ಎಲ್ಎಸಿಯಲ್ಲಿ ಘರ್ಷಣೆ, ಆರ್ಥಿಕ ಕುಸಿತದ ಬಗ್ಗೆ ಮುಂಗಾರು ಅಧಿವೇಶನದಲ್ಲಿ ಚರ್ಚೆಗೆ ವಿಪಕ್ಷಗಳ ಆಗ್ರಹ 

ಎಲ್ಎಸಿಯಲ್ಲಿ ಉಂಟಾದ ಘರ್ಷಣೆ, ಆರ್ಥಿಕ ಕುಸಿತದ ಬಗ್ಗೆ ಮುಂಗಾರು ಅಧಿವೇಶನದಲ್ಲಿ ಚರ್ಚೆ ನಡೆಯಬೇಕೆಂದು ವಿರೋಧಪಕ್ಷಗಳು ಆಗ್ರಹಿಸಿವೆ. 
ಸಂಸತ್ತು(ಸಂಗ್ರಹ ಚಿತ್ರ)
ಸಂಸತ್ತು(ಸಂಗ್ರಹ ಚಿತ್ರ)

ನವದೆಹಲಿ: ಎಲ್ಎಸಿಯಲ್ಲಿ ಉಂಟಾದ ಘರ್ಷಣೆ, ಆರ್ಥಿಕ ಕುಸಿತದ ಬಗ್ಗೆ ಮುಂಗಾರು ಅಧಿವೇಶನದಲ್ಲಿ ಚರ್ಚೆ ನಡೆಯಬೇಕೆಂದು ವಿರೋಧಪಕ್ಷಗಳು ಆಗ್ರಹಿಸಿವೆ. 

ಮುಂಗಾರು ಅಧಿವೇಶನದ ಅಜೆಂಡಾ ಚರ್ಚೆಗಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಡೆಸಿದೆ ಬ್ಯುಸಿನೆಸ್ ಅಡ್ವೈಸರಿ ಸಮಿತಿ (ಬಿಎಸಿ)  ಸಭೆಯಲ್ಲಿ ಭಾಗವಹಿಸಿದ್ದ  ವಿಪಕ್ಷ ನಾಯಕರು ಗಡಿಯಲ್ಲಿ ಭಾರತ-ಚೀನಾ ನಡುವಿನ ಘರ್ಷಣೆ, ನಿರುದ್ಯೋಗ, ಆರ್ಥಿಕ ಕುಸಿತದಂತಹ ವಿಷಯಗಳ ಬಗ್ಗೆ ಚರ್ಚೆಗೆ ಆಗ್ರಹಿಸಿದ್ದಾರೆ ಎಂದು ಡಿಎಂಕೆ ನಾಯಕ ಟಿಆರ್ ಬಾಲು ಹೇಳಿದ್ದಾರೆ. 

ಒಬಿಸಿಯ ಕೆನೆಪದರದ ಪರಿಷ್ಕರನೆ ಹಾಗೂ ಜಿಎಸ್ ಟಿ ಸಂಗ್ರಹಣೆಯಲ್ಲಿ ರಾಜ್ಯದ ಪಾಲನ್ನು ನೀಡದೇ ಇರುವ ವಿಷಯಗಳ ಕುರಿತ ಚರ್ಚೆಗೂ ಡಿಎಂಕೆ ಆಗ್ರಹಿಸಿದೆ ಎಂದು ಬಾಲು ತಿಳಿಸಿದ್ದಾರೆ. ಸದನದ ಸುಗಮ ಕಲಾಪಕ್ಕೆ ಸಹಕರಿಸುವುದಾಗಿ ಎಲ್ಲಾ ಪಕ್ಷಗಳೂ ಭರವಸೆ ನೀಡಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com