ತೀವ್ರ ಆರ್ಥಿಕ ಸಂಕಷ್ಟ: ಕೋವಿಡ್-19 ಔಷಧವೆಂದು ಕುಟುಂಬಸ್ಥರಿಗೆ ವಿಷ ನೀಡಿದ ವ್ಯಕ್ತಿ!

ತೀವ್ರ ಆರ್ಥಿಕ ಸಂಕಷ್ಟದ ಹಿನ್ನಲೆಯಲ್ಲಿ ವ್ಯಕ್ತಿಯೋರ್ವ ತನ್ನದೇ ಕುಟುಂಬದ ಸದಸ್ಯರಿಗೆ ಕೋವಿಡ್-19 ಔಷಧವೆಂದು ಹೇಳಿ ಕುಟುಂಬಸ್ಥರಿಗೆ ವಿಷ ನೀಡಿ ಕೊಲ್ಲಲು ಯತ್ನಿಸಿರುವ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯ್ಪುರ: ತೀವ್ರ ಆರ್ಥಿಕ ಸಂಕಷ್ಟದ ಹಿನ್ನಲೆಯಲ್ಲಿ ವ್ಯಕ್ತಿಯೋರ್ವ ತನ್ನದೇ ಕುಟುಂಬದ ಸದಸ್ಯರಿಗೆ ಕೋವಿಡ್-19 ಔಷಧವೆಂದು ಹೇಳಿ ಕುಟುಂಬಸ್ಥರಿಗೆ ವಿಷ ನೀಡಿ ಕೊಲ್ಲಲು ಯತ್ನಿಸಿರುವ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.

ಛತ್ತೀಸ್ ಘಡ ರಾಯ್ಪುರದ ಖರೋರಾ ಗ್ರಾಮದ ನಿವಾಸಿ 35 ವರ್ಷದ ಪ್ರೇಮ್ ನಾರಾಯಣ್ ದಿವಾಂಗನ್ ಎಂಬಾತ ಕೊರೋನಾ ಔಷಧವೆಂದು ಹೇಳಿ ತನ್ನದೇ ಕುಟುಂಬಸ್ಥರಿಗೆ ವಿಷ ನೀಡಿ ಕೊಲ್ಲಲು ಯತ್ನಿಸಿದ್ದಾನೆ. ಪರಿಣಾಮ ಒಂದೇ ಕುಟುಂಬದ ಐವರು ಗಂಭೀರವಾಗಿದ್ದಾರೆ. ವಿಷ ಸೇವಿಸಿದವರನ್ನು ವ್ಯಕ್ತಿಯ ಪತ್ನಿ  ದಾಮಿನಿ (30 ವರ್ಷ), ಇಬ್ಬರು ಪುತ್ರಿಯರಾದ ಪ್ರಿಯಾ (11 ವರ್ಷ) ಮತ್ತು ಗಾಯತ್ರಿ (10 ವರ್ಷ), ಮಗ ಕುಲೇಶ್ವರ (7 ವರ್ಷ) ಎಂದು ಗುರುತಿಸಲಾಗಿದೆ.

ಸ್ಥಳೀಯರು ನೀಡಿರುವ ಮಾಹಿತಿಯಂತೆ ಪ್ರೇಮ್ ನಾರಾಯಣ್ ದಿವಾಂಗನ್ ಕುಡಿತದ ದಾಸನಾಗಿದ್ದ. ಅಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ. ವಿಪರೀತ ಸಾಲ ಮಾಡಿಕೊಂಡಿದ್ದ ಆತ. ತಿಂಗಳುಗಳ ಹಿಂದಷ್ಟೇ ತನ್ನ ಕೃಷಿ ಭೂಮಿಯನ್ನು ಮಾರಿದ್ದ. ಕೊರೋನಾ ಹಿನ್ನಲೆಯಲ್ಲಿ ಕಳೆದ ಐದು ತಿಂಗಳಿಂದ ಕೆಲಸ  ಕೂಡ ಇಲ್ಲದೆ ಕುಟುಂಬ ನಿರ್ವಹಣೆಗೆ ಹರಸಾಹಸ ಪಡುತ್ತಿದ್ದ ಎಂದು ಹೇಳಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಕೋರೋನಾ ಸೋಂಕು ಬಾರದಂತೆ ತಡೆಯಲು ಔಷಧಿ ತಂದಿದ್ದೇನೆ ಎಂದು ಹೇಳಿದ ಪ್ರೇಮ್ ನಾರಾಯಣ್ ಅದನ್ನು ಪಾನೀಯದೊಳಗೆ ಮಿಶ್ರಣ ಮಾಡಿ ಕುಟುಂಬಸ್ಥರಿಗೆ ನೀಡಿದ್ದ. ಬಳಿಕ ಆತ ಕೂಡ  ಅದೇ ವಿಷವನ್ನು ಸೇವಿಸಿದ್ದ. ಅದನ್ನು ಸೇವಿಸಿದ ಎಲ್ಲರೂ ಅನಾರೋಗ್ಯಕ್ಕೀಡಾಗಿದ್ದಾರೆ. 

ಇದೀಗ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com