಾಗಿರುವ ಒಟ್ಟಾರೆ ಸೋಂಕಿತರ ಸಂಖ್ಯೆಗಿಂತ 1.5ಪಟ್ಟು ಸೋಂಕಿತರು ಮೇ ತಿಂಗಳಲ್ಲಿಯೇ ದಾಖಲಾಗಿತ್ತು. ಐಸಿಎಂಆರ್ ಸಮೀಕ್ಷೆ ಪ್ರಕಾರ, ನಾಲ್ಕು ತಿಂಗಳ ಹಿಂದೆಯೇ ಭಾರತದಲ್ಲಿ  64 ಲಕ್ಷ ಮಂದಿಗೆ ಸೋಂಕು ತಗುಲಿದ್ದಿರಬಹುದು. ಮೇ 11ರಿಂದ ಜೂನ್ 4ರವರೆಗೆ ನಡೆಸಿದ ಸೆರೋ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. 21 ರಾಜ್ಯಗಳ 70 ಜಿಲ್ಲೆಗಳ 700 ಪ್ರದೇಶಗಳಲ್ಲಿನ 28 ಸಾವಿರ ವ್ಯಕ್ತಿಗಳ ರಕ್ತದ ಮಾದರಿ ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗಿದೆ. 

ಈ 28ಸಾವಿರ ಮಂದಿ ಪೈಕಿ  256ಮಂದಿಗೆ ಪಾಸಿಟಿವ್ ಬಂದಿದೆ. ಹಾಗೆಯೇ 290 ಮಂದಿಗೆ ಯೂರೋ ಇಮ್ಮೂನ್ ಬಳಸಿ ಮರುಪರೀಕ್ಷೆ ನಡೆಸಿದಾಗ 157 ಜನರಿಗೆ ಪಾಸಿಟಿವ್ ಬಂದಿದೆ. ಇದರ ಆಧಾರದ ಮೇಲೆ ದೇಶಾದ್ಯಂತ ಕೊರೋನಾ ಸೋಂಕು ಶೇ. 0.73ರಷ್ಟು ಇದ್ದಿರಬಹುದು ಎಂಬ ಅಂದಾಜಿಗೆ ಬರಲಾಗಿದೆ. ಕೊರೋನಾ  ಸೋಂಕು ಪತ್ತೆಗಾಗಿ ನಡೆಸಲಾಗುತ್ತಿದ್ದ ಆರ್​ಟಿ-ಪಿಸಿಆರ್ ಪರೀಕ್ಷೆಯಲ್ಲಿ ಒಂದು ಪ್ರಕರಣ ದೃಢಪಟ್ಟರೆ 82-130 ಮಂದಿಯ ಸೋಂಕು ಗುಪ್ತವಾಗಿಯೇ ಅಥವಾ ಲೆಕಕ್ಕೆ ಸಿಗದೇ ಉಳಿದು ಹೋಗಿತ್ತು ಎನ್ನಲಾಗುತ್ತಿದೆ.

ಲೇಖನದಲ್ಲಿರುವಂತೆ ಫೆಬ್ರವರಿ ತಿಂಗಳಲ್ಲಿ ಭಾರತದಲ್ಲಿ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿದ್ದು. ಅದಾಗಿ 2-3 ತಿಂಗಳಲ್ಲೇ ದೇಶಾದ್ಯಂತ ಬರೋಬ್ಬರಿ 64 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲಿತ್ತು. ಮಾರ್ಚ್ ತಿಂಗಳಿಂದ ಕಟ್ಟುನಿಟ್ಟಾಗಿ ಲಾಕ್ಡೌನ್ ಹಾಕಿದ್ದರೂ ಪ್ರಕರಣಗಳ ಸಂಖ್ಯೆ ಮಾತ್ರ  ಗಣನೀಯವಾಗಿ ಏರುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com