'ಬಿಂದಾಸ ಬೋಲ್' ನಲ್ಲಿ ಮುಸ್ಲೀಮರ ನಿಂದನೆ: ಎಪಿಸೋಡ್ ಪ್ರಸರಣಕ್ಕೆ ಸುದರ್ಶನ್ ಟಿವಿಗೆ 'ಸುಪ್ರೀಂ' ತಡೆ

ಸುದರ್ಶನ ವಾಹಿನಿಯ ವಿವಾದಿತ ಬಿಂದಾಸ್ ಬೋಲ್ ಕಾರ್ಯಕ್ರಮದ ಎರಡು ಎಪಿಸೋಡ್ ಪ್ರಸರಣಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. 

Published: 15th September 2020 06:19 PM  |   Last Updated: 15th September 2020 06:19 PM   |  A+A-


Supreme Court

ಸುಪ್ರೀಂ ಕೋರ್ಟ್

Posted By : Vishwanath S
Source : PTI

ನವದೆಹಲಿ: ಸುದರ್ಶನ ವಾಹಿನಿಯ ವಿವಾದಿತ ಬಿಂದಾಸ್ ಬೋಲ್ ಕಾರ್ಯಕ್ರಮದ ಎರಡು ಎಪಿಸೋಡ್ ಪ್ರಸರಣಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. 

ಮುಸ್ಲಿಂ ಸಮುದಾಯವನ್ನು 'ಕೆಟ್ಟದಾಗಿ' ತೋರುತ್ತದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಇಂದು ಮತ್ತು ನಾಳೆ ಪ್ರಸಾರವಾಗಬೇಕಿದ್ದ ಎಪಿಸೋಡ್ ಗಳಿಗೆ ತಡೆ ನೀಡಿದೆ. 

ಈ ಕಾರ್ಯಕ್ರಮವು ಮುಸ್ಲಿಂ ಸಮುದಾಯವನ್ನು ಕೆಣಕಿಸುವಂತೆ ತೋರುತ್ತದೆ ಎಂದು ಸುಪ್ರೀಂ ಕೋರ್ಟ್ ಮುಸ್ಲಿಮರನ್ನು ಅಧಿಕಾರಶಾಹಿಗೆ ಒಳನುಸುಳಿದೆ ಎಂದು ಆರೋಪಿಸಿ ಕಾರ್ಯಕ್ರಮದ ಎರಡು ಸಂಚಿಕೆಗಳ ಪ್ರಸಾರವನ್ನು ತಡೆಹಿಡಿದಿದೆ.

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠವು ಈ ಕಾರ್ಯಕ್ರಮದ ಬಗ್ಗೆ  ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿತ್ತು. ಸದ್ಯ ಕಾರ್ಯಕ್ರಮಕ್ಕೆ ತಡೆ ನೀಡಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ. 

ನ್ಯಾಯಮೂರ್ತಿಗಳಾದ ಇಂದೂ ಮಲ್ಹೋತ್ರಾ ಮತ್ತು ಕೆ ಎಂ ಜೋಸೆಫ್ ಅವರನ್ನೂ ಒಳಗೊಂಡ ನ್ಯಾಯಪೀಠ, ಎಲೆಕ್ಟ್ರಾನಿಕ್ ಮಾಧ್ಯಮವನ್ನು ಸ್ವಯಂ ನಿಯಂತ್ರಣಕ್ಕೆ ತರುವ ಸಮಿತಿಯನ್ನು ನೇಮಿಸಬಹುದು ಎಂದು ಸೂಚಿಸಿದ್ದರು.

ನಾವು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಕೆಲವು ಮಾನದಂಡಗಳನ್ನು ತರಬಲ್ಲ ಸಮಿತಿಯನ್ನು ನೇಮಿಸಬಹುದು ಎಂಬ ಅಭಿಪ್ರಾಯ ನಮ್ಮದು. ರಾಜಕೀಯವಾಗಿ ವಿಭಜಿಸುವ ಯಾವುದೇ ಸ್ವಭಾವವನ್ನು ನಾವು ಬಯಸುವುದಿಲ್ಲ. ಶ್ಲಾಘನೀಯ ಸ್ಥಾನಮಾನದ ಸದಸ್ಯರು ನಮಗೆ ಬೇಕು ಎಂದು ನ್ಯಾಯಪೀಠ ಹೇಳಿದೆ.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp