ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸುವಾಗ ಸುರಕ್ಷತೆ, ಪರಿಣಾಮಕಾರಿ ಅಂಕಿಅಂಶ ಮುಖ್ಯ: ಕಿರಣ್ ಮಜುಂದಾರ್ ಶಾ 

ಕೋವಿಡ್-19 ಬಗ್ಗೆ ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಕಾಲ ಕಳೆಯುತ್ತಿದ್ದಂತೆ ಜನರು ಈ ಸಮಸ್ಯೆಯ ನಡುವೆ ಬದುಕಲು ಕಲಿಯುತ್ತಿದ್ದಾರೆ. ಕೋವಿಡ್-19ಗೆ ಲಸಿಕೆ ಕಂಡುಹಿಡಿಯಲು ಬದಲಿ ಸಣ್ಣ ಮಾರ್ಗವಿಲ್ಲ, ಮೊದಲ ಹೆಜ್ಜೆಯೆಂದರೆ ಸವಿಸ್ತಾರವಾಗಿ ಅಂಕಿಅಂಶವನ್ನು ಹೊಂದುವುದು ಎಂದಿದ್ದಾರೆ.
ಕಿರಣ್ ಮಜುಂದಾರ್ ಶಾ
ಕಿರಣ್ ಮಜುಂದಾರ್ ಶಾ

ಕೋವಿಡ್-19 ಬಗ್ಗೆ ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಕಾಲ ಕಳೆಯುತ್ತಿದ್ದಂತೆ ಜನರು ಈ ಸಮಸ್ಯೆಯ ನಡುವೆ ಬದುಕಲು ಕಲಿಯುತ್ತಿದ್ದಾರೆ. ಕೋವಿಡ್-19ಗೆ ಲಸಿಕೆ ಕಂಡುಹಿಡಿಯಲು ಬದಲಿ ಸಣ್ಣ ಮಾರ್ಗವಿಲ್ಲ, ಮೊದಲ ಹೆಜ್ಜೆಯೆಂದರೆ ಸವಿಸ್ತಾರವಾಗಿ ಅಂಕಿಅಂಶವನ್ನು ಹೊಂದುವುದು ಎಂದಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಹಿರಿಯ ಪತ್ರಕರ್ತೆ ಕಾವೇರಿ ಬಮ್ಜೈ ಅವರ ಜೊತೆ ನಡೆಸಿದ ವೆಬಿನಾರ್ ಚಾಟಿಂಗ್ ನಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡರು. 

ಸ್ವಯಂಸೇವಾ ಕಾರ್ಯಕರ್ತರೊಬ್ಬರಲ್ಲಿ ಅಸಹಜ ಕಾಯಿಲೆ ಕಂಡುಬಂದ ಕಾರಣ ಸೆರಂ ಫಾರ್ಮಾದಲ್ಲಿ ಕೋವಿಡ್-19 ವಿರುದ್ದ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ, ಈ ಬಗ್ಗೆ ಏನು ಹೇಳುತ್ತೀರಿ, ಯಾವಾಗ ಲಸಿಕೆ ಬರಬಹುದು?
-ಇಲ್ಲಿ ವೈರಸ್ ವಿರುದ್ಧ ಹೋರಾಡಲು, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ಅಭಿವೃದ್ಧಿಪಡಿಸಬೇಕಾಗಿದೆ. ಲಸಿಕೆ ಕಂಡುಹಿಡಿಯಬೇಕಾದರೆ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡು, ಅಂಕಿಅಂಶಗಳನ್ನು ನಿಖರವಾಗಿ ಪಡೆದುಕೊಳ್ಳಬೇಕಾಗುತ್ತದೆ. ಇದು ದೇಹಕ್ಕೆ ಎಷ್ಟು ಸಮಯಗಳವರೆಗೆ ರಕ್ಷಣೆ ನೀಡುತ್ತದೆ ಎಂಬುದು ಕೂಡ ಮುಖ್ಯವಾಗುತ್ತದೆ. ಸದ್ಯಕ್ಕೆ ಯಾವುದಾದರೂ ಔಷಧ,ಲಸಿಕೆ ಕಂಡುಹಿಡಿಯಿರಿ ಎಂದು ಎಲ್ಲರೂ ಕೇಳುತ್ತಿದ್ದಾರೆ. 

ಸಾಮಾನ್ಯವಾಗಿ ಇದು ಅನುಕ್ರಮ ಪ್ರಕ್ರಿಯೆ. ಮೊದಲ, ಎರಡನೇ, ಮೂರನೇ ಹಂತದ ಪ್ರಯೋಗ ನಡೆಯಬೇಕಾಗುತ್ತದೆ. ಯಾವ ಹಂತದಲ್ಲಿ ಜನರಿಗೆ ಉತ್ತಮ ಡೋಸ್ ನೀಡಬಹುದು ಎಂದು ನೋಡಬಹುದು. ಲಸಿಕೆಯನ್ನು ಆತುರವಾಗಿ ಕಂಡುಹಿಡಿಯಲು ಸಾಧ್ಯವಿಲ್ಲ.

ಸೆರಂ ಇನ್ಸ್ ಟಿಟ್ಯೂಟ್ ನಲ್ಲಿ ಇದೇ ಲಸಿಕೆ ಅಧಿವೃದ್ಧಿಪಡಿಸಲಾಗುತ್ತಿದೆಯೇ?
-ಹೌದು, ನನ್ನ ಪ್ರಕಾರ, ಸೆರಂ ಇನ್ಸ್ ಟಿಟ್ಯೂಟ್ ಡ್ರಗ್ ಕಂಟ್ರೋಲರ್ ನಿಂದ ನೊಟೀಸ್ ಸಿಗುವ ಮುಂಚೆಯೇ ಲಸಿಕೆ ಪ್ರಯೋಗವನ್ನು ಸ್ಥಗಿತಗೊಳಿಸಬೇಕಾಗಿತ್ತು. 

ಬಯೋಕಾನ್ ಲಸಿಕೆ ಅಭಿವೃದ್ಧಿಪಡಿಸುತ್ತದೆಯೇ?
ನಾವು ಲಸಿಕೆ ಅಭಿವೃದ್ಧಿಗೆ ಸಹಾಯ ಮಾಡುತ್ತೇವಷ್ಟೆ. ನಮ್ಮ ಕಂಪೆನಿಯಾದ ಸಿಂಜಿನ್ ಹಲವು ಲಸಿಕೆ ಅಭಿವೃದ್ಧಿಕಾರರಿಗೆ ಸಹಾಯ ಮತ್ತು ನೆರವು ನೀಡುತ್ತಿದೆ. 

ಆರ್ಥಿಕ ಸಮಸ್ಯೆಯನ್ನು ನಿಮ್ಮ ಕಂಪೆನಿ ಹೇಗೆ ನಿರ್ವಹಿಸಿತು?
ನಮ್ಮ ಕಂಪೆನಿಯಲ್ಲಿ ಈ ಸಮಯದಲ್ಲಿ ನೌಕರರನ್ನು ಕೆಲಸದಿಂದ ತೆಗೆದುಹಾಕುವ ಬದಲು ನೇಮಕ ಮಾಡಿಕೊಂಡಿದೆ. ನಮ್ಮ ಕೆಲಸದಲ್ಲಿ ಅಡೆತಡೆಯಾಗಿದೆಯಷ್ಟೆ. ನಮ್ಮ ಸಿಬ್ಬಂದಿಯನ್ನು ನಿರಂತರವಾಗಿ ಕೊರೋನಾ ಪರೀಕ್ಷೆಗೊಳಪಡಿಸುತ್ತಿದ್ದೇವೆ.

ಕೋವಿಡ್-19ನಿಂದ ನೀವು ಗುಣಮುಖರಾದ ಬಗ್ಗೆ ಹೇಳಿ.

-ಆರಂಭಿಕ ಹಂತಗಳಲ್ಲಿ ಜನರಿಗೆ ಈ ರೋಗದ ಬಗ್ಗೆ ಅರ್ಥವಾಗುವುದಿಲ್ಲ. ಈಗ ನಮಗೆ ಅರ್ಥವಾಗುತ್ತಿದೆ. ಭಯ, ಆತಂಕ ಬಿಟ್ಟು ಈ ಕಾಯಿಲೆಯನ್ನು ಎದುರಿಸಬೇಕೆಂದು ಜನರಿಗೆ ನಾನು ಹೇಳುತ್ತೇನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com