ವಿಡಿಯೋಗಾಗಿ ಬೀದಿ ನಾಯಿಯ ಕೆರೆಗೆ ಎಸೆದು ಅಮಾನವೀಯ ಕೃತ್ಯ: ಆರೋಪಿ ಬಂಧನ

ವಿಡಿಯೋ ಚಿತ್ರೀಕರಣಕ್ಕಾಗಿ ಬೀದಿ ನಾಯಿಯೊಂದನ್ನು ಕೆರೆಗೆ ಎಸೆದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 
ಬೀದಿ ನಾಯಿಯನ್ನು ಕೆರೆಗೆ ಎಸೆಯುತ್ತಿರುವ ದೃಶ್ಯ
ಬೀದಿ ನಾಯಿಯನ್ನು ಕೆರೆಗೆ ಎಸೆಯುತ್ತಿರುವ ದೃಶ್ಯ

ಭೋಪಾಲ್: ವಿಡಿಯೋ ಚಿತ್ರೀಕರಣಕ್ಕಾಗಿ ಬೀದಿ ನಾಯಿಯೊಂದನ್ನು ಕೆರೆಗೆ ಎಸೆದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 

ಆರೋಪಿಯನ್ನು ಶ್ಯಾಮಲಾ ಹಿಲ್ಸ್ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದು, ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ 429 (ಪ್ರಾಣಿಗಳನ್ನು ಕೊಲ್ಲುವುದು, ವಿಷಪ್ರಾಶನ ಮಾಡುವುದು, ದುರುಪಯೋಗಪಡಿಸಿಕೊಳ್ಳುವುದು ಅಥವಾ ಅನಗತ್ಯವಾಗಿ ಪ್ರಾಣಿಗಳನ್ನು ಪ್ರದರ್ಶನ ಮಾಡುವುದು) ಮತ್ತು ಸೆಕ್ಷನ್ 11 (ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಗಟ್ಟುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಭೋಪಾಲ್ ನಲ್ಲಿರುವ ಸೇತುವೆ ಅಡಿಯಲ್ಲಿರುವ ಕೆರೆಯೊಂದಕ್ಕೆ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಎಸೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಾಯಿಯನ್ನು ಕೆರೆಗೆ ಎಸೆದ ಆರೋಪಿ ನಂತರ ನಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿತ್ತು. ವಿಡಿಯೋ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com