ರಜಪೂತನಾಗಿದ್ದವ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ: ನಟ ಸುಶಾಂತ್ ಸಾವಿನ ಬಗ್ಗೆ ಆರ್‌ಜೆಡಿ ಶಾಸಕ ಹೇಳಿಕೆ!

ಮಹಾರಾಣಾ ಪ್ರತಾಪ್ ಅವರ ಕುಲಕ್ಕೆ ಸೇರಿದವರಾಗಿ ಯಾರೊಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಹಾಗಾಗಿ  ನಟ ಸುಶಾಂತ್ ಸಿಂಗ್ ರಜಪೂತ್ ರಜಪೂತರಾಗಿರಲಿಲ್ಲ ಎಂದು ರಾಷ್ಟ್ರೀಯ ಜನತಾದಳದ ಶಾಸಕ ಅರುಣ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಜಪೂತನಾಗಿದ್ದವ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ: ನಟ ಸುಶಾಂತ್ ಸಾವಿನ ಬಗ್ಗೆ ಆರ್‌ಜೆಡಿ ಶಾಸಕ ಹೇಳಿಕೆ!

ಪಾಟ್ನಾ: ಮಹಾರಾಣಾ ಪ್ರತಾಪ್ ಅವರ ಕುಲಕ್ಕೆ ಸೇರಿದವರಾಗಿ ಯಾರೊಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಹಾಗಾಗಿ  ನಟ ಸುಶಾಂತ್ ಸಿಂಗ್ ರಜಪೂತ್ ರಜಪೂತರಾಗಿರಲಿಲ್ಲ ಎಂದು ರಾಷ್ಟ್ರೀಯ ಜನತಾದಳದ ಶಾಸಕ ಅರುಣ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯಾದವ್ ಅವರ ಈ ಹೇಳಿಕೆಯ ಬಗ್ಗೆ ಬಿಹಾರದ ಜನರು ಮತ್ತು ಸುಶಾಂತ್ ಅವರ ಅಭಿಮಾನಿಗಳ ಕ್ಷಮೆ ಯಾಚಿಸಬೇಕೆಂದು ಜನತಾದಳ-ಯುನೈಟೆಡ್ ಮತ್ತು ಭಾರತೀಯ ಜನತಾ ಪಕ್ಷ ಆರ್ ಜೆಡಿ ನಾಯಕನನ್ನು ಆಗ್ರಹಿಸಿದೆ.

"ಅವರು (ಸುಶಾಂತ್) ರಜಪೂತರಲ್ಲ ಎಂದು ನಾನು ಹೇಳಬಯಸುತ್ತೇನೆ. ಹಾಗೆನ್ನಲು ನನಗೂ ಮನಸ್ಸಿಲ್ಲ, ಆದರೆ ಮಹಾರಾಣಾ ಪ್ರತಾಪ್ ಅವರ ಕುಲಕ್ಕೆ ಸೇರಿದ ರಜಪೂತನು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುವುದಕ್ಕೆ ಸಾಧ್ಯವಿಲ್ಲ"ಯಾದವ್ ಬುಧವಾರ  ಹೇಳಿದ್ದರು. ಅವರು ರಾಜ್ಯದ ಸಹರ್ಸಾದಲ್ಲಿ ಹೊಸದಾಗಿ ನಿರ್ಮಿಸಿದ ರಸ್ತೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

"ನನಗೆ ನೋವು ಇದೆ ... ಸುಶಾಂತ್ ಸಿಂಗ್ ರಜಪೂತ್ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ, ಅವರು ರಜಪೂತರಾಗಿದ್ದರು ಮತ್ತು ಬದಲಾಗಿ ಹೋರಾಡಬೇಕಿತ್ತು ... ರಜಪೂತರು ಸಾಯುವ ಮೊದಲು ಇತರರನ್ನು ಕೊಲ್ಲುತ್ತಾರೆ" ಎಂದು ಅವರು ಹೇಳಿದರು. ಇದೇ ವೇಳೆ ಮಹಾರಾಣಾ ಪ್ರತಾಪ್ ರಜಪೂತರ ಪೂರ್ವಜರು ಮಾತ್ರವಲ್ಲ, ಯಾದವರ ಕುಲದವರೂ ಹೌದು ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್-ನವೆಂಬರ್ ನಲ್ಲಿ ನಡೆಯಲಿರುವ ಚುನಾವಣೆಗೆ ಮುಂಚಿತವಾಗಿ ನಟನ ಸಾವು ರಾಜ್ಯದಲ್ಲಿ ಪ್ರಮುಖ ವಿಷಯವಾಗಿ ಮಾರ್ಪಟ್ಟಿರುವುದರಿಂದ ಈ ಹೇಳಿಕೆ ವ್ಯಾಪಕ ಟೀಕೆಗೆ ಕಾರಣವಾಯಿತು. "ಇಡೀ ರಾಷ್ಟ್ರವನ್ನು ಕಂಗೆಡಿಸಿದ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಗ್ಗೆ ಆರ್ ಜೆಡಿ ಡಿ ಶಾಸಕರು ನೀಡಿದ ಹೇಳಿಕೆಗಿಂತ ಹೆಚ್ಚು ವಿಲಕ್ಷಣ ಮತ್ತು ನಾಚಿಕೆಗೇಡಿನ ಹೇಳಿಕೆ ಇರಲು ಸಾಧ್ಯವಿಲ್ಲ. ಶಾಸಕರು ರಾಜ್ಯದ ಜನ ಹಾಗೂ ಸುಶಾಂತ್ ಅವರ ಅಭಿಮಾನಿಗಳ ಕ್ಷಮೆ ಕೇಳಬೇಕು. " ಜೆಡಿಯು ವಕ್ತಾರ ರಾಜೀವ್ ರಂಜನ್ ಪ್ರಸಾದ್ ಹೇಳಿದ್ದಾರೆ.

ಈ ಹೇಳಿಕೆಯನ್ನು ಖಂಡಿಸಿದ ಬಿಜೆಪಿ ವಕ್ತಾರ ನಿಖಿಲ್ ಆನಂದ್, ಆರ್ ಜೆಡಿ ನಾಯಕರು ಮತ್ತುಕಾರ್ಯಕರ್ತರದು "ಇದು ಮಾಮೂಲಿ ಅಭ್ಯಾಸ" ಹಿರಿಯ ನಾಯಕ ರಘುವಂಶ ಪ್ರಸಾದ್ ಸಿಂಗ್ ಅವರಿಗೆ ಲಾಲು ಪ್ರಸಾದ್ ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಅವರು 'ಏಕ್ ಲೋಟಾ ಪಾನಿ' ಎಂದು ಅವಮಾನಪಡಿಸಿದ್ದು ಇದಕ್ಕೆ ಸಾಕ್ಷಿ ಎಂದರು.

ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಪ್ರಸ್ತುತ ಕೇಂದ್ರೀಯ ತನಿಖಾ ದಳ ಮತ್ತು ಇತರ ಕೇಂದ್ರ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ನಟನ ತಂದೆ ಕೆ ಕೆ ಸಿಂಗ್ ಜೂನ್ 14 ರಂದು ಅವರ ಮಗ ಮುಂಬೈ ನಿವಾಸದಲ್ಲಿ  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಸುಮಾರು 40 ದಿನಗಳ ನಂತರ. ಪಾಟ್ನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಸಲ್ಲಿಸಿದರು, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com