ಕಳೆದ 6 ತಿಂಗಳಲ್ಲಿ ಭಾರತ-ಚೀನಾ ಗಡಿಯಲ್ಲಿ ಯಾವುದೇ ಒಳನುಸುಳುವಿಕೆ ನಡೆದಿಲ್ಲ: ಕೇಂದ್ರ

ಕಳೆದ ಆರು ತಿಂಗಳಲ್ಲಿ ಭಾರತ-ಚೀನಾ ಗಡಿಯಲ್ಲಿ ಯಾವುದೇ ಒಳನುಸುಳುವಿಕೆ ನಡೆದಿಲ್ಲ. ಆದರೆ ಭಾರತ-ಪಾಕಿಸ್ತಾನ ಗಡಿಯಲ್ಲಿ ಆರು ತಿಂಗಳಲ್ಲಿ 47 ಬಾರಿ ಒಳನುಸುಳಿವಿಕೆ ಯತ್ನ ನಡೆದಿದೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ ಆರು ತಿಂಗಳಲ್ಲಿ ಭಾರತ-ಚೀನಾ ಗಡಿಯಲ್ಲಿ ಯಾವುದೇ ಒಳನುಸುಳುವಿಕೆ ನಡೆದಿಲ್ಲ. ಆದರೆ ಭಾರತ-ಪಾಕಿಸ್ತಾನ ಗಡಿಯಲ್ಲಿ ಆರು ತಿಂಗಳಲ್ಲಿ 47 ಬಾರಿ ಒಳನುಸುಳಿವಿಕೆ ಯತ್ನ ನಡೆದಿದೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.

ಈ ಕುರಿತು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು, ಭಾರತ- ಚೀನಾ ಗಡಿಯಲ್ಲಿ ಕಳೆದ ಆರು ತಿಂಗಳಲ್ಲಿ ಯಾವುದೇ ಒಳನುಸುಳುವಿಕೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದ ಉಗ್ರರು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು 594 ಬಾರಿ ಯತ್ನಿಸಿದ್ದಾರೆ. ಅದರಲ್ಲಿ 312 ಬಾರಿ ಯಶಸ್ವಿಯಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯಸಭೆಗೆ ಮಾಹಿತಿ ನೀಡಿದೆ. 

ಕಳೆದ ಮೂರು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು 582 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದು, ಈ ಅವಧಿಯಲ್ಲಿ 46 ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಪ್ರತ್ಯೇಕ ಪ್ರಶ್ನೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಉತ್ತರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 2018 ರಿಂದ ಈ ವರ್ಷದ ಸೆಪ್ಟೆಂಬರ್ 8 ರವರೆಗೆ 76 ಸೇನಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ ಎಂದು ಅವರು ಹೇಳಿದರು.

ಮಾರ್ಚ್‌ನಲ್ಲಿ 4, ಎಪ್ರಿಲ್‌ನಲ್ಲಿ 24, ಮೇನಲ್ಲಿ 8, ಜುಲೈನಲ್ಲಿ 11 ಈ ವರ್ಷ ನಡೆದ ಒಟ್ಟು ಒಳನುಸುಳುವಿಕೆ ಎಂದು ರಾಜ್ಯಸಭೆಯ ಸದಸ್ಯರಿಗೆ ಬುಧವಾರ ಅವರು ಮಾಹಿತಿ ನೀಡಿದರು. ಚೀನಾದ ಗಡಿಯಲ್ಲಿ ಒಳನುಸುಳುವಿಕೆ ಇಲ್ಲದಿದ್ದರು ಡ್ರ್ಯಾಗನ್‌ ದೇಶ 1993-1996ರ ಒಪ್ಪಂದಕ್ಕೆ ಅಪಮಾನ ಮಾಡಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com