ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರ ನಿಷೇಧ

ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಪ್ರಮಾಣ ಗಣನೀಯವಾಗಿ ಕುಸಿದು, ಬೇಡಿಕೆ ತೀವ್ರ ಹೆಚ್ಚಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿಗೆ ನಿಷೇಧ ಹೇರಿದೆ.
ಈರುಳ್ಳಿ
ಈರುಳ್ಳಿ

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಪ್ರಮಾಣ ಗಣನೀಯವಾಗಿ ಕುಸಿದು, ಬೇಡಿಕೆ ತೀವ್ರ ಹೆಚ್ಚಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿಗೆ ನಿಷೇಧ ಹೇರಿದೆ.

ಹೌದು.. ದೇಶದಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಮತ್ತು ದಿನೇ ದಿನೇ ಈರುಳ್ಳಿ ದರ ಏರಿಕೆಯಾಗುತ್ತಿದ್ದು, ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಕೂಡಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿಗೆ ನಿಷೇಧ ಹೇರಿ, ಅಧಿಸೂಚನೆ ಜಾರಿಗೊಳಿಸಲಾಗಿದೆ. 

ದೇಶಿಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಈರುಳ್ಳಿ ಕೊರತೆ ಮತ್ತು ದರ ಏರಿಕೆ ಹಿನ್ನೆಲೆಯಲ್ಲಿ ರಫ್ತು ನಿಷೇಧಕ್ಕೆ ನಿರ್ಧರಿಸಲಾಗಿದೆ. ಕತ್ತರಿಸಿದ ಮತ್ತು ಪುಡಿಯ ರೂಪದಲ್ಲಿರುವ ಈರುಳ್ಳಿ ಹೊರತುಪಡಿಸಿ, ಬೆಂಗಳೂರು ಗುಲಾಬಿ ಈರುಳ್ಳಿ, ಕೃಷ್ಣಾಪುರಂ ಈರುಳ್ಳಿ ಸೇರಿದಂತೆ ಎಲ್ಲ ಬಗೆಯ ಈರುಳ್ಳಿಯ ರಫ್ತನ್ನು  ನಿಷೇಧಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರ ನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ. ವಿದೇಶಾಂಗ ವ್ಯವಹಾರ ನಿರ್ದೇಶನಾಲಯ ತನ್ನ ವೆಬ್‌ಸೈಟ್‌ನಲ್ಲಿ ಈ ಕ್ಷಣದಿಂದಲೆ ವಿಧದ ಈರುಳ್ಳಿಯ ರಫ್ತನ್ನು ನಿಷೇಧಿಸಲಾಗಿದೆ ಎಂದು ಪ್ರಕಟಿಸಿದೆ. ರಫ್ತುದಾರರಿಗೆ ಯಾವುದೇ ರೀತಿಯ ಈರುಳ್ಳಿ ರಫ್ತು ಮಾಡದಂತೆ  ಸೂಚನೆ ನೀಡಿದೆ. 

ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈರುಳ್ಳಿಯ ಬೆಲೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಭಾರಿ ಮಹತ್ವಪಡೆದುಕೊಂಡಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಈರುಳ್ಳಿ ಪ್ರತಿ ಕೆ.ಜಿಗೆ ರೂ.40 ರಂತೆ ಮಾರಾಟವಾಗುತ್ತಿದೆ. ಇನ್ನೊಂದೆಡೆ ದೇಶದ ಇತರೆ ಭಾಗಗಳಲ್ಲಿ  ಹಲವು ನಗರಗಳಲ್ಲಿ ಈರುಳ್ಳಿ ಪ್ರತಿ ಕೆ.ಜಿ.ಗೆ 50 ರೂ. ನಂತೆ ಮಾರಾಟವಾಗುತ್ತಿದೆ. 

ಬಾಂಗ್ಲಾದೇಶಕ್ಕೆ ಹೊಡೆತ?
ಇನ್ನು ಭಾರತ ಈರುಳ್ಳಿ ರಫ್ತನ್ನು ನಿಷೇಧಿಸಿದರೆ ಈ ಪೈಕಿ ಭಾರೀ ಹೊಡೆತ ತಿನ್ನುವ ದೇಶವೆಂದರೆ ಅದು ಬಾಂಗ್ಲಾದೇಶ. ಈರುಳ್ಳಿ ಆಮದಿನಲ್ಲಿ ಭಾರತವನ್ನೆ ನೆಚ್ಚಿಕೊಂಡಿರುವ ಬಾಂಗ್ಲಾದೇಶ ಅತೀ ಹೆಚ್ಚು ಅಂದರೆ 7-8 ಲಕ್ಷ ಟನ್‌ ವರ್ಷಕ್ಕೆ ಆಮದು ಮಾಡಿಕೊಳ್ಳುತ್ತದೆ. ಕಳೆದ ಹಲವು ಹಲವು ತಿಂಗಳಲ್ಲಿ ಬಾಂಗ್ಲಾದೇಶ  ಈರುಳ್ಳಿ ಕೊರತೆಯನ್ನು ಎದುರಿಸುತ್ತಿದೆ. ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ಭಾರತ ಬಾಂಗ್ಲಾದೇಶಕ್ಕೆ ಈರುಳ್ಳಿ ರಫ್ತು ನಿಲ್ಲಿಸಿತ್ತು. ಬಾಂಗ್ಲಾದೇಶ ಮಾತ್ರವಲ್ಲದೇ ಭಾರತ ಮಲೇಷಿಯಾ, ಯುಎಇ ಹಾಗೂ ಶ್ರೀಲಂಕಾ ರಾಷ್ಟ್ರಗಳಿಗೂ ಈರುಳ್ಳಿ ರಫ್ತು ಮಾಡುತ್ತದೆ. ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತ ಒಟ್ಟು 19.8 ಕೋಟಿ ಡಾಲರ್ ಮೌಲ್ಯದ ಈರುಳ್ಳಿಯನ್ನು ರಫ್ತು ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com