ಒಡಿಶಾ: ಇಬ್ಬರು ಮೃತ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರಾಗಿ ಬಡ್ತಿ!

ಶಾಲಾ ಮತ್ತು ಸಾಮೂಹಿಕ ಶಿಕ್ಷಣ ಇಲಾಖೆಯ ಯಡವಟ್ಟಿನಿಂದ ಕೆಲವು ತಿಂಗಳ ಹಿಂದೆ ನಿಧನರಾದ ಇಬ್ಬರು ಶಿಕ್ಷಕರನ್ನು ಜಗತ್ಸಿಂಗ್‌ಪುರ ಜಿಲ್ಲೆಗೆ ಬಡ್ತಿ ನೀಡಿ ಮುಖ್ಯೋಪಾಧ್ಯಾಯರನ್ನಾಗಿ ನೇಮಿಸಲಾಗಿದೆ.

Published: 16th September 2020 12:05 PM  |   Last Updated: 16th September 2020 01:26 PM   |  A+A-


representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಜಗತ್‌ಸಿಂಗ್‌ಪುರ: ಶಾಲಾ ಮತ್ತು ಸಾಮೂಹಿಕ ಶಿಕ್ಷಣ ಇಲಾಖೆಯ ಯಡವಟ್ಟಿನಿಂದ ಕೆಲವು ತಿಂಗಳ ಹಿಂದೆ ನಿಧನರಾದ ಇಬ್ಬರು ಶಿಕ್ಷಕರನ್ನು ಜಗತ್ಸಿಂಗ್‌ಪುರ ಜಿಲ್ಲೆಗೆ ಬಡ್ತಿ ನೀಡಿ ಮುಖ್ಯೋಪಾಧ್ಯಾಯರನ್ನಾಗಿ ನೇಮಿಸಲಾಗಿದೆ.

ಬಾಲಿಕುಡ ಬ್ಲಾಕ್ ನ ಚರಣಪುರ ಹೈಸ್ಕೂಲ್ ನ ಮನೋಜ್ ಕುಮಾರ್ ಗೊಚಾಯತ್ ಎಂಬ ಶಿಕ್ಷಕ ಆಗಸ್ಟ್ 29 ರಂದು ಕೊರೋನಾದಿಂದ ಸಾವನ್ನಪ್ಪಿದ್ದರು.  ಅವರನ್ನು ಗಯತಿ ಪುರ ಪ್ರೌಡಶಾಲೆಗೆ ಮುಖ್ಯೋಪಾಧ್ಯಾಯರನ್ನಾಗಿ ನೇಮಿಸಿ ಬಡ್ತಿ ನೀಡಲಾಗಿದೆ. 

ಸೆಪ್ಟಂಬರ್ 11 ರಂದು ಅವರ ಕುಟುಂಬಸ್ಥರು  ನೋಟೀಸ್ ಪಡೆದುಕೊಂಡಿದ್ದಾರೆ.  ಸೆಪ್ಟಂಬರ್ 13 ರಂದು ಶಾಲೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಇದೇ ರೀತಿಯ ಘಟನೆಯಲ್ಲಿ, ಈ ವರ್ಷದ ಆರಂಭದಲ್ಲಿ ನಿಧನರಾದ ಅಲಿಪಿಂಗಲ್ ಪ್ರೌಢ ಶಾಲೆಯ ಸಹಾಯಕ ಶಿಕ್ಷಕನನ್ನು ಜಗತ್ಸಿಂಗ್‌ಪುರ ಬ್ಲಾಕ್‌ನ ಅಡಿಯಲ್ಲಿರುವ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಬಡ್ತಿ ನೀಡಲಾಗಿದೆ. ಜನವರಿ 25ರಂದು ಶಿಕ್ಷಕ ಸೌಭಾಗ್ ಚರಣ್ ಕೊರೋನಾದಿಂದ ಸಾವನ್ನಪ್ಪಿದ್ದರು.

ಅವರ ಸಾವಿನ 9 ತಿಂಗಳ ನಂತರ ಶಿಕ್ಷಣ ಇಲಾಖೆ ಹೆಡ್ ಮಾಸ್ಟರ್ ಆಗಿ ಬಡ್ತಿ ನೀಡಿದೆ.  ಇಬ್ಬರು ಶಿಕ್ಷಕರು ಸಾವನ್ನಪ್ಪು ಮುಂಚೆಯೇ ಬಡ್ತಿ ಪಟ್ಟಿ ಸಿದ್ದಪಡಿಸಲಾಗಿತ್ತು. ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಅವರು ಅದನ್ನು ಸರಿಪಡಿಸಿರಲಿಲ್ಲ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಪ್ರವಿತ್ರಾ ಮಂಜರಿ ದಾಸ್ ಸ್ಪಷ್ಟ ಪಡಿಸಿದ್ದಾರೆ.
 

Stay up to date on all the latest ರಾಷ್ಟ್ರೀಯ news
Poll
Parliament_House1

ಕೋವಿಡ್-19 ಹರಡುವಿಕೆ ಕಾರಣ ಸಂಸತ್ತಿನ ಮುಂಗಾರು ಅಧಿವೇಶನ ಅವಧಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp