20 ದಿನಗಳಲ್ಲಿ ಭಾರತ-ಚೀನಾ ನಡುವೆ ಗುಂಡಿನ ಚಕಮಕಿಯ 3 ಘಟನೆ ವರದಿ

ಭಾರತ-ಚೀನಾ ಗಡಿಯಲ್ಲಿ ಗುಂಡಿನ ಮೊರೆತ ಕೇಳಿ 45 ವರ್ಷಗಳೇ ಕಳೆದಿದ್ದವು. ಆದರೆ ಈಗ ಗಡಿ ಭಾಗದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಕಳೆದ 20 ದಿನಗಳಲ್ಲಿ ಭಾರತ-ಚೀನಾ ನಡುವೆ ಬರೊಬ್ಬರಿ 3 ಬಾರಿ ಭರ್ಜರಿ ಗುಂಡಿನ ಚಕಮಕಿ ನಡೆದಿದೆ. 
ಭಾರತ ಚೀನಾ
ಭಾರತ ಚೀನಾ

ಭಾರತ-ಚೀನಾ ಗಡಿಯಲ್ಲಿ ಗುಂಡಿನ ಮೊರೆತ ಕೇಳಿ 45 ವರ್ಷಗಳೇ ಕಳೆದಿದ್ದವು. ಆದರೆ ಈಗ ಗಡಿ ಭಾಗದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಕಳೆದ 20 ದಿನಗಳಲ್ಲಿ ಭಾರತ-ಚೀನಾ ನಡುವೆ ಬರೊಬ್ಬರಿ 3 ಬಾರಿ ಭರ್ಜರಿ ಗುಂಡಿನ ಚಕಮಕಿ ನಡೆದಿದೆ. 

ಈಶಾನ್ಯ ಲಡಾಖ್ ನಲ್ಲಿ ಗಡಿ ಸಂಘರ್ಷದ ಭಾಗವಾಗಿ ಈ ಗುಂಡಿನ ಚಕಮಕಿ ನಡೆದಿದೆ. ಮೊದಲ ಗುಂಡಿನ ಚಕಮಕಿ ಪ್ಯಾಂಗಾಂಗ್ ಲೇಕ್ ನ ದಕ್ಷಿಣ ಭಾಗದಲ್ಲಿದ್ದ ಗುಡ್ಡಗಳನ್ನು ವಶಪಡಿಸಿಕೊಳ್ಳಬೇಕಾದರೆ ಆ.29-31 ರ ವರೆಗೆ ನಡೆದಿದೆ. ಈ ವೇಳೆ ಭಾರತೀಯ ಸೇನೆ ಚೀನಾ ಸೇನೆಯು ವಶಪಡಿಸಿಕೊಳ್ಳಬೇಕಿದ್ದ ಪ್ರದೇಶವನ್ನು ಚೀನಾಗಿಂತ ಮುನ್ನವೇ ವಶಪಡಿಸಿಕೊಂಡಿತ್ತು. 

ಎರಡನೆಯ ಬಾರಿಯ ಗುಂಡಿನ ಚಕಮಕಿ ಸೆ.7 ರಂದು ಮುಖ್ಪುರಿ ಗುಡ್ಡವನ್ನು ವಶಪಡಿಸಿಕೊಳ್ಳುವಾಗ ನಡೆದಿದೆ. ಇನ್ನು ಮೂರನೇ ಘಟನೆ ಸೆ.08 ರಂದು ನಡೆದಿದ್ದು ಪ್ಯಾಂಗಾಂಗ್ ಲೇಕ್ ನ ಉತ್ತರ ತೀರದ ಪ್ರದೇಶದಲ್ಲಿ ನಡೆದಿದ್ದು ಕನಿಷ್ಟ 100 ಸುತ್ತುಗಳ ಗುಂಡಿನ ಚಕಮಕಿ ನಡೆದಿದ್ದು ಚೀನಾ ತೀವ್ರವಾಗಿ ಪ್ರತಿಕ್ರಿಯಿಸಿತ್ತು ಎಂದು ತಿಳಿದುಬಂದಿದೆ. 

ಈ ಘಟನೆ ಮಾಸ್ಕೋದಲ್ಲಿ ನಡೆದ ಶಾಂಘೈ ಸಹಕಾರ ಸಭೆಯ ಪಾರ್ಶ್ವದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಚೀನಾ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದಾಗಲೂ ಸಹ ಗುಂಡಿನ ದಾಳಿ ನಡೆದಿತ್ತು ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com