ಮಮತಾ ಬ್ಯಾನರ್ಜಿ ಬಿಜೆಪಿಯ ದೊಡ್ಡ ಏಜೆಂಟ್- ಅಧೀರ್ ರಂಜನ್ ಚೌಧರಿ

ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಬಿಜೆಪಿಯ ದೊಡ್ಡ ಏಜೆಂಟ್ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ ಬಣ್ಣಿಸಿದ್ದಾರೆ.
ಅಧೀರ್ ರಂಜನ್ ಚೌಧರಿ
ಅಧೀರ್ ರಂಜನ್ ಚೌಧರಿ

ನವದೆಹಲಿ: ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಬಿಜೆಪಿಯ ದೊಡ್ಡ ಏಜೆಂಟ್ ಎಂದು ಲೋಕಸಭೆಯಲ್ಲಿನ
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ ಬಣ್ಣಿಸಿದ್ದಾರೆ.

 ಅತ್ಯಂತ ಹಳೆಯ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪದ ಬೆನ್ನಲ್ಲೇ, ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ನಡುವಣ ಸಂಬಂಧದ ಸ್ಪಷ್ಟತೆ ಸಿಕ್ಕಂತಾಗಿದೆ.

ಸಂಸತ್ತಿನಲ್ಲಿ  ಪೌರತ್ವ ತಿದ್ದುಪಡಿ ಕಾಯ್ದೆಗೆ ಮತ ಹಾಕದಂತೆ ಮಮತಾ ಬ್ಯಾನರ್ಜಿ ಸೂಚನೆ ನೀಡಿದ್ದರೆ ಆ ಪಕ್ಷದ ಸದಸ್ಯರು ಅವರ ವಿರುದ್ಧ ಹೋಗುತ್ತಿರಲಿಲ್ಲ. ಮತದಾನದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಬಿಜೆಪಿಯೊಂದಿಗೆ ಕಾಂಗ್ರೆಸ್ ರಹಸ್ಯ ಒಪ್ಪಂದ  ಮಾಡಿಕೊಂಡಿದೆ ಎಂಬ ಟಿಎಂಸಿ ಆರೋಪನ್ನು ನಾನು ಕೇಳಿದ್ದೇನೆ. ಪ್ರಾದೇಶಿಕ ಪಕ್ಷಗಳು ಇನ್ನು ಮುಂದೆ ನಮ್ಮನ್ನು ನಂಬುವುದಿಲ್ಲ. ನಮ್ಮ ವಿರುದ್ಧ ಅಪಪ್ರಚಾರ ಮಾಡುವ ಮೊದಲು ನಿಮ್ಮ ನಾಯಕರು ಏನು ಮಾಡಿದ್ದಾರೆಂದು ನೆನಪಿಸಿಕೊಳ್ಳುವಂತೆ ಮಮತಾ ಬ್ಯಾನರ್ಜಿ ಅವರನ್ನು ಕೇಳುವುದಾಗಿ ಅಧೀರ್ ಚೌದರಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ, ಟಿಎಂಸಿ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲ ಎಂದು ಹೇಳಿದ ಕೂಡಲೇ ಆಡಳಿತರೂಢ ಟಿಎಂಸಿ ಪಕ್ಷ ಈ ಆರೋಪ ಮಾಡಿದೆ ಎಂದು ಚೌದರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com