ನಾನು ವೃತ್ತಿಪರ ಬರಹಗಾರನಲ್ಲ...ಆದರೆ ಭಾವನೆಗಳು ಅರ್ಥವಾಗುತ್ತವೆ: ಲೆಟರ್‌ ಟು ಮದರ್‌ ಪುಸ್ತಕದಲ್ಲಿ ಮೋದಿ

"ನಾನು ವೃತ್ತಿಪರ ಬರಹಗಾರನಲ್ಲ...ಆದರೆ, ನನಗೆ ಭಾವನೆಗಳು ಅರ್ಥವಾಗುತ್ತವೆ. ನಾನು ಬರೆಯುತ್ತೇನೆ ಏಕೆಂದರೆ ನಾನು ಭಾವತೀವ್ರತೆಯನ್ನು ಹೊಂದಿದ್ದೇನೆ"...
'ಲೆಟರ್ಸ್‌ ಟು ಮದರ್‌' ಪುಸ್ತಕ
'ಲೆಟರ್ಸ್‌ ಟು ಮದರ್‌' ಪುಸ್ತಕ

ಕೋಲ್ಕತಾ: "ನಾನು ವೃತ್ತಿಪರ ಬರಹಗಾರನಲ್ಲ...ಆದರೆ, ನನಗೆ ಭಾವನೆಗಳು ಅರ್ಥವಾಗುತ್ತವೆ. ನಾನು ಬರೆಯುತ್ತೇನೆ ಏಕೆಂದರೆ ನಾನು ಭಾವತೀವ್ರತೆಯನ್ನು ಹೊಂದಿದ್ದೇನೆ"... ಇದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಲೆಟರ್ಸ್‌ ಟು ಮದರ್‌' ಪುಸ್ತಕದಲ್ಲಿ ಬರೆದಿರುವ ಸಾಲುಗಳು.

ಆ ಪುಸ್ತಕವನ್ನು ಭಾವನಾ ಸೋಮಾಯಾ ಅವರು ಗುಜರಾತಿ ಭಾಷೆಯಿಂದ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ತಮ್ಮ ಪುಸ್ತಕದಲ್ಲಿ ಮೋದಿ, 'ನಾನು ಬರಹಗಾರನಲ್ಲ. ನಮ್ಮಲ್ಲಿ ಅನೇಕರು ಅಲ್ಲ. ಆದರೆ, ಪ್ರತಿಯೊಬ್ಬರೂ ಅಭಿವ್ಯಕ್ತಿ ಸ್ವಾತಂತ್ರ್ಯ ಹೊಂದಿರುತ್ತಾರೆ. ಅದು ನನ್ನ ಮನಸ್ಸಿನಲ್ಲಿ ತುಂಬಿ ತುಳುಕುತ್ತಿದ್ದು, ಹೊರ ಹಾಕಲೇಬೇಕಾದ ನನಗೆ ಕಾಗದ ಮತ್ತು ಪೆನ್ನು ಹಿಡಿಯದೆ ಬೇರೆ ದಾರಿಯೇ ಇರಲಿಲ್ಲ. ಇದು ಬರೆಯಲು ಅಲ್ಲ ಬದಲಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಮತ್ತು ನನ್ನ ಮನಸ್ಸು, ಹೃದಯದಲ್ಲಿ ಏನಾಗುತ್ತಿದೆ ಮತ್ತು ಏಕಾಗುತ್ತಿದೆ ಎಂಬುದನ್ನು ಅರಿಯಲು ಅಕ್ಷರದ ರೂಪದಲ್ಲಿ ತರಲಾಗಿದೆ' ಎಂದು ವಿವರಿಸಿದ್ದಾರೆ.

ಪ್ರಧಾನಿ ಮೋದಿ ಅವರು ದಶಕಗಳ ಹಿಂದೆ ನಿತ್ಯ ಮಲಗುವ ಮುನ್ನ ‘ಜಗತ್‌ ಜನನಿ’ ಹೆಸರಲ್ಲಿ ಮಾತೃ ದೇವತೆಗೆ ಬರೆದ ಪತ್ರಗಳು ಈಗ ಪುಸ್ತಕ ರೂಪದಲ್ಲಿ ಬಿಡುಗಡೆಯಾಗುತ್ತಿದೆ.

ಇನ್ನು ಈ ಪುಸ್ತಕದ ಬಗ್ಗೆ ಪ್ರತಿಕ್ರಿಯಿಸಿರುವ ಮೋದಿ, ನಾನೇನು ಬರಹಗಾರನಲ್ಲ. ಆದರೆ, ಪ್ರತೀ ದಿನವೂ ನಮಗೂ ಕೆಲವೊಂದು ಭಾವನೆಗಳು ಮೂಡುತ್ತವೆ. ಅವುಗಳನ್ನು ಮನಸ್ಸಿನಲ್ಲಿ ತಡೆಹಿಡಿಯಲಾಗದೇ ಇದ್ದಾಗ ಪೆನ್ನು ಮತ್ತು ಪೇಪರ್‌ ತೆಗೆದುಕೊಂಡು ಬರೆಯುವುದು ಬಿಟ್ಟರೆ ಅನ್ಯ ಮಾರ್ಗವಿರಲ್ಲ. ಅಲ್ಲದೆ, ಡೇರಿ ಬರೆಯಲೇಬೇಕು ಎಂದೇನೂ ಇಲ್ಲ. ಮನಸ್ಸು ಮತ್ತು ತಲೆಯಲ್ಲಿ ಏನೆಲ್ಲಾ ಯೋಚನೆಗಳು ಓಡಾಡುತ್ತಿವೆ ಮತ್ತು ಯಾಕೆ ಹೀಗಾಗುತ್ತಿದೆ? ಎಂಬುದರ ಬಗ್ಗೆ ತುಲನೆ ಮಾಡಿಕೊಳ್ಳುವುದು ಮುಖ್ಯ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com