ಮಣ್ಣಾಗುವ ಮೊದಲು ಅಂಗಾಂಗ ದಾನ ಮಾಡಿ ಐದು ಮಂದಿಯ ಜೀವ ಉಳಿಸಿದ ಕೇರಳದ ವ್ಯಕ್ತಿ

ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕೇರಳದ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿದ್ದ ಐದು ಮಂದಿಯ ಜೀವ ಉಳಿಸಿದ್ದಾರೆ.
ಅಂಗಾಂಗ ದಾನ
ಅಂಗಾಂಗ ದಾನ

ಕೊಚ್ಚಿ: ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕೇರಳದ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿದ್ದ ಐದು ಮಂದಿಯ ಜೀವ ಉಳಿಸಿದ್ದಾರೆ.

ಕೇರಳದ 37 ವರ್ಷದ ಸಾಮಾಜಿಕ ಕಾರ್ಯಕರ್ತ ಟಿ ಬೈಜು ಎಂಬುವವರು ಆಗಸ್ಟ್ 22ರಂದು ದುರ್ಘಟನೆಯೊಂದರಲ್ಲಿ ಗಾಯಗೊಂಡಿದ್ದರು. ಈ ವೇಳೆ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಬೈಜು ಅವರ ಕುಟುಂಬಸ್ಥರು ಬೈಜು ಅವರ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಬೈಜು ಅವರ ಕಿಡ್ನಿ ಮತ್ತು ಇತರೆ  ಅಂಗಾಂಗಗಳನ್ನು ದಾನ ಮಾಡಿದ್ದಾರೆ. 

ಪರಿಣಾಮ ಒಟ್ಟು ಐದು ಮಂದಿಗೆ ಬೈಜು ಅವರ ಅಂಗಾಂಗಗಳನ್ನು ಟ್ರಾನ್ಸ್ ಪ್ಲಾಂಟ್ ಮೂಲಕ ಅಂಗಾಂಗ ಜೋಡಣೆ ಮಾಡಿ, ಅವರ ಪ್ರಾಣ ಉಳಿಸಲಾಗಿದೆ. ಸಮಾಜಸೇವೆ ಮೂಲಕವೇ ಖ್ಯಾತಿ ಗಳಿಸಿದ್ದ ಬೈಜು ಅಂಗಾಂಗ ದಾನ ಮೂಲಕ ತಮ್ಮ ಸಾವಿನ ಬಳಿಕವೂ ಸಮಾಜ ಸೇವೆ ಮಾಡಿ ಮತ್ತೊಬ್ಬರಿಗೆ  ಸ್ಪೂರ್ತಿಯಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದಾಗಿ 860 ಬಾರಿ ಡಯಾಲಿಸಿಸ್ ಗೆ ತುತ್ತಾಗಿದ್ದ ಬಾಬು (56 ವರ್ಷ)ಅವರಿಗೆ ಬೈಜು ಅವರ ಒಂದು ಕಿಡ್ನಿ ಜೋಡಣೆ ಮಾಡಲಾಗಿದೆ. ಕೇರಳದ ಮೃತಸಂಜೀವಿನಿ ಕಾಯ್ದೆಯಡಿಯಲ್ಲಿ ಬಾಬು ಅವರು ಕಳೆದ 8 ವರ್ಷಗಳಿಂದ ಅಂಗಾಂಗ ದಾನಿಗಳಿಗಾಗಿ ಕಾಯುತ್ತಿದ್ದರು. ಅಂತೆಯೇ  ಸಿಂಧು ಅಶೋಕ್ ಎಂಬ ಕಿಡ್ನಿ ರೋಗಿಕೂಡ ದಾನಿಗಳಿಗಾಗಿ ಕಾಯುತ್ತಿದ್ದರು. ಇದೀಗ ಬೈಜು ಅವರ ಮೂಲಕ ಇಬ್ಬರಿಗೂ ಕಿಡ್ನಿ ದೊರದಂತಾಗಿದೆ. 

ಪ್ರಸ್ತುತ ಬಾಬು ಅವರಿಗೆ ಡಾ ಜಾರ್ಜ್ ಕೆ ನಿನಾನ್ ಅವರು ಶಸ್ತ್ರಕ್ರಿಯೆ ನಡೆಸಿ ಕಿಡ್ನಿ ಜೋಡಣೆ ಮಾಡಿದ್ದು, ಅಂತೆಯೇ 44 ವರ್ಷದ ಸಿಂಧು ಅವರಿಗೆ ಡಾ ಅಬಿ ಪಿ ಅಬ್ರಹಾಂ ಅವರು ಕಿಡ್ನಿ ಜೋಡಣೆ ಶಸ್ತ್ರಕ್ರಿಯೆ ಯಶಸ್ವಿಯಾಗಿ ನಡೆಸಿದ್ದಾರೆ. 2013ರಿಂದಲೂ ಸಿಂಧು ಅವರು ದಾನಿಗಳಿಗಾಗಿ ಕಾಯುತ್ತಿದ್ದರು. ಇದೀಗ  ಇಬ್ಬರಿಗೂ ಕೊಚ್ಚಿಯ ವಿಪಿಎಸ್ ಲೇಕ್ ಶೋರ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಕ್ರಿಯೆ ನಡೆಸಲಾಗಿದೆ. ಮುಂಬರುವ ಸೆಪ್ಟೆಂಬರ್ 5ರಂದು ಬಾಬು ಮತ್ತು 8ರಂದು ಸಿಂಧು ಅವರು ಡಿಸ್ಚಾರ್ಜ್ ಆಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com