ಪೂರ್ವ ಲಡಾಖ್ ನಲ್ಲಿ ಚಳಿಗಾಲದಲ್ಲೂ ಪೂರ್ಣ ಪ್ರಮಾಣದ ಯುದ್ಧಕ್ಕೆ ಭಾರತೀಯ ಸೇನೆ ಸರ್ವ ಸನ್ನದ್ಧ!

ಪೂರ್ವ ಲಡಾಖ್ ನಲ್ಲಿ ಚೀನಾ ಯುದ್ಧದ ಅನಿವಾರ್ಯತೆ ಸೃಷ್ಟಿಸಿದರೆ ಸೇನೆ ಸಮರಕ್ಕೂ ಸರ್ವ ಸನ್ನದ್ಧ ಸ್ಥಿತಿಯಲ್ಲಿದ್ದೂ ಚಳಿಗಾಲದಲ್ಲೂ ಸಮರ್ಥವಾಗಿ ಶತ್ರು ಸೇನೆಯನ್ನು ಎದುರಿಸಲಿದೆ ಎಂದು ಭಾರತೀಯ ಸೇನೆ ಘೋಷಿಸಿದೆ.
ಭಾರತೀಯ ಸೇನೆ
ಭಾರತೀಯ ಸೇನೆ

ನವದೆಹಲಿ: ಪೂರ್ವ ಲಡಾಖ್ ನಲ್ಲಿ ಚೀನಾ ಯುದ್ಧದ ಅನಿವಾರ್ಯತೆ ಸೃಷ್ಟಿಸಿದರೆ ಸೇನೆ ಸಮರಕ್ಕೂ ಸರ್ವ ಸನ್ನದ್ಧ ಸ್ಥಿತಿಯಲ್ಲಿದ್ದೂ ಚಳಿಗಾಲದಲ್ಲೂ ಸಮರ್ಥವಾಗಿ ಶತ್ರು ಸೇನೆಯನ್ನು ಎದುರಿಸಲಿದೆ ಎಂದು ಭಾರತೀಯ ಸೇನೆ ಘೋಷಿಸಿದೆ. 

ಭಾರತೀಯ ಸೇನೆ ಪೂರ್ಣ ಪ್ರಮಾಣದ ಯುದ್ಧ ಸಿದ್ಧತೆ ಮಾಡಿಕೊಂಡು ಸಜ್ಜಾಗಿದೆ. ಯಾವ ಸಂದರ್ಭದಲ್ಲೂ ಚೀನಾ ಸೇನೆ ಯುದ್ಧಕ್ಕೆ ಮುಂದಾದರೆ ಅದಕ್ಕೆ ಭಾರತೀಯ ಸೇನೆ ಸಹ ಹೋರಾಡಲು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿದ್ದಾರೆ ಎಂದು ಭಾರತೀಯ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ. 

ಚಳಿಗಾಲದಲ್ಲಿ ಯುದ್ಧ ನಡೆಸುವಷ್ಟು ಸಾಮರ್ಥ್ಯ ಭಾರತೀಯ ಸೇನೆಗಿಲ್ಲ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಅಭಿಪ್ರಾಯಪಟ್ಟಿತ್ತು. ಇದಕ್ಕೆ ತಿರುಗೇಟು ನೀಡಿರುವ ಭಾರತೀಯ ಸೇನೆ, ಚೀನಾ ಪಡೆಯ ಯೋಧರು ಬಹುತೇಕ ನಗರ ಪ್ರದೇಶದವರಾಗಿದ್ದು ಯುದ್ಧ ಭೂಮಿಯ ಕಷ್ಟಕರ ಸನ್ನಿವೇಶ ಹಾಗೂ ದೀರ್ಘಕಾಲದ ಹೋರಾಟ ಅವರಿಗೆ ಅಭ್ಯಾಸವಿಲ್ಲ ಎಂದು ಹೇಳಿದೆ. 

ಪೂರ್ವ ಲಡಾಖ್ ವಲಯದಲ್ಲಿ ಚಳಿಗಾಲದಲ್ಲೂ ಭಾರತೀಯ ಸೇನೆ ಚೀನಾಗಿಂತಲೂ ಸಮರ್ಥವಾಗಿ ಪೂರ್ಣ ಪ್ರಮಾಣದ ಯುದ್ಧದಲ್ಲಿ ತೊಡಗುವಷ್ಟು ಸಾಮರ್ಥ್ಯವಿದೆ ಎಂದು ಸೇನೆ ಗುಡುಗಿದೆ. 

ಇದೇ ವೇಳೆ ಭಾರತೀಯ ಸೇನೆಯ ಉತ್ತರ ಕಮಾಂಡ್ ನ ಅಧಿಕಾರಿಗಳು ಭಾರತ ಎಂದಿಗೂ ಶಾಂತಿಪ್ರಿಯ ರಾಷ್ಟ್ರ. ನೆರೆಯ ರಾಷ್ಟ್ರಗಳ ಜೊತೆ ಸೌಹಾರ್ದಯುತ ಸಂಬಂಧ ಹೊಂದಲು ಬಯಸುತ್ತೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com