ನವದೆಹಲಿ: ಜಿಎಸ್ ಟಿ ಪರಿಹಾರ ಕೊರತೆಯನ್ನು ನೀಗಿಸಲು ಸಾಲ ಪಡೆಯುವ ಆಯ್ಕೆಯನ್ನು 13 ಬಿಜೆಪಿ ಆಡಳಿತವಿರುವ ರಾಜ್ಯಗಳು ಕೇಂದ್ರಕ್ಕೆ ಸಲ್ಲಿಸಿವೆ. ಈ 13 ರಾಜ್ಯಗಳಲ್ಲಿ ಬಿಹಾರ, ಒಡಿಶಾ, ಆಂಧ್ರ ಪ್ರದೇಶ, ಗುಜರಾತ್, ಉತ್ತರ್ ಖಂಡ್ ಮತ್ತು ಮೇಘಾಲಯ ರಾಜ್ಯಗಳು ಸೇರಿವೆ.
ಗೋವಾ, ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮೀಜೋರಾಂ ಮತ್ತು ಹಿಮಾಚಲ ಪ್ರದೇಶಗಳು ಇನ್ನೂ ಒಂದೆರಡು ದಿನಗಳಲ್ಲಿ ತಮ್ಮ ಆಯ್ಕೆಯನ್ನು ಸಲ್ಲಿಸಲಿವೆ ಎಂದು ಹಣಕಾಸು ಸಚಿವಾಲಯದ ಮೂಲಗಳು ಹೇಳಿವೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯಗಳು 2.35 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಆದಾಯದ ಕೊರತೆಯನ್ನು ಎದುರಿಸುತ್ತಿವೆ.
ಆರ್ ಬಿಐ ಸುಗಮಗೊಳಿಸಿ ವಿಶೇಷ ಗವಾಕ್ಷಿ ಮೂಲಕ 97 ಸಾವಿರ ಕೋಟಿ ಅಥವಾ ಮಾರುಕಟ್ಟೆಯಿಂದ 2.35 ಲಕ್ಷ ಕೋಟಿ ಸಾಲ ಪಡೆಯಲು ಕಳೆದ ತಿಂಗಳ ಕೇಂದ್ರ ಸರ್ಕಾರ ಎರಡು ಆಯ್ಕೆಗಳನ್ನು ನೀಡಿತ್ತು. ಅಲ್ಲದೇ, ಐಷಾರಾಮಿ, ಸರಕುಗಳ ಮೇಲೆ ಪರಿಹಾರ ಸೆಸ್ ನ್ನು 2022ಕ್ಕೆ ಮೀರಿ ವಿಸ್ತರಿಸಲು ಪ್ರಸ್ತಾಪಿಸಿತ್ತು.
ಈ 13 ರಾಜ್ಯಗಳ ಪೈಕಿಯಲ್ಲಿ ಆರ್‌ಬಿಐ ಸುಗಮಗೊಳಿಸಿದ ವಿಶೇಷ ಗವಾಕ್ಷಿ ಮೂಲಕ ಸಾಲ ಪಡೆಯಲು 12 ರಾಜ್ಯಗಳು ಸಜ್ಜುಗೊಂಡಿವೆ. ಆಂಧ್ರ ಪ್ರದೇಶ, ಬಿಹಾರ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯ ಪ್ರದೇಶ, ಮೇಘಾಲಯ, ಸಿಕ್ಕಿಂ, ತ್ರಿಪುರಾ, ಉತ್ತರ ಪ್ರದೇಶ , ಉತ್ತರ ಖಂಡ್ ಮತ್ತು ಒಡಿಶಾ ರಾಜ್ಯಗಳು ಈ ಪಟ್ಟಿಯಲ್ಲಿದ್ದು, ಇಲ್ಲಿಯವರೆಗೂ ಮೇಘಾಲಯ ಮಾತ್ರ ಮಾರುಕಟ್ಟೆಯಿಂದ ಸಾಲ ಪಡೆಯುವುದು ಆಯ್ಕೆ ಮಾಡಿಕೊಂಡಿದೆ.
Advertisement