15ನೇ ಶತಮಾನದ ರಾಮ, ಸೀತೆ, ಲಕ್ಷ್ಮಣರ ವಿಗ್ರಹಗಳನ್ನು ಭಾರತಕ್ಕೆ ಹಿಂದಿರುಗಿಸಿದ ಬ್ರಿಟನ್

ತಮಿಳುನಾಡಿನ ಇತಿಹಾಸ ಪ್ರಸಿದ್ಧ ದೇವಸ್ಥಾನದಿಂದ ಕಳವು ಮಾಡಲಾಗಿದ್ದ 15ನೇ ಶತಮಾನದ ವಿಜಯನಗರ ಸಾಮಾಜ್ರ್ಯಕ್ಕೆ ಸೇರಿದ್ದು ಎನ್ನಲಾದ ರಾಮ, ಸೀತಾ ಸಮೇತ ಲಕ್ಷ್ಮಣ ವಿಗ್ರಹಗಳನ್ನು ಬ್ರಿಟಿಷ್ ಪೊಲೀಸರು ಭಾರತಕ್ಕೆ ಮರಳಿಸಿದ್ದಾರೆ.

Published: 16th September 2020 03:08 PM  |   Last Updated: 16th September 2020 03:08 PM   |  A+A-


UK restores three idols

ರಾಮ-ಸೀತೆ ಮತ್ತು ಲಕ್ಷ್ಮಣರ ವಿಗ್ರಹ

Posted By : Srinivasamurthy VN
Source : PTI

ನವದೆಹಲಿ: ತಮಿಳುನಾಡಿನ ಇತಿಹಾಸ ಪ್ರಸಿದ್ಧ ದೇವಸ್ಥಾನದಿಂದ ಕಳವು ಮಾಡಲಾಗಿದ್ದ 15ನೇ ಶತಮಾನದ ವಿಜಯನಗರ ಸಾಮಾಜ್ರ್ಯಕ್ಕೆ ಸೇರಿದ್ದು ಎನ್ನಲಾದ ರಾಮ, ಸೀತಾ ಸಮೇತ ಲಕ್ಷ್ಮಣ ವಿಗ್ರಹಗಳನ್ನು ಬ್ರಿಟಿಷ್ ಪೊಲೀಸರು ಭಾರತಕ್ಕೆ ಮರಳಿಸಿದ್ದಾರೆ.

ಹೌದು.. ಯುನೈಟೆಡ್ ಕಿಂಗ್‌ಡಮ್ ನ ಅಧಿಕಾರಿಗಳು 15ನೇ ಶತಮಾನದ್ದು ಮತ್ತು  ರಾಮ, ಸೀತಾ ಮತ್ತು ಲಕ್ಷ್ಮಣರ ವಿಗ್ರಹಗಳನ್ನು ವಿಜಯನಗರ ಸಾಮಾಜ್ರ್ಯಕ್ಕೆ ಸೇರಿದ್ದು ಎನ್ನಲಾದ ರಾಮ, ಸೀತಾ ಸಮೇತ ಲಕ್ಷ್ಮಣ ವಿಗ್ರಹಗಳನ್ನು ಭಾರತಕ್ಕೆ ಹಿಂದಿರುಗಿಸಿದ್ದಾರೆ ಎಂದು ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ  ಇಲಾಖೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಮಂಗಳವಾರ ಖಚಿತಪಡಿಸಿದ್ದಾರೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಪಟೇಲ್, ಈ ಮೂರು ವಿಗ್ರಹಗಳು ಭಾರತಕ್ಕೆ ಸೇರಿದ್ದಾಗಿದ್ದು, ಈ ವಿಗ್ರಹಗಳು 15ನೇ ಶತಮಾನದ ವಿಜಯನಗರ ಸಾಮ್ರಾಜ್ಯದಿಂದ ಬಂದವಾಗಿವೆ. 1978 ರಲ್ಲಿ ತಮಿಳುನಾಡಿನ ದೇವಾಲಯವೊಂದರಿಂದ ಕಳವು ಮಾಡಲಾಗಿತ್ತು. ಈ ವಿಗ್ರಹಗಳನ್ನು ಸುಮಾರು 20  ವರ್ಷಗಳ ಹಿಂದೆ ರಾಜಸ್ಥಾನದ ದೇವಾಲಯವೊಂದರಿಂದ ಕಳ್ಳತನ ಮತ್ತು ಕಳ್ಳಸಾಗಣೆ ಮಾಡಲಾಗಿತ್ತು. ಇದೀಗ ಬ್ರಿಟನ್ ಅಧಿಕಾರಿಗಳು ಭಾರತಕ್ಕೆ ಹಿಂದಿರುಗಿಸಿದ್ದಾರೆ ಎಂದು ಹೇಳಿದ್ದಾರೆ.

