ಸುಶಾಂತ್ ಸಿಂಗ್ ಸಾವಿನ ಪ್ರಕರಣ: ರಿಯಾ ಚಕ್ರವರ್ತಿ,ಸೋದರರಿಗೆ ಬೇಲ್ ನೀಡಲು ಮುಂಬೈ ಕೋರ್ಟ್ ನಕಾರ
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಮಾದಕವಸ್ತು ಸಂಬಂಧಿತ ಪ್ರಕರಣದ ಆರೋಪಿಗಳಾದ ನಟಿ ರಿಯಾ ಚಕ್ರವರ್ತಿ, ಅವರ ಸಹೋದರ ಶೋಯಿಕ್ ಅವರ ಜಾಮೀನು ಅರ್ಜಿಗಳನ್ನು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
Published: 11th September 2020 01:12 PM | Last Updated: 11th September 2020 01:12 PM | A+A A-

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಮಾದಕವಸ್ತು ಸಂಬಂಧಿತ ಪ್ರಕರಣದ ಆರೋಪಿಗಳಾದ ನಟಿ ರಿಯಾ ಚಕ್ರವರ್ತಿ, ಅವರ ಸಹೋದರ ಶೋಯಿಕ್ ಅವರ ಜಾಮೀನು ಅರ್ಜಿಗಳನ್ನು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ಇದಲ್ಲದೆ ಅಬ್ದುಲ್ ಬಸಿತ್, ಜೈದ್ ವಿಲಾತ್ರಾ, ದೀಪೇಶ್ ಸಾವಂತ್ ಮತ್ತು ಸ್ಯಾಮ್ಯುಯೆಲ್ ಮಿರಾಂಡಾ. ಅವರುಗಳ ಜಾಮೀನು ಅರ್ಜಿಗಳನ್ನು ಸಹ ನ್ಯಾಯಾಲಯ ತಿರಸ್ಕರಿಸಿದೆ. ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿದೆ
ಮೂರು ದಿನಗಳ ವಿಚಾರಣೆಯ ನಂತರ, ಸುಶಾಂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಂಗಳವಾರ ಬಂಧಿಸಿದೆ, ನಂತರ ಸ್ಥಳೀಯ ನ್ಯಾಯಾಲಯವು ಸೆಪ್ಟೆಂಬರ್ 22 ರವರೆಗೆ ನ್ಯಾಯಾಂಗ ಬಂಧನವಿಧಿಸಿ ಆದೇಶಿಸಿತ್ತು.
"ಒಮ್ಮೆ ನಾವು ಎನ್‌ಡಿಪಿಎಸ್ ಎಸ್‌ಪಿಎಲ್ ಕೋರ್ಟ್ ಆದೇಶದ ಪ್ರತಿಯನ್ನು ಪಡೆದರೆ, ಹೈಕೋರ್ಟ್‌ಗೆ ಮೊರೆ ಹೋಗುವ ಬಗ್ಗೆ ನಿರ್ಧರಿಸುತ್ತೇವೆ" ಎಂದು ರಿಯಾ ಪರ ವಕೀಲ ಸತೀಶ್ ಮನೆಶಿಂಧೆ ಹೇಳಿದರು.
ರಜಪೂತ್ ಮತ್ತು ಸಂಬಂಧಿತ ಹಣಕಾಸು ವಹಿವಾಟುಗಳು ಹಗೂ ಡ್ರಗ್ಸ್ ಖರೀದಿಯಲ್ಲಿ ರಿಯಾ ಪಾಲ್ಗೊಳ್ಳುವಿಕೆ ಬಹಿರಂಗವಾಗಿತ್ತು.