ಪೂರ್ವ ಲಡಾಕ್ ಸಂಘರ್ಷ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ, ಪರಿಸ್ಥಿತಿಯ ಸಮಗ್ರ ವಿಮರ್ಶೆ

ಚೀನಾ ಸೇನೆಯಿಂದ ಗಡಿ ಉಲ್ಲಂಘನೆಯ ಸತತ ಪ್ರಯತ್ನ ಮತ್ತು ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮಾಡುತ್ತಿರುವ ಪ್ರಚೋದನಕಾರಿ ವರ್ತನೆಗಳ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಸರ್ವ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಮತ್ತು ಅಲ್ಲಿನ ಒಟ್ಟಾರೆ ಪರಿಸ್ಥಿತಿಗಳ ಬಗ್ಗೆ ನಿನ್ನೆ ಕೇಂದ್ರ ಸರ್ಕಾರ ಸವಿಸ್ತಾರವಾಗಿ ಪರಿಶೀಲನೆ ನಡೆಸಿದೆ.
ಶ್ರೀನಗರ-ಲಡಾಕ್ ಹೆದ್ದಾರಿಯಲ್ಲಿ ಭಾರತೀಯ ಯೋಧರು ವಾಹನಗಳಲ್ಲಿ ಸಾಗುತ್ತಿರುವುದು
ಶ್ರೀನಗರ-ಲಡಾಕ್ ಹೆದ್ದಾರಿಯಲ್ಲಿ ಭಾರತೀಯ ಯೋಧರು ವಾಹನಗಳಲ್ಲಿ ಸಾಗುತ್ತಿರುವುದು

ನವದೆಹಲಿ: ಚೀನಾ ಸೇನೆಯಿಂದ ಗಡಿ ಉಲ್ಲಂಘನೆಯ ಸತತ ಪ್ರಯತ್ನ ಮತ್ತು ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮಾಡುತ್ತಿರುವ ಪ್ರಚೋದನಕಾರಿ ವರ್ತನೆಗಳ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಸರ್ವ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಮತ್ತು ಅಲ್ಲಿನ ಒಟ್ಟಾರೆ ಪರಿಸ್ಥಿತಿಗಳ ಬಗ್ಗೆ ನಿನ್ನೆ ಕೇಂದ್ರ ಸರ್ಕಾರ ಸವಿಸ್ತಾರವಾಗಿ ಪರಿಶೀಲನೆ ನಡೆಸಿದೆ.

ಉನ್ನತ ಮಟ್ಟದ ಚೀನಾ ಅಧ್ಯಯನ ಗುಂಪಿನ ಸುಮಾರು 90 ನಿಮಿಷಗಳ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಭಾರತೀಯ ಸೇನೆಯ ಮೂರು ಪಡೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಲಯಗಳು ಸೇರಿದಂತೆ ಸುಮಾರು 3,500 ಕಿಲೋ ಮೀಟರ್ ಉದ್ದದ ಗಡಿ ವಾಸ್ತವ ರೇಖೆಯ ಬಳಿ ಸೇನೆಯ ಕಣ್ಗಾವಲನ್ನು ಹೆಚ್ಚಿಸುವ ಕುರಿತು ಚರ್ಚೆ ನಡೆಸಲಾಯಿತು.

ಲಡಾಕ್ ನ ಪಾಂಗೊಂಗ್ ಲೇಕ್ ನ ಉತ್ತರ ಮತ್ತು ದಕ್ಷಿಣ ತೀರದಲ್ಲಿ ಭಾರತ ಮತ್ತು ಚೀನಾ ಸೇನಾಪಡೆಗಳ ಮಧ್ಯೆ ಹೊಸ ಸಂಘರ್ಷ ನಡೆಯುತ್ತಿದ್ದು ಇದಕ್ಕೆ ಭಾರತೀಯ ಸೇನೆ ಯಾವ ರೀತಿ ಪರಿಣಾಮಕಾರಿಯಾದ ಮಾರ್ಗಗಳನ್ನು ಕಂಡುಕೊಂಡಿದೆ ಎಂದು ಸಭೆಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾಣೆ ವಿವರಿಸಿದ್ದಾರೆ.

ಗಡಿಯಲ್ಲಿನ ಪರಿಸ್ಥಿತಿಯ ಎಲ್ಲಾ ಮಜಲುಗಳನ್ನು ಚೀನಾ ಸ್ಟಡಿ ಗ್ರೂಪ್ ಸಭೆಯಲ್ಲಿ ಪರಾಮರ್ಶೆ ನಡೆಸಲಾಯಿತು. ಪೂರ್ವ ಲಡಾಕ್ ನ ಎಲ್ಲಾ ಫಾರ್ವರ್ಡ್ ಪ್ರದೇಶಗಳಲ್ಲಿ ಮತ್ತು ಅತಿ ಸಾಂದ್ರತೆಯ ವಲಯಗಳಲ್ಲಿ ಮುಂದಿನ ಚಳಿಗಾಲದ ಕ್ಲಿಷ್ಟದ ಪರಿಸ್ಥಿತಿಯಲ್ಲಿ ಪಡೆ ಮತ್ತು ಶಸ್ತ್ರಾಸ್ತ್ರಗಳನ್ನು ನಿರ್ವಹಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕೂಡ ಜನರಲ್ ನಾರವಾಣೆ ವಿವರಿಸಿದರು.

ಮುಂದಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳಲ್ಲಿ ಭಾರತದ ಕಡೆಯಿಂದ ಎದ್ದಿರುವ ಮುಖ್ಯ ಮಾತುಕತೆಗಳ ಬಗ್ಗೆಯೂ ಸಭೆಯಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಯಿತು. ಎಲ್ಲಾ ಸಂಘರ್ಷ ಕೇಂದ್ರಗಳಲ್ಲಿ ಚೀನಾದ ಸೈನ್ಯವನ್ನು ಹಿಂದಿನ ಯಥಾಸ್ಥಿತಿ ಕಾಯ್ದುಕೊಳ್ಳಲು ಮತ್ತು ಸಂಪೂರ್ಣ ವಿಸರ್ಜನೆಗೆ ನಾವು ಒತ್ತಾಯಿಸುತ್ತೇವೆ. ಗಡಿಯಲ್ಲಿ ಶಾಂತಿ ಪುನಃಸ್ಥಾಪಿಸಲು ಇದು ಮೊದಲ ಹೆಜ್ಜೆ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com