ಕ್ರಿ.ಶ 15ನೇ ಶತಮಾನಕ್ಕೆ ಸೇರಿರುವ ರಾಮ, ಸೀತಾ ಮತ್ತು ಲಕ್ಷ್ಮಣರ ವಿಗ್ರಹಗಳು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಅನಂತಮಂಗಲಂನ ಶ್ರೀ ರಾಜಗೋಪಾಲಸ್ವಾಮಿ ದೇವಸ್ಥಾನದಿಂದ 1978ರಲ್ಲಿ ಕಳವಾಗಿತ್ತು. ಕಳುವಾಗಿರುವ ವಿಗ್ರಹಗಳು ಲಂಡನ್ನಿನಲ್ಲಿರುವ ವಿಷಯ ಅರಿತ ಭಾರತ ಸರ್ಕಾರವು ಈ ಪುರಾತನ  ವಿಗ್ರಹಗಳನ್ನು ಹಿಂದಕ್ಕೆ ತರೆಸಿಕೊಳ್ಳುವ ಪ್ರಯತ್ನಪಟ್ಟಿತ್ತು. ಈ ನಿಟ್ಟಿನಲ್ಲಿ ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್ ಇಂಡಿಯಾ ಪ್ರೈಡ್ ಪ್ರಾಜೆಕ್ ವತಿಯಿಂದ ರಾಮ, ಸೀತಾ, ಲಕ್ಷ್ಮಣ ವಿಗ್ರಹ ಹಿಂದಿರುಗಿಸಲು ಕೋರಲಾಗಿತ್ತು. ಅದರಂತೆ ಲಂಡನ್ನಿನ ಹೈ ಕಮಿಷನ್ ಬಳಿ ಇದ್ದ ಪುರಾತನ ವಿಗ್ರಹಗಳನ್ನು  ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ. ಶ್ರೀರಾಮ, ಲಕ್ಷ್ಮಣ ಹಾಗೂ ಸೀತಾ ಮಾತೆಯ 3 ಅಡಿ ಎತ್ತರ ಕಂಚಿನ ಪ್ರತಿಮೆಗಳು ಇದೀಗ ಭಾರತಕ್ಕೆ ಮರಳಿದೆ. ಇತ್ತೀಚಿನ ದಿನಗಳಲ್ಲಿ ಯುಕೆ ಅಧಿಕಾರಿಗಳು ಇದೇ ರೀತಿಯ ಎರಡು ವಿಗ್ರಹಗಳು ಮತ್ತು ಒಂದು ಸ್ತಂಭವನ್ನು ಹಸ್ತಾಂತರಿಸಿದ್ದಾರೆ ಎಂದು ಪಟೇಲ್  ಟ್ವೀಟ್ ಮಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ತಮಿಳನಾಡು ಸರ್ಕಾರ, ಭಾರತೀಯ ರಾಯಭಾರ ಕಚೇರಿ, ಹಾಗೂ ಭಾರತೀಯ ಸರ್ವೆಕ್ಷಣ ಸಂಸ್ಥೆ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ. 

