ಅಮರಾವತಿ ಭೂ ಹಗರಣ: ಹೈಕೋರ್ಟ್ ಮಧ್ಯಂತರ ಆದೇಶ ವಿರುದ್ಧ 'ಸುಪ್ರೀಂ' ಮೊರೆ ಹೋಗಲು ಆಂಧ್ರ ಸರ್ಕಾರ ನಿರ್ಧಾರ

ಮಾಜಿ ಅಡ್ವಕೇಟ್ ಜನರಲ್ ದಮ್ಮಲಪಟಿ ಶ್ರೀನಿವಾಸ್ ಮತ್ತು ಇತರ 12 ಮಂದಿ ವಿರುದ್ಧ ಅಮರಾವತಿ ಭೂ ಹಗರಣ ಕೇಸಿನಲ್ಲಿ ಇನ್ನಷ್ಟು ತನಿಖೆ ನಡೆಸುವುದಕ್ಕೆ ತಡೆ ನೀಡುವಂತೆ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶಕ್ಕೆ ವಿರುದ್ಧವಾಗಿ ಆಂಧ್ರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿಜಯವಾಡ:  ಮಾಜಿ ಅಡ್ವಕೇಟ್ ಜನರಲ್ ದಮ್ಮಲಪಟಿ ಶ್ರೀನಿವಾಸ್ ಮತ್ತು ಇತರ 12 ಮಂದಿ ವಿರುದ್ಧ ಅಮರಾವತಿ ಭೂ ಹಗರಣ ಕೇಸಿನಲ್ಲಿ ಇನ್ನಷ್ಟು ತನಿಖೆ ನಡೆಸುವುದಕ್ಕೆ ತಡೆ ನೀಡುವಂತೆ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶಕ್ಕೆ ವಿರುದ್ಧವಾಗಿ ಆಂಧ್ರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದೆ.

ಈ ವಿಷಯವನ್ನು ರಾಜ್ಯ ಸರ್ಕಾರದ ಸಲಹೆಗಾರ ಸಜ್ಜಲ ರಾಮಕೃಷ್ಣ ರೆಡ್ಡಿ ಪ್ರಕಟಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ ದಮ್ಮಲಪತಿ ಶ್ರೀನಿವಾಸ್ ಮತ್ತು ಇತರ 12 ಮಂದಿ ವಿರುದ್ಧ ದಾಖಲಿಸಿದ್ದ ಕೇಸಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮೊನ್ನೆ ಸಾಯಂಕಾಲ ಮಧ್ಯಂತರ ಆದೇಶ ನೀಡಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್ ನಡಿ ಅಮರಾವತಿಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕೇಸು ದಾಖಲಾಗಿತ್ತು.

ಹೈಕೋರ್ಟ್ ನ ಮಧ್ಯಂತರ ಆದೇಶ ದುರದೃಷ್ಟಕರ, ಅಸಹಜವಾದದ್ದು ಮತ್ತು ಅಚ್ಚರಿಯನ್ನುಂಟುಮಾಡಿದೆ ಎಂದು ಹೇಳಿದ ರಾಜ್ಯಸಭೆಯ ಸಲಹೆಗಾರ ಸಜ್ಜಲ ರಾಮಕೃಷ್ಣ ರೆಡ್ಡಿ, ಕಾನೂನು ಜನಸಾಮಾನ್ಯರಿಗೊಂದು, ಪ್ರಭಾವಿ ವ್ಯಕ್ತಿಗಳಿಗೆ ಇನ್ನೊಂದು ಎಂಬ ಭಾವನೆ ಇದರಿಂದ ಬರುತ್ತದೆ. ನಾವು ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗುತ್ತೇವೆ. ಹೈಕೋರ್ಟ್ ಆದೇಶದ ಪ್ರಕಾರವೇ ಹೋದರೆ ಅಮರಾವತಿ ಹಗರಣ ಬಗ್ಗೆ ಯಾರಿಂದಲೂ ಮಾತನಾಡಲು ಸಾಧ್ಯವಾಗುವುದಿಲ್ಲ. ಮಾಧ್ಯಮ, ಕಾರ್ಯಾಂಗ, ಶಾಸಕಾಂಗ ಮತ್ತು ತನಿಖಾ ಸಂಸ್ಥೆಗಳನ್ನು ಜನರು ತಮಾಷೆ ಮಾಡುವ ಪರಿಸ್ಥಿತಿಗೆ ಬರಬಾರದು, ಇದು ಗಂಭೀರವಾದ ವಿಷಯ. ಜನರು, ಬುದ್ಧಿಜೀವಿಗಳು, ಕಾನೂನು ತಜ್ಞರು ಈ ಬಗ್ಗೆ ಮಾತನಾಡಬೇಕು ಎಂದು ಹೇಳಿದರು.

ಇನ್ನು ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿರುವ ವೈಎಸ್ ಆರ್ ಸಿ ಪಕ್ಷದ ಸಂಸದ ಮಿತುನ್ ರೆಡ್ಡಿ, ಅಮರಾವತಿ ಹಗರಣವನ್ನು ಸಿಬಿಐನಿಂದ ತನಿಖೆ ನಡೆಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹೈಕೋರ್ಟ್ ನ ಆದೇಶ ಹಾಸ್ಯಾಸ್ಪದವಾಗಿದೆ ಎಂದ ಅವರು, ಈ ಹಗರಣದಲ್ಲಿ ಮಾಜಿ ಅಡ್ವೊಕೇಟ್ ಜನರಲ್ ಅವರು ಮತ್ತು ನ್ಯಾಯಾಧೀಶರ ಕುಟುಂಬಸ್ಥರು ಇರುವುದರಿಂದ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com