ಚೀನಾದೊಂದಿಗಿನ ಮಾತುಕತೆ ಕುರಿತು ಸರ್ಕಾರ ಎಂದಿಗೂ ಪ್ರತಿಪಕ್ಷಗಳಿಗೆ ವರದಿ ನೀಡಿಲ್ಲ- ತರೂರ್
ಚೀನಾದೊಂದಿಗಿನ ಮಾತುಕತೆ ಕುರಿತು ಸರ್ಕಾರ ಎಂದಿಗೂ ಪ್ರತಿಪಕ್ಷಗಳಿಗೆ ವರದಿ ನೀಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಶಶಿ ತರೂರ್ ಹೇಳಿದ್ದಾರೆ.
Published: 14th September 2020 10:32 AM | Last Updated: 14th September 2020 10:35 AM | A+A A-

ಶಶಿ ತರೂರ್
ನವದೆಹಲಿ: ಚೀನಾದೊಂದಿಗಿನ ಮಾತುಕತೆ ಕುರಿತು ಸರ್ಕಾರ ಎಂದಿಗೂ ಪ್ರತಿಪಕ್ಷಗಳಿಗೆ ವರದಿ ನೀಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಶಶಿ ತರೂರ್ ಹೇಳಿದ್ದಾರೆ.
ಸಂಸತ್ ಆವರಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವು ಸಂಸತ್ತಿಗೆ ಜವಾಬ್ದಾರನಾಗಿರುತ್ತದೆ. ಆದರೆ, ಚೀನಾ ಮತ್ತು ಭಾರತ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ಮಂತ್ರಿಗಳ ನಡುವಿನ ಮಾತುಕತೆ ಕುರಿತು ಅವರು ನಮಗೆ ಯಾವಾಗ ವರದಿ ಮಾಡಿದ್ದಾರೆ? ಎಂದು ಪ್ರಶ್ನಿಸಿದರು. ಸರ್ಕಾರ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದರು.
ಚರ್ಚೆಗೆ ಮೀರಿದ ಮಿಲಿಟರಿಗೆ ಬೆಂಬಲ ನೀಡುವ ಪ್ರಶ್ನೆಗೆ, ನಾವು ನಮ್ಮ ಸೈನ್ಯದೊಂದಿಗೆ ಬಹಳ ಗಟ್ಟಿಯಾಗಿ ನಿಲ್ಲುತೇವೆ ಎಂದು ಶಶಿ ತರೂರ್ ಹೇಳಿದರು.