ಇದೇ ವೇಳೆ ಮೋದಿ ಸರ್ಕಾರದ ಸಾಧನೆಗಳ ಕುರಿತು ಮಾತನಾಡಿದ ಕೇಂದ್ರ ಸಚಿವರು, 2014 ರಿಂದೀಚೆಗೆ ಇಂತಹ 40 ಕ್ಕೂ ಹೆಚ್ಚು ಕಳೆದುಹೋದ ಪ್ರಾಚೀನ ವಸ್ತುಗಳನ್ನು ಭಾರತ ಸರ್ಕಾರದಿಂದ ಸಂಗ್ರಹಿಸಲಾಗಿದೆ. ಆದಾಗ್ಯೂ, ಸ್ವಾತಂತ್ರ್ಯದ ನಂತರ 2013 ರವರೆಗೆ ಕೇವಲ 13 ಕಲಾಕೃತಿಗಳು ಮತ್ತು ಪ್ರಾಚೀನ  ವಸ್ತುಗಳನ್ನು ಭಾರತ ಸರ್ಕಾರ ಮರಳಿ ತಂದಿದೆ. ಸ್ವಾತಂತ್ರ್ಯ ಬಂದಾಗಿನಿಂದ 13 ಐತಿಹಾಸಿಕ ಸಾಮಾಗ್ರಿಗಳು ಭಾರತಕ್ಕೆ ವಿದೇಶದಿಂದ ವಾಪಸ್ ಬಂದಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 40 ಪುರಾತನ ಸಂಗ್ರಹ ಯೋಗ್ಯ ವಸ್ತುಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಇನ್ನಷ್ಟು ಬೆಲೆ ಬಾಳುವ ವಸ್ತುಗಳು  ಭಾರತಕ್ಕೆ ಮರಳಲಿವೆ, ವಾಗ್ದೇವಿ ವಿಗ್ರಹವನ್ನು ಬ್ರಿಟಿಷ್ ಮ್ಯೂಸಿಯಂನಿಂದ ಭಾರತಕ್ಕೆ ಶೀಘ್ರವೇ ತರೆಸಿಕೊಳ್ಳಲಾಗುವುದು ಎಂದು ಪಟೇಲ್ ಹೇಳಿದರು.

ಈ ವರ್ಷದ ಆಗಸ್ಟ್‌ನಲ್ಲಿ, ಯುನೈಟೆಡ್ ಕಿಂಗ್‌ಡಮ್ ಸರ್ಕಾರ ಭಾರತಕ್ಕೆ ಸೇರಿದ್ದ 9ನೇ ಶತಮಾನದ ಶಿವನ ಪ್ರತಿಮೆಯನ್ನು ಹಿಂದಿರುಗಿಸುವುದಾಗಿ ಘೋಷಿಸಿತ್ತು, ಇದನ್ನು ಫೆಬ್ರವರಿ 1998 ರಲ್ಲಿ ಬರೋಲಿಯ ಘಟೇಶ್ವರ ದೇವಸ್ಥಾನದಿಂದ ಕಳವು ಮಾಡಿದ ಅಪರೂಪದ ಕಲ್ಲಿನ ಪ್ರತಿಮೆಯನ್ನು ಭಾರತದ ಪುರಾತತ್ವ  ಸಮೀಕ್ಷೆ (ಎಎಸ್‌ಐ) ಗೆ ಹಿಂತಿರುಗಿಸಲಾಗಿದೆ. ನಟೇಶ ಮೂರ್ತಿ ಎಂದೂ ಕರೆಯಲ್ಪಡುವ ಶಿವನ ಪ್ರತಿಮೆ ಸುಮಾರು ನಾಲ್ಕು ಅಡಿ ಎತ್ತರವಿದೆ. ಪ್ರತಿಮಾರ ಶೈಲಿಯಲ್ಲಿ ಶಿವನ ಅಪರೂಪದ ಚಿತ್ರಣವಾದ ಜಟಮಕುಟ ಮತ್ತು ತ್ರಿನೇತ್ರದೊಂದಿಗೆ ಚತುರ ಭಂಗಿಯಲ್ಲಿ ಈ ವಿಗ್ರಹವಿದೆ.

Stay up to date on all the latest ರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp