ಚೀನಾ ಸಂಘರ್ಷ ವಿಚಾರದಲ್ಲಿ ಕೇಂದ್ರ ಸರ್ಕಾರದ ಉನ್ನತ ನಾಯಕತ್ವ ನಾಪತ್ತೆಯಾಗಿದೆ: ಮೋದಿ ವಿರುದ್ಧ ಓವೈಸಿ ಟೀಕಾ ಪ್ರಹಾರ

ಲಡಾಖ್ ನಲ್ಲಿ ಚೀನಾ ಸಂಘರ್ಷ ವಿಚಾರದಲ್ಲಿ ಕೇಂದ್ರ ಸರ್ಕಾರದ ಉನ್ನತ ನಾಯಕತ್ವ ನಾಪತ್ತೆಯಾಗಿದೆ ಎಂದು ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಧಾನಿ ನಾಯಕತ್ವದ ವಿರುದ್ಧ ಕಿಡಿಕಾರಿದ್ದಾರೆ.
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

ಹೈದರಾಬಾದ್: ಲಡಾಖ್ ನಲ್ಲಿ ಚೀನಾ ಸಂಘರ್ಷ ವಿಚಾರದಲ್ಲಿ ಕೇಂದ್ರ ಸರ್ಕಾರದ ಉನ್ನತ ನಾಯಕತ್ವ ನಾಪತ್ತೆಯಾಗಿದೆ ಎಂದು ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಧಾನಿ ನಾಯಕತ್ವದ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಓವೈಸಿ, ನಮ್ಮ ಯೋಧರು ಚೀನಾದ ಪಿಎಲ್ಎ ಯೋಧರನ್ನು ಗಡಿಯಲ್ಲಿ ಧೈರ್ಯ ಮತ್ತು ವೀರಾವೇಶದಿಂದ ನಿಯಂತ್ರಿಸಿದ್ದಾರೆ. ಸೇನೆ ಪಾಲಿಗೆ ಇದು ಸುದೀರ್ಘ ಸಮಸ್ಯೆಯೇ ಅಲ್ಲ. ಆದರೆ ದೆಹಲಿಯಲ್ಲಿ ಕುಳಿತಿರುವ ಕೇಂದ್ರ ಸರ್ಕಾರದ ಹಿರಿಯ ನಾಯಕತ್ವ ನಾಪತ್ತೆಯಾಗಿದ್ದು, ಈ  ಸಂಬಂಧ ದೃಢನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಲಡಾಖ್ ಸಂಘರ್ಷ ಏರ್ಪಟ್ಟು ವಾರಗಳೇ ಕಳೆದರೂ ಈ ವರೆಗೂ ಪ್ರಧಾನಿ ಮೋದಿ ಒಂದೇ ಒಂದು ಪದವನ್ನೂ ಹೇಳಿಲ್ಲ. ಬಹುಶಃ, ಪ್ರಧಾನಿ ಮೋದಿ ನವಿಲುಗಳಿಗೆ ಆಹಾರ ನೀಡುವುದರಿಂದ ಮುಕ್ತರಾದಾಗ, ಈ ದೇಶದ ಜನರಿಗೆ ಹೇಳಲು ಅವರಿಗೆ  ಸಮಯವಿರುತ್ತದೆ. ಚೀನಾ ದೇಶವನ್ನು ಹೆಸರಿನಿಂದ ಉಲ್ಲೇಖಿಸುವ ಧೈರ್ಯ ಬರುತ್ತದೆ ಎಂದು ಹೇಳಿದ್ದಾರೆ.

ಭಾರತೀಯ ಸೇನೆ ಇತ್ತೀಚೆಗೆ ಲಡಾಖ್ ನಲ್ಲಿ ಚೀನಾದ ಪಿಎಲ್ಎ ಯೋಧರು ಎಲ್ಎಸಿ ಅತಿಕ್ರಮಣವನ್ನು ವಿಫಲಗೊಳಿಸಿ, ಪ್ಯೋಂಗ್ಯಾಂಗ್ ಸರೋವರದ ಪ್ರಮುಖ ಶಿಖರಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಇದರಿಂದ ಚೀನಾ ತೀವ್ರ ಹಿನ್ನಡೆಯನ್ನುಂಟು ಮಾಡಿತ್ತು. ಇದೇ ಕಾರಣಕ್ಕೆ ಚೀನಾ ಮತ್ತು ಭಾರತದ  ನಡುವೆ ಶೀಥಲ ಸಮರವೇರ್ಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com